ಬ್ರೇಕಿಂಗ್ ನ್ಯೂಸ್
05-09-22 10:15 pm HK News Desk ದೇಶ - ವಿದೇಶ
ಪುದುಚೇರಿ, ಸೆ.5: ತನ್ನ ಮಗಳಿಗಿಂತ ಹುಷಾರಿದ್ದಾನೆ, ಕ್ಲಾಸಲ್ಲಿ ಫಸ್ಟ್ ಬರುತ್ತಿದ್ದಾನೆ, ವಾರ್ಷಿಕೋತ್ಸವ ದಿನವೂ ಪ್ರೋಗ್ರಾಮಲ್ಲಿ ಟಾಪರ್ ಆಗುತ್ತಿದ್ದಾನೆ ಎಂಬ ಮತ್ಸರದಲ್ಲಿ ಎಂಟನೇ ಕ್ಲಾಸ್ ಕಲಿಯುತ್ತಿದ್ದ ಹುಡುಗನನ್ನು ಸಹಪಾಠಿ ಹುಡುಗಿಯ ತಾಯಿಯೇ ವಿಷಕಾರಿ ವಸ್ತು ಕೊಟ್ಟು ಕೊಲ್ಲಿಸಿದ ಘಟನೆ ತಮಿಳ್ನಾಡಿನ ಪುದುಚೇರಿಯಲ್ಲಿ ನಡೆದಿದೆ.
ಆರೋಪಿ ಮಹಿಳೆ ಸಗಾಯರಾಣಿ ವಿಕ್ಟೋರಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಶುಕ್ರವಾರ ಪುದುಚೇರಿಯ ಕರೈಕಲ್ ಎಂಬಲ್ಲಿನ ಖಾಸಗಿ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತು. ಶಾಲಾ ಕಾರ್ಯಕ್ರಮದಲ್ಲಿ ಎಂಟನೇ ಕ್ಲಾಸಿನ ಆ ಹುಡುಗ ಭಾಗವಹಿಸದಂತೆ ಮಾಡಬೇಕು ಎಂದು ಸಹಪಾಠಿ ಹುಡುಗಿಯ ತಾಯಿ ವಿಕ್ಟೋರಿಯಾ ಐಡಿಯಾ ಮಾಡಿದ್ದಳು. ಅಂದು ಬೆಳಗ್ಗೆ ಕ್ಲಾಸ್ ಆರಂಭಗೊಂಡ ಬಳಿಕ ಅದೇ ಹುಡುಗನ ತಾಯಿಯೆಂದು ಹೇಳಿಕೊಂಡು ಟಿಫಿನ್ ಬಾಕ್ಸ್ ಎಂದು ಹೇಳಿ ಶಾಲೆಯ ಗಾರ್ಡ್ ಬಳಿ ಕೊಟ್ಟಿದ್ದಳು. ಸೆಕ್ಯುರಿಟಿ ಗಾರ್ಡ್ ತಾಯಿ ತಂದು ಕೊಟ್ಟಿದ್ದೆಂದು ಹೇಳಿ ಹುಡುಗನಿಗೆ ಬಾಕ್ಸ್ ತಲುಪಿಸಿದ್ದ. ಬಾಕ್ಸ್ ನಲ್ಲಿದ್ದ ಬಾಟಲಿಯಲ್ಲಿ ಪಾನೀಯ ತುಂಬಿಸಿ ಕೊಟ್ಟಿದ್ದಳು.
ಪಾನೀಯ ಕುಡಿದಿದ್ದ ಹುಡುಗ ವಾಂತಿ ಮಾಡಿದ್ದು, ಅಸ್ವಸ್ಥನಾಗಿದ್ದ. ಮನೆಗೆ ತೆರಳಿದ ಬಳಿಕವೂ ವಾಂತಿ ಮಾಡಿದ್ದ. ಮನೆಯವರು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಏನೋ ಫುಡ್ ಪಾಯ್ಸನ್ ಆಗಿದೆಯೆಂದು ಹೇಳಿ ಮದ್ದು ಕೊಡಿಸಿದ್ದರು. ಸಂಜೆ ಮನೆಗೆ ಮರಳಿದ ಬಳಿಕವೂ ವಾಂತಿ ನಿಂತಿರಲಿಲ್ಲ. ಮರುದಿನ ಶನಿವಾರ ವಾಂತಿ ಭೇದಿ ಹೆಚ್ಚಿದ್ದರಿಂದ ಕರೈಕಲ್ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಬಾಲಕನ ಸ್ಥಿತಿ ಬಿಗಡಾಯಿಸಿದ್ದು ರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾನೆ. ಸಾಯುವುದಕ್ಕೂ ಮುನ್ನ ಬಾಲಕ ತನಗೇನೊ ಬಾಟಲಿನಲ್ಲಿ ಪಾನೀಯ ತಂದು ಕೊಟ್ಟಿದ್ದೀಯಲ್ಲಾ.. ಅದನ್ನು ಕುಡಿದ ಬಳಿಕವೇ ವಾಂತಿ ಶುರುವಾಗಿದ್ದು ಎಂದು ತಾಯಿ ಬಳಿ ಹೇಳಿದ್ದ.
ಆದರೆ ಹುಡುಗನ ತಾಯಿಗೆ ತಾನೇನು ಪಾನೀಯ ತಂದು ಕೊಟ್ಟಿಲ್ಲವೆಂದು ಸಂಶಯ ಬಂದಿತ್ತು. ಶಾಲೆಯ ಸಿಬಂದಿಗೆ ವಿಷಯ ತಿಳಿಸಿದಾಗ, ಯಾರು ಪಾನೀಯ ತಂದು ಕೊಟ್ಟಿದ್ದೆಂದು ತಿಳಿಯಲು ಸಿಸಿಟಿವಿ ಚೆಕ್ ಮಾಡಿದ್ದರು. ಸಹಪಾಠಿ ಹುಡುಗಿಯ ತಾಯಿ ಸೆಕ್ಯುರಿಟಿ ಗಾರ್ಡ್ ಬಳಿ ಟಿಫನ್ ಬಾಕ್ಸ್ ಎಂದು ಪಾರ್ಸೆಲ್ ತಂದುಕೊಟ್ಟಿದ್ದು ಮತ್ತು ಅದನ್ನು ಸೆಕ್ಯುರಿಟಿ ಗಾರ್ಡ್ ಹುಡುಗನ ಕೈಗೆ ಮುಟ್ಟಿಸಿದ್ದು ದಾಖಲಾಗಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಆರೋಪಿ ವಿಕ್ಟೋರಿಯಾಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಆರ್.ಲೋಕೇಶ್ವರನ್, ಅಮಲು ಬರುವ ಮಾತ್ರೆಗಳನ್ನು ಔಷಧಿ ಅಂಗಡಿಯಿಂದ ಖರೀದಿಸಿ ಅದನ್ನು ಪಾನೀಯಕ್ಕೆ ಬೆರಸಿ ಕೊಟ್ಟಿದ್ದಳು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹುಡುಗ ಭಾಗವಹಿಸದಂತೆ ಮಾಡುವುದು ಆಕೆಯ ಉದ್ದೇಶವಾಗಿತ್ತು. ಅದಕ್ಕಾಗಿ ಈ ರೀತಿ ಮಾಡಿದ್ದಳು. ನಾವು ಆಟೋಪ್ಸಿ ವರದಿಯನ್ನು ನಿರೀಕ್ಷಿಸುತ್ತಿದ್ದು, ಪಾನೀಯಕ್ಕೆ ಏನು ಬೆರೆಸಲಾಗಿತ್ತು ಅನ್ನೋದು ವರದಿಯಲ್ಲಿ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ. ಈ ನಡುವೆ, ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲವೆಂದು ಸಾರ್ವಜನಿಕರು, ಬಾಲಕನ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಘಟನೆ ಬಗ್ಗೆ ಕರೈಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ವಿಕ್ಟೋರಿಯಾಳನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ತನ್ನ ಮಗಳೇ ಟಾಪರ್ ಆಗಬೇಕೆಂಬ ಮಹದಾಸೆ ಮತ್ತು ಇನ್ನೊಬ್ಬ ಹುಡುಗನ ಬಗೆಗಿದ್ದ ಮತ್ಸರ ಆಕೆಯನ್ನು ಈ ಕೃತ್ಯ ಮಾಡಲು ಪ್ರೇರೇಪಿಸಿದ್ದು, ಈಗ ಜೈಲು ಸೇರುವಂತೆ ಮಾಡಿದೆ.
A 13-year-old boy was murdered by his classmate's mother at Karaikal. The woman spiked a drink and served it to the teenager on Friday since she didn't want the boy to outperform her daughter at school. The boy passed away at the hospital on Saturday night.The accused has been identified as J Sahayarani Victoria (42). She was booked for murder and arrested.The boy was studying Class 8 in a private school in Karaikal. He was said to be a topper of his class and good in extracurricular activities. Sahayarani was allegedly resentful towards the boy who was faring better than her daughter who studies in the same class.
12-10-25 08:59 pm
Bangalore Correspondent
D.K. Shivakumar, MLA Munirathna, RSS: ಮುನಿರತ್...
12-10-25 08:05 pm
ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲ ಗಾಳಿ ಸುದ್ದಿ ಅ...
11-10-25 11:03 pm
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
12-10-25 06:53 pm
Mangalore Correspondent
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
ಅಫ್ಘಾನ್ ಸಚಿವನಿಂದ ಭಾರತದಲ್ಲಿ ಮಹಿಳೆಯರಿಗೆ ಅವಮಾನ ;...
12-10-25 05:02 pm
Girish Mattannavar Mocks Dr. Mahabala Shetty:...
11-10-25 10:24 pm
Malayalam actor Jayakrishnan Arrest, Mangalor...
11-10-25 07:18 pm
12-10-25 03:52 pm
Mangalore Correspondent
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm