ಬ್ರೇಕಿಂಗ್ ನ್ಯೂಸ್
05-08-20 06:23 pm Headline Karnataka News Network ದೇಶ - ವಿದೇಶ
ಮುಂಬೈ, ಆಗಸ್ಟ್ 5: ಮುಂಬೈ ಮಹಾನಗರ ಭಾರೀ ಮಳೆಗೆ ತತ್ತರಿಸಿದೆ. ಮಹಾರಾಷ್ಟ್ರ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಮುಂಬೈ ಮತ್ತು ಪುಣೆ ಮಳೆ, ಬಿರುಗಾಳಿಗೆ ಅಕ್ಷರಶಃ ನಲುಗಿದೆ.
2005 ರ ಬಳಿಕ ಇದೇ ಮೊದಲ ಬಾರಿಗೆ ಈ ಪರಿ ಮಳೆಯಾಗುತ್ತಿದೆ ಎನ್ನಲಾಗುತ್ತಿದೆ. ಇಂದು ರಾತ್ರಿ ಇನ್ನಷ್ಟು ಮಳೆ ಮತ್ತು ಬಿರುಗಾಳಿ ಎದುರಾಗುವ ಬಗ್ಗೆ ಸೂಚನೆ ನೀಡಲಾಗಿದೆ. ಗಂಟೆಗೆ 107 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಅಲ್ಲದೆ, ಗಂಟೆಗೆ ಮೂರರಿಂದ ನಾಲ್ಕು ಸೆಂಟಿ ಮೀಟರಿನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಯಾರು ಕೂಡ ಮನೆಯಿಂದ ಹೊರಬರಬೇಡಿ ಎಂದು ಮುಂಬೈ ಪೊಲೀಸ್ ಜನರಲ್ಲಿ ಮನವಿ ಮಾಡಿದೆ.



ಮುಂಬೈ ಮಹಾನಗರದ ನರನಾಡಿಯಂತಿದ್ದ ರೈಲು ಯಾನವನ್ನು ರದ್ದು ಪಡಿಸಲಾಗಿದ್ದರೆ, ಬಸ್, ವಿಮಾನ ಸಂಚಾರವೂ ಸ್ತಬ್ಧವಾಗಿದೆ. ಮುಂಬೈ ಏರ್ಪೋರ್ಟ್ ನಲ್ಲಿ ನಿಲ್ಲಿಸಲಾಗಿದ್ದ ಮೂರು ಕ್ರೇನ್ ಗಳು ಬಿರುಗಾಳಿಗೆ ಉರುಳಿ ಬಿದ್ದಿದ್ದು ಸಾವು ನೋವಿನ ಬಗ್ಗೆ ತಿಳಿದುಬಂದಿಲ್ಲ. ಇನ್ನು ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಆವೃತ ಆಗಿದ್ದು ಸಂತ್ರಸ್ತರ ರಕ್ಷಣೆಗೆ ಎನ್ ಡಿ ಆರ್ ಎಫ್ ಮುಂದಾಗಿದೆ.

ಇದೇ ವೇಳೆ, ಮುಂಬೈನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪ್ರಧಾನಿ ಮೋದಿ, ಸಿಎಂ ಉದ್ಧವ್ ಠಾಕ್ರೆಗೆ ಕರೆ ಮಾಡಿದ್ದಾರೆ. ರಕ್ಷಣಾ ಪಡೆ ಸನ್ನದ್ದ ಇರಿಸಲು ಸೂಚಿಸಿದ್ದು ಹೆಚ್ಚಿನ ನೆರವಿಗೆ ಸಿದ್ಧ ಇರುವುದಾಗಿ ಮೋದಿ ಹೇಳಿದ್ದಾರೆ.
ಮಹಾನಗರ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದೇ ವೇಳೆ 35 ವರ್ಷದ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಹಿಡಿದು ರಸ್ತೆ ದಾಟುತ್ತಿದ್ದಾಗ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ರಾತ್ರಿ ವೇಳೆ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಕಾರಣ ಯಾರೂ ಮನೆಯಿಂದ ಹೊರಬರದಂತೆ ಸಚಿವ ಆದಿತ್ಯ ಠಾಕ್ರೆ ಮನವಿ ಮಾಡಿದ್ದಾರೆ. ವಿಶೇಷವಾಗಿ ಮಾಧ್ಯಮ ಮಂದಿಯೂ ತಮ್ಮ ಕ್ಷೇಮವನ್ನು ನೋಡಿಕೊಂಡು ಮುಂದುವರೆಯಿರಿ. ಅಪಾಯ ಇರುವ ಕಡೆ ತೆರಳದಿರಿ ಎಂದು ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ. ಮುನ್ಸೂಚನೆ ಪ್ರಕಾರ, ಇಂದು ರಾತ್ರಿಯಿಂದ ಬೆಳಗ್ಗಿನ ವರೆಗೆ ಮುಂಬೈನ ಜನ ಕಂಡು ಕೇಳರಿಯದ ರೀತಿ ಮಳೆಯಾಗಲಿದೆ ಎನ್ನಲಾಗ್ತಿದೆ. ಸೋಮವಾರ ಬೆಳಗ್ಗಿನಿಂದ ದಿಢೀರ್ ಆಗಿ ಮಳೆ ಸುರಿಯತೊಡಗಿದ್ದು ಚಂಡಮಾರುತ ಅಪ್ಪಳಿಸಿದ ರೀತಿ ಮಳೆ ಗಾಳಿ ಮುಂಬೈಗೆ ಮುಂಬೈಯನ್ನೇ ತತ್ತರಿಸುವಂತೆ ಮಾಡಿದೆ.. ತುರ್ತು ಅಗತ್ಯಕ್ಕಾಗಿ ಎನ್ ಡಿಆರ್ ಎಫ್ ತಂಡಗಳನ್ನು ಆಸುಪಾಸಿನ ರಾಯಗಢ, ಸಾಂಗ್ಲಿ , ಸೋಲಾಪುರ ಹೀಗೆ ಅಲ್ಲಲ್ಲಿ ಹೆಚ್ಚುವರಿ ಆಗಿ ನಿಯೋಜನೆ ಮಾಡಲಾಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am