ಬ್ರೇಕಿಂಗ್ ನ್ಯೂಸ್
28-09-22 09:31 pm HK News Desk ದೇಶ - ವಿದೇಶ
ನವದೆಹಲಿ, ಸೆ.28: ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರಾಗಿ ನಿವೃತ್ತ ಸೇನಾನಿ, ಲೆ.ಜ.ಅನಿಲ್ ಚೌಹಾಣ್ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನ ವೂಟಿಯ ಬಳಿ ಹೆಲಿಕಾಪ್ಟರ್ ಅವಘಡಕ್ಕೀಡಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜ. ಬಿಪಿನ್ ರಾವತ್ ದುರಂತ ಸಾವು ಕಂಡಿದ್ದರು. ಘಟನೆಯ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಗೆ ನೇಮಕ ಆಗಿರಲಿಲ್ಲ.
ಇದೀಗ ಅನಿಲ್ ಚೌಹಾಣ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದ್ದು, ಅವರೇ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಸೇವೆಯಲ್ಲಿ ಇರಲಿದ್ದಾರೆ. ಉತ್ತರಾಖಂಡ ಮೂಲದ ಅನಿಲ್ ಚೌಹಾಣ್ 1961ರಲ್ಲಿ ಹುಟ್ಟಿದ್ದರು. 1981ರಲ್ಲಿ 11ನೇ ಗೋರ್ಖಾ ರೆಜಿಮೆಂಟಿನಲ್ಲಿ ಯೋಧರಾಗಿ ಸೇವೆಗೆ ಸೇರಿದ್ದರು. ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಹಳೆ ವಿದ್ಯಾರ್ಥಿಯಾಗಿದ್ದಾರೆ. 2019ರಲ್ಲಿ ಪೂರ್ವ ವಿಭಾಗದ ಸೇನಾ ವಿಭಾಗದಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ನೇಮಕಗೊಂಡು 2021ರ ಮೇಯಲ್ಲಿ ನಿವೃತ್ತಿಯಾಗುವ ವರಗೂ ಸೇವೆ ಸಲ್ಲಿಸಿದ್ದಾರೆ. ಸೇವಾ ಸಂದರ್ಭದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಪರಮ್ ವಿಶಿಷ್ಟ್ ಸೇವಾ ಪದಕವನ್ನೂ ಪಡೆದಿದ್ದರು.
2021ರ ಡಿಸೆಂಬರ್ 8ರಂದು ವೂಟಿ ಬಳಿಯ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಕಚೇರಿಗೆ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಯೋಧರು ಸಾವು ಕಂಡಿದ್ದರು.
The Government has decided to appoint Lt General Anil Chauhan (Retired) PVSM, UYSM, AVSM, SM, VSM as the next Chief of Defence Staff (CDS) who shall also function as Secretary to Government of India, Department of Military Affairs with effect from the date of his assumption of charge and until further orders. In a career spanning over nearly 40 years, Lt Gen Anil Chauhan had held several command, staff and instrumental appointments and had extensive experience in counter-insurgency operations in Jammu & Kashmir and North-East India.
12-10-25 08:59 pm
Bangalore Correspondent
D.K. Shivakumar, MLA Munirathna, RSS: ಮುನಿರತ್...
12-10-25 08:05 pm
ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲ ಗಾಳಿ ಸುದ್ದಿ ಅ...
11-10-25 11:03 pm
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
12-10-25 10:19 pm
HK News Desk
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
12-10-25 09:53 pm
Mangalore Correspondent
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
ಅಫ್ಘಾನ್ ಸಚಿವನಿಂದ ಭಾರತದಲ್ಲಿ ಮಹಿಳೆಯರಿಗೆ ಅವಮಾನ ;...
12-10-25 05:02 pm
Girish Mattannavar Mocks Dr. Mahabala Shetty:...
11-10-25 10:24 pm
12-10-25 03:52 pm
Mangalore Correspondent
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm