ಬ್ರೇಕಿಂಗ್ ನ್ಯೂಸ್
29-12-22 01:08 pm HK News Desk ದೇಶ - ವಿದೇಶ
ನ್ಯೂಯಾರ್ಕ್, ಡಿ.29: ಅಮೆರಿಕದಲ್ಲಿ ಮಾರಣಾಂತಿಕ ಹಿಮಗಾಳಿಯಿಂದ ಲಕ್ಷಾಂತರ ಜನರು ತೀವ್ರ ಚಳಿಯನ್ನು ಎದುರಿಸುತ್ತಿದ್ದಾರೆ. ದೇಶದ ಹಲವೆಡೆ ತೀವ್ರ ಚಳಿಗಾಳಿ ಮುಂದುವರೆದಿದೆ.
ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಜನರು ಭಾರೀ ಹಿಮಪಾತವನ್ನು ಎದುರಿಸುತ್ತಿದ್ದಾರೆ ಮತ್ತು ಈ ಪರಿಸ್ಥಿತಿಯಿಂದಾಗಿ ವಿಮಾನಗಳನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ರಸ್ತೆ ಪ್ರಯಾಣವನ್ನೂ ನಿರ್ಬಂಧಿಸಲಾಗಿದೆ. ಈ ಹಿಮಪಾತದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದವರಿಗೂ ಒಂದು ಬಾರಿ ಚಳಿ ಹಿಡಿಯುವಂತಿದೆ.



ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ 27 ಜನರು ಸಾವನ್ನಪ್ಪಿದ ನಂತರ, ಚಂಡಮಾರುತದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡವರ ಸಂಖ್ಯೆ ಯುಎಸ್‌ನಲ್ಲಿ 48 ಕ್ಕೆ ಏರಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಾವಿರಾರು ಮನೆಗಳು ಮತ್ತು ಲಾರ್ಖಾನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ಮನೆಗಳು ಮತ್ತು ಕಾರುಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿವೆ.




ಪೂರ್ವದ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್‌ಮಸ್ ಅನ್ನು ವಿದ್ಯುತ್ ಇಲ್ಲದೆ ಆಚರಿಸಿದರು.



ವಿಪರೀತ ಹಿಮಪಾತ, ಜೋರಾದ ಚಳಿ ಗಾಳಿ, ಕ್ಷೀಣಿಸುತ್ತಿರುವ ತಾಪಮಾನದ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಸುಮಾರು 15,000 ವಿಮಾನಗಳ ಸಂಚಾರ ರದ್ದುಗೊಂಡಿದೆ. ಸೋಮವಾರ ಒಂದೇ ದಿನ 3,800 ವಿಮಾನಗಳ ಹಾರಾಟ ರದ್ದಾಗಿದೆ. ಹಿಮದ ಬಿರುಗಾಳಿ ತೀವ್ರವಾಗಲು ಹವಾಮಾನ ಬದಲಾವಣೆ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
One of the worst weather disasters in the history of the United States of America has claimed more lives in the last 24 hours taking the death toll to 27 in New York's Buffalo area alone. 48 deaths have been recorded across the nation. Some people lost their lives while shoveling snow while some were found dead in their cars. Rescue and recovery efforts have been going on for some days now.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm