ಬ್ರೇಕಿಂಗ್ ನ್ಯೂಸ್
19-11-22 07:36 pm HK News Desk ದೇಶ - ವಿದೇಶ
ನ್ಯೂಯಾರ್ಕ್,ನ.19 : ಈಗಾಗಲೇ ಟ್ವಿಟ್ಟರ್, ಫೇಸ್‌ಬುಕ್‌ನ ಮೆಟಾ, ಅಮೆಜಾನ್ ಉದ್ಯೋಗ ಕಡಿತ ಮಾಡುತ್ತಿದ್ದು, ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಇದೀಗ ಜಗತ್ತಿನ ಪ್ರಮುಖ ಆಹಾರ ಅಗ್ರಿಗೇಟರ್ ಜೊಮ್ಯಾಟೊ ಕೂಡ ಉದ್ಯೋಗ ಕಡಿತ ಮಾಡಲು ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಜೊಮ್ಯಾಟೊ ಕಂಪನಿಯು ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಮತ್ತು ಲಾಭದಾಯಕವಾಗುವ ಉದ್ದೇಶದಿಂದ ಉದ್ಯೋಗ ಕಡಿತ ಮಾಡಲು ಆರಂಭಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿಕಂಟ್ರೋಲ್‌ಡಾಟ್‌ಕಾಮ್ ವರದಿ ಮಾಡಿದೆ. ಈಗಾಗಲೇ ಪ್ರಾಡಕ್ಟ್, ಟೆಕ್, ಕೆಟಲಾಗ್, ಮಾರುಕಟ್ಟೆ ವಿಭಾಗದ ಸುಮಾರು ನೂರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಹೀಗಿದ್ದರೂ, ನೂತನ ಉದ್ಯೋಗ ಕಡಿತವು ಸಪ್ಲೈಚೇನ್ ವಿಭಾಗದ ಮೇಲೆ ಪರಿಣಾಮ ಬೀರಿಲ್ಲ. ಕಂಪನಿಯ ಒಟ್ಟಾರೆ ಉದ್ಯೋಗ ಪಡೆಯಲ್ಲಿ ಶೇಕಡ 4ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಯೋಜನೆಯಲ್ಲಿ ಜೊಮ್ಯಾಟೊ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಾಡಕ್ಟ್ ಪರಿಷ್ಕರಣೆಗೊಂಡ ಬಳಿಕ ಕೆಲವೊಂದು ಹುದ್ದೆಗಳು ಅನಗತ್ಯವಾಗಿ ಪರಿಣಮಿಸಿವೆ. ಉತ್ಪನ್ನದ ಕೆಲಸ ಮುಗಿದಿದೆ ಎಂದಲ್ಲ. ಹೀಗಾಗಿ, ಕೆಲವು ಮಧ್ಯಮದಿಂದ ಹಿರಿಯ ಹಂತದ ಹುದ್ದೆಗಳನ್ನು ಕೈಬಿಡಲು ಉದ್ದೇಶಿಸಲಾಗಿದೆ. ಪ್ರಾಡಕ್ಟ್ ಕೆಲಸ ಪೂರ್ಣಗೊಂಡಿಲ್ಲದೆ ಇದ್ದರೂ ಅವರನ್ನು ಕಳುಹಿಸಲಾಗುತ್ತದೆʼʼ ಎಂದು ಹೆಸರು ಪ್ರಕಟಿಸಲು ಬಯಸದ ಜೊಮ್ಯಾಟೊ ಮೂಲಗಳು ತಿಳಿಸಿವೆ.
ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯೆಲ್ ಅವರು ಇತ್ತೀಚೆಗೆ ಸಭೆ ನಡೆಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸೂಚನೆ ನೀಡಿದ್ದರು ಎಂದು ಜೊಮ್ಯಾಟೊದ ಇನ್ನೊಂದು ಮೂಲ ತಿಳಿಸಿದೆ. ಕ್ಲೌಡ್ ಕಿಚನ್ ವಿಭಾಗದ ಕೆಲವು ವ್ಯವಸ್ಥಾಪಕರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮಲ್ಲಿ ಕಡಿಮೆ ಕಾರ್ಯಕ್ಷಮತೆ ಆಧರಿತವಾಗಿ ಕೆಲಸದಿಂದ ತೆಗೆಯುವ ಪರಿಪಾಠವಿದೆ. ಹೀಗಾಗಿ, ವಿಶೇಷವೇನೂ ಇಲ್ಲ ಎಂದು ಜೊಮ್ಯಾಟೊ ವಕ್ತಾರರು ತಿಳಿಸಿದ್ದಾರೆ.
ಜೊಮ್ಯಾಟೊ ಸಹ ಸಂಸ್ಥಾಪಕರಾದ ಮೋಹಿತ್ ಗುಪ್ತಾ ಅವರು ನಿನ್ನೆಯಷ್ಟೇ ರಾಜೀನಾಮೆ ಘೋಷಿಸಿದ್ದಾರೆ. ಗುಪ್ತಾ ಅವರ ರಾಜೀನಾಮೆಯನ್ನು ಬಹಿರಂಗಪಡಿಸಿರುವ ಜೊಮ್ಯಾಟೊ ಕಂಪನಿಯು "ಗುಪ್ತಾ ಅವರು ದೀರ್ಘಕಾಲದವರೆಗೂ ಹೂಡಿಕೆದಾರರಾಗಿ ಉಳಿದುಕೊಳ್ಳುತ್ತಾರೆʼʼ ಎಂದಿತ್ತು.
Zomato has started laying off employees this week, sources told Moneycontrol , as the food delivery platform looks to cut costs and turn profitable, in an increasingly challenging macro environment. People familiar with the matter said at least 100 employees have been already impacted across functions such as product, tech, catalogue and marketing, though people in the supply chain haven't been impacted. The company plans to layoff atleast 4 percent of its total workforce.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm