ಬ್ರೇಕಿಂಗ್ ನ್ಯೂಸ್
28-11-22 10:16 pm HK News Desk ದೇಶ - ವಿದೇಶ
ನವದೆಹಲಿ, ನ.28 : ದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ದೆಹಲಿಯ ಏಮ್ಸ್ ಕಂಪ್ಯೂಟರ್ ಸರ್ವರ್ ಅನ್ನು ಹ್ಯಾಕ್ ಮಾಡಲಾಗಿದ್ದು 6 ದಿನ ಕಳೆದರೂ ಮರು ವ್ಯವಸ್ಥೆ ಆಗಿಲ್ಲ. ಈ ನಡುವೆ ಹ್ಯಾಕರ್‌ಗಳು ಸರ್ವರ್ ಮರಳಿ ಸ್ಥಾಪನೆ ಮಾಡಲು 200 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಈ ಮೊತ್ತವನ್ನು ಕ್ರಿಪ್ಟೋಕರೆನ್ಸಿಯಲ್ಲಿ ನೀಡುವಂತೆ ಬೇಡಿಕೆ ಇರಿಸಿದ್ದಾರೆ.
ನ.23ರಂದು ದೆಹಲಿಯ ಏಮ್ಸ್‌ನ ಸರ್ವರ್ ಹ್ಯಾಕ್ ಆಗಿದ್ದು ಆಸ್ಪತ್ರೆ ಸೇವೆಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿಗೆ ಬರುವ ರೋಗಿಗಳು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ಸ್ಥಗಿತದಿಂದಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕಿಂಗ್, ಅಕೌಂಟ್ ಸೇರಿ ಡಿಜಿಟಲ್ ಸೇವೆ ಸ್ಥಗಿತಗೊಂಡಿದೆ. ಸಂಪೂರ್ಣ ಸರ್ವರ್ ರೀ ಲೋಡ್ ಮಾಡುವ ಪ್ರಕ್ರಿಯೆಗೆ 5 ದಿನ ಹಿಡಿಯಲಿದೆ ಎನ್ನಲಾಗುತ್ತಿದೆ. ಒಪಿಡಿ, ತುರ್ತು ಚಿಕಿತ್ಸಾ ಘಟಕ, ಒಳರೋಗಿಗಳ ಪ್ರಯೋಗಾಲಯ ಸೇರಿದಂತೆ ಎಲ್ಲ ರೀತಿಯ ಸೇವೆಗಳು ಈಗ ಮೌಖಿಕವಾಗಿ ನಡೆಯುತ್ತಿದೆ.

ಕಳೆದ ನ.23ರಂದು ಬೆಳಗ್ಗೆ 6.45ಕ್ಕೆ ರೋಗಿಗಳ ವರದಿಗಳು ಬರುತ್ತಿಲ್ಲ ಎಂದು ತುರ್ತು ಪ್ರಯೋಗಾಲಯದ ಕಂಪ್ಯೂಟರ್ ಕೇಂದ್ರದಿಂದ ಮೊದಲಿಗೆ ದೂರು ಬಂದಿತ್ತು. ಇದರ ನಂತರ, ಬಿಲ್ಲಿಂಗ್ ಕೇಂದ್ರ ಮತ್ತು ಇತರ ಇಲಾಖೆಗಳಿಂದಲೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದವು. ತನಿಖೆ ನಡೆಸಿದಾಗ ಮುಖ್ಯ ಸರ್ವರ್‌ನಲ್ಲಿ ಯಾವ ದಾಖಲೆಗಳನ್ನೂ ಕೂಡ ತೆರೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ತಿಳಿದುಬಂದಿತ್ತು. ಬ್ಯಾಕ್‌ಅಪ್ ಸಿಸ್ಟಮ್ ಮೂಲಕ ಫೈಲ್‌ಗಳನ್ನು ಮರು ಸ್ಥಾಪಿಸಲು ಪ್ರಯತ್ನಿಸಿದಾಗ, ಅದನ್ನೂ ಹ್ಯಾಕ್ ಮಾಡಿದ್ದು ಕಂಡುಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ, ಸೈಬರ್ ದಾಳಿ ಆಗಿರುವ ವಿಷಯ ದೃಢಪಟ್ಟಿದೆ. ಇದಕ್ಕಾಗಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸಹಾಯವನ್ನೂ ಪಡೆಯಲಾಗಿದೆ.
ದೆಹಲಿ ಪೊಲೀಸರು ನವೆಂಬರ್ 25 ರಂದು ಪ್ರಕರಣದಲ್ಲಿ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಪ್ರಕರಣವನ್ನು ದಾಖಲು ಮಾಡಿದ್ದರು. ತನಿಖಾ ಸಂಸ್ಥೆಗಳ ಶಿಫಾರಸಿನ ಮೇರೆಗೆ ಆಸ್ಪತ್ರೆಯಲ್ಲಿ ಕಂಪ್ಯೂಟರ್‌ಗಳ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಏಮ್ಸ್ ಸರ್ವರ್‌ನಲ್ಲಿ ಮಾಜಿ ಪ್ರಧಾನಿಗಳು, ಸಚಿವರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ವಿಐಪಿಗಳ ಮಾಹಿತಿ ಸಂಗ್ರಹವಿದೆ.
Hackers have allegedly demanded an estimated ₹ 200 crore in cryptocurrency from the All India Institute of Medical Sciences (AIIMS), Delhi as its server remained out of order for the sixth consecutive day, official sources said on Monday. It is feared that data of around 3-4 crore patients could have been compromised due to the breach detected Wednesday morning. Patient care services in emergency, outpatient, inpatient and laboratory wings are being managed manually as the server remained down, the sources said.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm