ಬ್ರೇಕಿಂಗ್ ನ್ಯೂಸ್
07-04-23 10:51 pm HK News Desk ದೇಶ - ವಿದೇಶ
ಬೆಂಗಳೂರು, ಎ.7: ಪಾಕಿಸ್ತಾನ ಮೂಲದ ತಂದೆ ಮತ್ತು ಭಾರತ ಮೂಲದ ತಾಯಿಗೆ ದುಬೈನಲ್ಲಿ ಇಬ್ಬರು ಮಕ್ಕಳು ಜನಿಸಿದ್ದರು. ತಂದೆಯ ಪೌರತ್ವ ಆಧರಿಸಿ ಮಕ್ಕಳಿಗೆ ಪಾಕಿಸ್ತಾನದ ಪ್ರಜೆಯೆಂದೇ ದುಬೈನಲ್ಲಿ ಗುರುತಿಸಲಾಗಿತ್ತು. ಈ ನಡುವೆ, ಆ ಮಹಿಳೆ ಗಂಡನನ್ನು ತ್ಯಜಿಸಿ ಮಕ್ಕಳೊಂದಿಗೆ ತಾಯ್ನಾಡು ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಈಗ ಮಕ್ಕಳ ಪೌರತ್ವ ಬದಲಾಯಿಸುವುದು ಆಕೆಯ ಚಿಂತೆಗೆ ಕಾರಣವಾಗಿದೆ.
ಈ ಬಗ್ಗೆ ಮಕ್ಕಳ ಪೌರತ್ವ ಕೋರಿ ಕೇಂದ್ರ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ತಾಯಿ ಅಮೀನಾಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಪೌರತ್ವ ನೀಡುವಂತೆ ಆದೇಶ ಕೋರಿ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ತಾಯಿಗೆ ಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದೆ. ಪಾಕಿಸ್ತಾನದ ಕಾನೂನು ಪ್ರಕಾರ, ಅಪ್ರಾಪ್ತ ಮಕ್ಕಳಿಗೆ 21 ವರ್ಷಕ್ಕೆ ಮೊದಲೇ ಭಾರತದ ಪೌರತ್ವ ನೀಡಲು ನಿರ್ದೇಶನ ನೀಡಲಾಗದು ಎಂದು ಹೈಕೋರ್ಟ್ ಹೇಳಿದ್ದು ತಾಯಿಯನ್ನು ಪೀಕಲಾಟಕ್ಕೆ ಸಿಲುಕಿಸಿದೆ.
ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಮಕ್ಕಳ ಪರವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿದೆ. ಪಾಕಿಸ್ತಾನದ ಪೌರತ್ವ ತ್ಯಜಿಸಲು 21 ವರ್ಷ ಆಗಬೇಕೆಂದು ಆ ದೇಶವೇ ತಿಳಿಸಿರುವಾಗ, ಮತ್ತೊಂದು ದೇಶ ಅಪ್ರಾಪ್ತರಿಗೆ ಪೌರತ್ವ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೆ, ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಭಾರತ ಮೂಲದ ಅಮೀನಾ ಅವರು ದುಬೈನಲ್ಲಿರುವ ಪಾಕಿಸ್ತಾನದ ಪ್ರಜೆ ಅಸ್ಸಾದ್ ಮಲ್ಲಿಕ್ ಎಂಬವರನ್ನು 2002ರಲ್ಲಿ ಷರಿಯಾ ಕಾನೂನು ಪ್ರಕಾರ ಮದುವೆಯಾಗಿದ್ದರು. ದಂಪತಿಗೆ 2004 ಮತ್ತು 2008ರಲ್ಲಿ ಇಬ್ಬರು ಮಕ್ಕಳು ದುಬೈನಲ್ಲಿ ಜನಿಸಿದ್ದರು. ಆನಂತರ, ಈ ದಂಪತಿ ದುಬೈ ಕೋರ್ಟ್ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದರು. ಮಕ್ಕಳ ಮೇಲಿನ ಹಕ್ಕನ್ನು ತಾಯಿ ಅಮೀನಾಗೆ ಪಡೆದಿದ್ದರು.
ಅಮೀನಾ ದುಬೈನಲ್ಲಿ ಜೀವನ ನಡೆಸುವುದಕ್ಕೆ ಸಾಧ್ಯವಾಗದ ಕಾರಣ ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದ ತನ್ನ ಪೋಷಕರ ಮನೆಗೆ 2021ರಲ್ಲಿ ಹಿಂದಿರುಗಲು ಮುಂದಾಗಿದ್ದರು. ಮಕ್ಕಳ ಪಾಸ್ಪೋರ್ಟ್ ನಲ್ಲಿ ಪಾಕಿಸ್ತಾನಿ ಪ್ರಜೆಗಳು ಎಂದಿದ್ದ ಕಾರಣ ಮಕ್ಕಳನ್ನು ಭಾರತಕ್ಕೆ ಕರೆತರಲು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅವಕಾಶ ಕೋರಿದ್ದರು. ಈ ವೇಳೆ, ಕಚೇರಿ ಅಧಿಕಾರಿಗಳು ಪಾಕಿಸ್ತಾನದ ಪಾಸ್ಪೋರ್ಟ್ ಹಿಂದಿರುಗಿಸಿದ ಬಳಿಕವಷ್ಟೇ ಪೌರತ್ವದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕೆಂಬ ಷರತ್ತು ವಿಧಿಸಿ ಮಾನವೀಯತೆ ನೆಲೆಯಲ್ಲಿ ಭಾರತ ಪ್ರವೇಶಕ್ಕೆ ತಾತ್ಕಾಲಿಕ ಪಾಸ್ಪೋರ್ಟ್ ನೀಡಿದ್ದರು.
ಆದರೆ ದುಬೈನ ಪಾಕಿಸ್ತಾನದ ರಾಯಭಾರಿ ಕಚೇರಿ ಅಧಿಕಾರಿಗಳು, ಪಾಕಿಸ್ತಾನ ಪೌರತ್ವ ಕಾಯಿದೆ ಪ್ರಕಾರ ಪೌರತ್ವ ತ್ಯಜಿಸಬೇಕಾದರೆ 21 ವರ್ಷ ವಯಸ್ಸಾಗಬೇಕು. ಅಲ್ಲಿ ವರೆಗೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದರು. ಪಾಕಿಸ್ತಾನದ ಪೌರತ್ವ ಕಗ್ಗಂಟಿನಿಂದಾಗಿ ತಾಯಿ ಮಕ್ಕಳು ಪರದಾಟ ನಡೆಸುತ್ತಿದ್ದಾರೆ
Two minor Pakistani nationals, born to a Pakistani father and an Indian mother in Dubai, will have to wait till they complete 21 years of age to apply for Indian citizenship as the High Court of Karnataka has said that it cannot direct authorities to grant citizenship to them when the Pakistani law does not permit its citizens to give up their citizenship till they turn 21.
10-10-25 12:06 pm
Bangalore Correspondent
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
10-10-25 04:18 pm
Mangalore Correspondent
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm