ಬ್ರೇಕಿಂಗ್ ನ್ಯೂಸ್
12-08-22 10:31 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 12 : ದೆಹಲಿಯ ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಕಣ್ಣೆದುರೇ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯೊಬ್ಬನನ್ನು ಕೊಚ್ಚಿ ಕೊಂದ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ಹತ್ಯೆಯ ದೃಶ್ಯ ದಾಖಲಾಗಿದೆ. ದಕ್ಷಿಣ ದೆಹಲಿಯ ಮಾಳವೀಯ ನಗರದ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ.
25 ವರ್ಷದ ಮಯಾಂಕ್ ಪವಾರ್ ಎಂಬಾತ ಕೊಲೆಯಾದ ವ್ಯಕ್ತಿ. ಈತ ಸ್ನೇಹಿತನ ಜತೆ ಮಾರುಕಟ್ಟೆಯಲ್ಲಿ ಇದ್ದ ವೇಳೆ, ಚಾಕು ಹಿಡಿದ ನಾಲ್ಕೈದು ಮಂದಿ ದುಷ್ಕರ್ಮಿಗಳು ಓಡಿ ಬಂದಿದ್ದು ಬೈದಾಡುತ್ತಲೇ ಚೂರಿಯಿಂದ ಇರಿದಿದ್ದಾರೆ.


ಆಗಸ್ಟ್ 11ರಂದು ಸಂಜೆ 7ರ ಸುಮಾರಿಗೆ ಮಾಳವೀಯ ನಗರದ ಬೇಗುಂಪುರದ ಕಿಲಾದಲ್ಲಿ ಇಬ್ಬರೂ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಬಂದ 4-5 ಅಪರಿಚಿತ ವ್ಯಕ್ತಿಗಳು ಮಯಾಂಕ್ ಜತೆ ವಾಗ್ವಾದ ಆರಂಭಿಸಿದ್ದರು ಎಂದು ಆತನ ಸ್ನೇಹಿತ ವಿಕಾಸ್ ಪನ್ವಾರ್ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರೂ ಅಲ್ಲಿಂದ ಎದ್ದು ಓಡಲು ಪ್ರಯತ್ನಿಸಿದಾಗ ಆರೋಪಿಗಳು ಕಲ್ಲುಗಳನ್ನು ಎಸೆದಿದ್ದಾರೆ. ಆದರೆ ಮಯಾಂಕ್‌ನನ್ನು ಬೆನ್ನಟ್ಟಿ ಹಿಡಿದ ಆರೋಪಿಗಳು, ಹಲವು ಬಾರಿ ಇರಿದು ಕೊಂದಿದ್ದಾರೆ. ಮಾರುಕಟ್ಟೆಯಲ್ಲೇ ಘಟನೆ ನಡೆದಿದ್ದು ಪಾದಚಾರಿಗಳಾಗಲೀ ಮತ್ತು ಇತರೇ ವಾಹನ ಸವಾರರಾಗಲೀ ದಾಳಿಯನ್ನು ತಡೆಯಲು ಪ್ರಯತ್ನ ಮಾಡಲಿಲ್ಲ. ಮಯಾಂಕ್‌ಗೆ ಅನೇಕ ಬಾರಿ ಇರಿದ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲವರ ಸಹಾಯ ಪಡೆದು ಮಯಾಂಕ್ ನನ್ನು ಸ್ನೇಹಿತ ವಿಕಾಸ್, ಏಮ್ಸ್‌ಗೆ ಸಾಗಿಸಿದ್ದಾನೆ. ಅಲ್ಲಿ ಚಿಕಿತ್ಸೆ ವೇಳೆ ಮಯಾಂಕ್ ಮೃತೊಟ್ಟಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಆರೋಪಿಗಳ ಗುರುತು ಪತ್ತೆ ಮಾಡಿದ್ದಾರೆ.
A 25-year-old man was stabbed to death in South Delhi’s Malviya Nagar on Thursday evening. CCTV footage shows the victim, Mayank Panwar, being attacked by a group of assailants while passersby look on.According to police, they received a call about the incident which took place near gate no 3 at the Begumpur DDA Market. They found that the victim was taken to AIIMS Trauma Centre, where he succumbed to injuries.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm