ಬ್ರೇಕಿಂಗ್ ನ್ಯೂಸ್
27-04-23 04:05 pm HK News Desk ದೇಶ - ವಿದೇಶ
ಗದಗ, ಏಪ್ರಿಲ್ 26: ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಅಂತಾ ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗಲ್ಲ. ಗುಜರಾತಿನವರು ಹೇಗೆ ಇಲ್ಲಿನ ಮಣ್ಣಿನ ಮಕ್ಕಳ ಬಳಿ ನಮಗೆ ಓಟು ಕೊಡಿ ಅಂತಾ ಕೇಳುತ್ತಾರೆ. ನಾವು ಕರ್ನಾಟಕದ ಮಣ್ಣಿನ ಮಕ್ಕಳು ನಮಗೂ ಕನ್ನಡ ಅಭಿಮಾನ ಇದೆ. ಯಾವನು ಗುಜರಾತ್‌ನಿಂದ ಬರಲಿ, ಅಹ್ಮದಾಬಾದ್‌ನಿಂದ ಬರಲಿ ಯಾರಿಗೂ ಬಗ್ಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ದೇಶದ ಪ್ರಧಾನಿಯಾಗಿ ಹಳ್ಳಿ, ಹಳ್ಳಿ, ತಾಲೂಕು ಅಡ್ಡಾಡ್ಡುತ್ತೀದ್ದೀರಾ, ಮೋದಿ ಮುಖ ನೋಡಿ ಮತ ಕೊಡಿ ಅಂತಾ ಬಿಜೆಪಿಯವರು ಕೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ, ಕಾರ್ಪೊರೇಷನ್ ಇಲೆಕ್ಷನ್‌ನಲ್ಲಿಯೂ ಸಹ ಮೋದಿ ನೋಡಿ ಮತ ಕೊಡಿ ಅಂತಾ ಹೇಳುತ್ತಾರೆ. ಹಾಗಾದರೆ ನಿಮ್ಮದು ಎಷ್ಟು ಮುಖ ಇದೆ. ಇಂತಹ ಆಸೆಬುರುಕರಿಗೆ ಕುರ್ಚಿಗಾಗಿ ವ್ಯಾಮೋಹ. ಯಾವುದಾದರೂ ಒಂದು ಖುರ್ಚಿ ಖಾಲಿ ಇದ್ದರೆ ಅವರೇ ಬಂದು ಕೂರುತ್ತಾರೆ ಎಂದರು.
ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇವೆ ಅಂದರು, ಈಗ ಕಪ್ಪು ಹಣ ಅದಾನಿ ಬಳಿ ಇಟ್ಟಿದ್ದಾರೇನು? ಯುವಕರಿಗೆ ನೌಕರಿ ಕೊಡುತ್ತೇವೆ ಎಂದರು. 9 ವರ್ಷದಿಂದ ನೀವು 18 ಕೋಟಿ ಜನರಿಗೆ ನೌಕರಿ ಕೊಡಬಹುದಿತ್ತು. ಬರೀ ಸುಳ್ಳು ಹೇಳಿರುವುದು ಜನರಿಗೆ ಗೊತ್ತಾಗಿದೆ. 30 ಲಕ್ಷ ಸರ್ಕಾರಿ ನೌಕರಿ ಖಾಲಿ ಇವೆ. ಅದನ್ನಾದರೂ ತುಂಬಿ. ಕರ್ನಾಟಕದಲ್ಲಿ ನೌಕರಿ ಖಾಲಿ ಇವೆ. ಇಲ್ಲಿ ಬೊಮ್ಮಾಯಿನೂ ತುಂಬ್ತಿಲ್ಲ, ಅಲ್ಲಿ ಮೋದಿನೂ ತುಂಬ್ತಿಲ್ಲ ಎಂದು ಕಿಡಿಕಾರಿದರು.
#KarnatakaAssemblyElections2023 | PM Modi is like a 'poisonous snake', you might think it’s poison or not. If you lick it, you’re dead...: Congress chief Mallikarjun Kharge in Kalaburagi pic.twitter.com/Bqi7zVFnO9
— ANI (@ANI) April 27, 2023
Congress president Mallikarjun Kharge on Thursday said that PM Modi is like a 'poisonous snake', adding that if people 'lick it', they would die. He was speaking in Kalaburagi, his constituency in the poll-bound state of Karnataka. The Congress has recently increased its attack on the incumbent BJP government, going to the extent of filing an official complaint over Amit Shah's remarks that there would be riots in the state if Congress came to power.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm