ಬ್ರೇಕಿಂಗ್ ನ್ಯೂಸ್
09-02-23 06:34 pm HK News Desk ದೇಶ - ವಿದೇಶ
ಟರ್ಕಿ, ಫೆ.9: ಕಂಡು ಕೇಳರಿಯದ ಭೂಕಂಪಕ್ಕೆ ಟರ್ಕಿ ಸಿರಿಯಾ ದೇಶಗಳು ಸ್ಮಶಾನವಾಗಿವೆ. ಸಾವಿನ ಸಂಖ್ಯೆ ರಣಕೇಕೆ ಹಾಕುತ್ತಿದೆ. ಶತಮಾನದ ಭೂಕಂಪ ಕಂಡು ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಆತಂಕದ ವಿಷಯ ಅಂದ್ರೆ ಟರ್ಕಿಯಲ್ಲಿನ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಭಾರತಕ್ಕೂ ಎಚ್ಚರಿಕೆ ಕೊಟ್ಟಿದ್ದಾನೆ.
ಟರ್ಕಿ ಸಿರಿಯಾದಲ್ಲಿ ಶತಮಾನದ ಭೂಕಂಪ ಮರಣ ಮೃದಂಗ ಬಾರಿಸುತ್ತಿದೆ. ಸಾವು ರಣಕೇಕೆ ಹಾಕುತ್ತಿದೆ. ಕ್ಷಣ ಕ್ಷಣಕ್ಕೂ ಸಾನಿನ ಸಂಖ್ಯೆ ಏರಿಕೆ ಆಗುತ್ತಲ್ಲೇ ಸಾಗುತ್ತಿದೆ. 15 ಸಾವಿರ ಗಡಿ ದಾಟಿ ಸಾವಿನ ಸಂಖ್ಯೆ ಮುನ್ನುಗ್ತಿದೆ. ಎಲ್ಲೆಲ್ಲೂ ಸಾವಿನ ಆಕ್ರಂದನ ಮುಗಿಲು ಮುಟ್ಟಿದೆ.
ಫ್ರಾಂಕ್ ಹೂಗರ್ಬೀಟ್ಸ್ ಹೇಳಿದಂತೆ ಟರ್ಕಿ ಹಾಗೂ ಸಿರಿಯಾ 7.5ಕ್ಕೂ ಹೆಚ್ಚು ತೀವ್ರತೆಯ ವಿನಾಶಕಾರಿ ಭೂಕಂಪಕ್ಕೆ ತುತ್ತಾಗಿದೆ. ಅಚ್ಚರಿ ಎಂಬಂತೆ ಫ್ರಾಂಕ್ ಹೂಗರ್ಬೀಟ್ಸ್ ನುಡಿದ ಆ ಭವಿಷ್ಯ ನಿಜವಾಗಿದೆ. ಆತಂಕದ ವಿಷಯ ಇದೇ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್, ಭಾರತಕ್ಕೂ ಎಚ್ಚರಿಕೆಯ ಸಂದೇಶವನ್ನ ಕೊಟ್ಟಿದ್ದಾನೆ. ಟರ್ಕಿ, ಸಿರಿಯಾದಂತೆ ಭಾರತದಲ್ಲೂ ಭೂಕಂಪ ಅಪ್ಪಳಿಸುವ ಭವಿಷ್ಯ ನುಡಿದಿದ್ದಾನೆ.
ಭಾರತಕ್ಕೂ ಭೂಕಂಪದ ಎಚ್ಚರಿಕೆ?
ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ಭೂಕಂಪ ಪ್ರಾರಂಭವಾಗುತ್ತೆ. ಬಳಿಕ ಆ ಭೂಕಂಪದ ಚಟಿವಟಿಕೆ ಪಾಕಿಸ್ತಾನ ಹಾಗೂ ಭಾರತವನ್ನು ದಾಟಿಲಿದೆ. ಬಳಿಕ ಅದು ಹಿಂದೂ ಮಹಾಸಾಗರದಲ್ಲಿ ಕೊನೆಗೊಳ್ಳುತ್ತೆ. ಇಲ್ಲಿನ ವಾತಾವರಣದ ಏರಿಳಿತಗಳನ್ನ ನೋಡಿದ್ರೆ, ಈ ಮೂರು ಪ್ರದೇಶಗಳು ದೊಡ್ಡ ಭೂಕಂಪ ಸಂಭವಿಸುವ ಮುಂದಿನ ಸರದಿಯಲ್ಲಿವೆ. ಆದರೆ ನೆನಪಿರಲಿ, ಇದು ಕೇವಲ ಅಂದಾಜು ಮಾತ್ರ, ಎಲ್ಲಾ ದೊಡ್ಡ ಭೂಕಂಪಗಳು ವಾತಾವರಣದಲ್ಲಿ ತಮ್ಮ ಹೆಜ್ಜೆಗುರುತನ್ನು ಬಿಟ್ಟು ಕೊಡುವುದಿಲ್ಲ. ಇದು ಕೇವಲ ಒಂದು ಅಂದಾಜು ಅಷ್ಟೇ. ಕಾರಣ ಎಲ್ಲಾ ಭೂಕಂಪಗಳನ್ನ ನಾವು ವಾಯುಮಂಡಲದ ಏರಿಳಿತಗಳಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ ಅಂತಾ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್ ತಿಳಿಸಿದ್ದಾರೆ.
ಡಚ್ ಸಂಶೋಧಕಮ ಈ ಭವಿಷ್ಯ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಹಾಗೂ ಭಾರತದಲ್ಲಿ ಹೊಸ ಆತಂಕವನ್ನ ಸೃಷ್ಟಿಸಿದೆ. ಭಾರತಕ್ಕೂ ಟರ್ಕಿಯಂಥ ವಿನಾಶಕಾರಿ ಭೂಕಂಪ ಅಪ್ಪಳಿಸುತ್ತಾ ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ ಭಯಪಡುವ ಅವಶ್ಯಕತೆ ಇಲ್ಲ ಕಾರಣ. ಡಚ್ ಸಂಶೋಧಕನ ಹೇಳಿದಂತೆ ಇದು ಕೇವಲ ಅಂದಾಜು ಅಷ್ಟೇ.
Dutch researcher Frank Hoogerbeets, who predicted the earthquake in turkey, syria, and lebanon 3 days before its arrival, has said that an earthquake will also occur in India. Netherlands-based researcher Frank Hoogerbeets posted on his twitter page that a magnitude 7.8 earthquake is likely to occur in turkey and syria on the 3rd. Similarly, at 4.10 am last Monday, the epicenter was 33km from the town of Gaziantep on the Turkey-Syria border, followed by aftershocks. It has turned both countries upside down.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm