ಬ್ರೇಕಿಂಗ್ ನ್ಯೂಸ್
25-02-23 03:26 pm HK News Desk ದೇಶ - ವಿದೇಶ
ರಾಯಪುರ, ಫೆ.25: ಛತ್ತೀಸಗಡ ರಾಜಧಾನಿ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾ ಅಧಿವೇಶನ ಸಭೆಯಲ್ಲಿ ಗಾಂಧಿ ಕುಟುಂಬ ಹಾಗೂ ಇತರೆ ಹಿರಿಯ ನಾಯಕರಿಗೆ ಅದ್ಧೂರಿಯಾದ ಗುಲಾಬಿ ಕಾರ್ಪೆಟ್ ಸ್ವಾಗತ ನೀಡಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಛತ್ತೀಸಗಡಕ್ಕೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕೆಂಪು ಗುಲಾಬಿ ಹೂವುಗಳ ದಪ್ಪನೆಯ ಹಾಸು ನಿರ್ಮಿಸಲಾಗಿತ್ತು. ಅದರ ಎರಡೂ ಬದಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಪಕ್ಷದ ಬಾವುಟಗಳೊಂದಿಗೆ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್ ಆಗಿದೆ.
6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳನ್ನು ಸುಮಾರು ಎರಡು ಕಿಮೀವರೆಗೂ ರಸ್ತೆಯನ್ನು ಅಲಂಕರಿಸಲು ಬಳಸಲಾಗಿತ್ತು. ಈ ಮಾರ್ಗಗಳ ಉದ್ದಕ್ಕೂ, ವರ್ಣರಂಜಿತ ಸಾಂಪ್ರದಾಯಿಕ ದಿರಿಸುಗಳನ್ನು ತೊಟ್ಟ ಜಾನಪದ ಕಲಾವಿದರು ತಮ್ಮ ಕಲಾವಂತಿಕೆ ಪ್ರದರ್ಶಿಸುವುದು ಕಂಡುಬಂತು.
"ರಸ್ತೆಯನ್ನು ಅಲಂಕರಿಸಲು 6 ಸಾವಿರ ಕೆಜಿಗೂ ಹೆಚ್ಚು ತೂಕದ ಹೂವುಗಳನ್ನು ಉಪಯೋಗಿಸಲಾಗಿದೆ. ನಮ್ಮ ಹಿರಿಯ ನಾಯಕರನ್ನು ಸ್ವಾಗತಿಸಲು ನಾನು ಯಾವಾಗಲೂ ಹೊಸತನ್ನು ಏನಾದರೂ ಪ್ರಯತ್ನಿಸುತ್ತಿರುತ್ತೇನೆ" ಎಂದು ಈ ಗುಲಾಬಿ ಹೂವಿನ ಕಾರ್ಪೆಟ್ ಹಿಂದಿನ ರೂವಾರಿ, ರಾಯಪುರ ಮೇಯರ್ ಐಜಾಜ್ ಧೇಬರ್ ತಿಳಿಸಿದ್ದಾರೆ.
"ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ಅಧಿವೇಶನ ನಡೆಯುವ ಸ್ಥಳದವರೆಗಿನ ಮಾರ್ಗದ ಅನೇಕ ಸ್ಥಳಗಳಲ್ಲಿ ವೇದಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಪಕ್ಷದ ಬೆಂಬಲಿಗರು ಕೂಡ ಅವರ ಮೇಲೆ ಗುಲಾಬಿ ಹೂವಿನ ಪಕಳೆಗಳನ್ನು ಸುರಿಸಿ ಸಂಭ್ರಮದಿಂದ ಸ್ವಾಗತಿಸಿದರು" ಎಂದು ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣದಿಂದ ಅಧಿವೇಶನ ನಡೆಯುವ ಸ್ಥಳದವರೆಗೂ ಹಿರಿಯ ಕಾಂಗ್ರೆಸ್ ನಾಯಕರ ವರ್ಣರಂಜಿತ ಪೋಸ್ಟರ್ಗಳು ಮತ್ತು ಬೃಹತ್ ಹೋರ್ಡಿಂಗ್ಗಳನ್ನು ಅಳವಡಿಸಲಾಗಿದೆ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಪಕ್ಷದ ನಾಯಕರು ಹೇಳಿದ ವಿವಿಧ ಸಂದೇಶಗಳನ್ನು ಹೋರ್ಡಿಂಗ್ಗಳಲ್ಲಿ ಬರೆಯಲಾಗಿದೆ.
ಶನಿವಾರ ಬೆಳಿಗ್ಗೆ 8.30ರ ವೇಳೆಗೆ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಛತ್ತೀಸಗಡ ಸಿಎಂ ಭೂಪೇಶ್ ಬಾಘೇಲ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಮರ್ಕಾಮ್ ಮತ್ತು ಇತರೆ ಪಕ್ಷದ ನಾಯಕರು ಸ್ವಾಗತಿಸಿದರು. ಇಂತಹ ಭವ್ಯ ಸ್ವಾಗತ ಕಂಡು ಪುಳಕಿತರಾಗಿರುವುದಾಗಿ ಪ್ರಿಯಾಂಕಾ ಗಾಂಧಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಶುಕ್ರವಾರ ಆರಂಭವಾದ ಮೂರು ದಿನಗಳ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಶುಕ್ರವಾರವೇ ರಾಯಪುರಕ್ಕೆ ಆಗಮಿಸಿದ್ದರು.
#WATCH | Chhattisgarh: Flower petals were laid on the streets to welcome Congress general secretary Priyanka Gandhi Vadra and other Congress leaders in Raipur for the 85th Plenary Session of the party. pic.twitter.com/Z4hozwKDl8
— ANI MP/CG/Rajasthan (@ANI_MP_CG_RJ) February 25, 2023
Congress workers laid flower petals on the street to welcome party general secretary Priyanka Gandhi and other leaders in Raipur on Saturday for the 85th plenary session.Congress general secretary Priyanka Gandhi arrived in Raipur on Saturday to attend the 85th plenary session of the party. Chhattisgarh Chief Minister Bhupesh Baghel received Priyanka Gandhi at the airport.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm