ಬ್ರೇಕಿಂಗ್ ನ್ಯೂಸ್
18-07-22 10:36 pm HK News Desk ದೇಶ - ವಿದೇಶ
ಮುಂಬೈ, ಜುಲೈ 18 : ಬಾಳಾ ಠಾಕ್ರೆ ಕಟ್ಟಿದ ಪಕ್ಷದ ನಿಯಂತ್ರಣಕ್ಕಾಗಿ ಏಕನಾಥ್ ಶಿಂಧೆ ಜೊತೆ ಸಂಘರ್ಷದಲ್ಲಿ ತೊಡಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹಲವಾರು ಪ್ರಮುಖ ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ. ಆಮೂಲಕ ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡಾಗಿ ವಿಭಜನೆಗೊಳ್ಳುವುದು ಖಾತ್ರಿಯಾಗಿದೆ.
ಏಕನಾಥ ಶಿಂಧೆ ಅಘಾಡಿ ಸರ್ಕಾರವನ್ನು ಉರುಳಿಸಿದ ನಂತರ ಠಾಕ್ರೆ ಹಲವು ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ. ಮಾಜಿ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಂಡ ಶಾಸಕ ಸಂತೋಷ್ ಬಂಗಾರ್, ಥಾಣೆ ಜಿಲ್ಲಾ ಮುಖ್ಯಸ್ಥ ನರೇಶ್ ಮ್ಹಾಸ್ಕೆ ಅವರನ್ನು ಠಾಕ್ರೆ ತಂಡ ಪಕ್ಷದಿಂದ ವಜಾಗೊಳಿಸಿದೆ. ಠಾಕ್ರೆ ಅವರು ಥಾಣೆ, ಪಾಲ್ಘರ್, ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಹೊಸ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಹೊಸ ಪದಾಧಿಕಾರಿಗಳು ಬಂಡುಕೋರರು ಬಿಟ್ಟುಹೋದ ಖಾಲಿ ಹುದ್ದೆಗಳಿಗೆ ಎರಡನೇ ಹಂತದ ನಾಯಕರಾಗಿದ್ದಾರೆ.

ಏಕನಾಥ್ ಶಿಂಧೆಯವರ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆಬಳಿಕ ಹೊಸ ಸರ್ಕಾರ ಸ್ಥಾಪನೆಯ ನಂತರ ಸುಪ್ರೀಂ ಕೋರ್ಟ್‌ನ ನಿರ್ಣಾಯಕ ವಿಚಾರಣೆಯ ನಡುವಲ್ಲೇ ಹೊಸ ಬೆಳವಣಿಗೆ ಉಂಟಾಗಿದೆ. ಮುಂದಿನ ಬುಧವಾರ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಎರಡೂ ಕಡೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಪಕ್ಷಕ್ಕೆ ಸೇರಿದ 55 ಶಾಸಕರ ಪೈಕಿ 53 ಮಂದಿ ಅನರ್ಹತೆ ಪಟ್ಟಿಯಲ್ಲಿದ್ದಾರೆ. ಶಿಂಧೆ ಸೇರಿದಂತೆ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಠಾಕ್ರೆ ಪ್ರತಿಪಾದಿಸಿದ್ದಾರೆ.
ಟೀಮ್ ಠಾಕ್ರೆ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿದ ವಾರಗಳ ನಂತರ ಶಿಂಧೆ ಅವರ ಬಣ ಇಂದು ತನ್ನದೇ ಆದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿದೆ. ಜೂನ್ 25 ರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಠಾಕ್ರೆ ತಂಡವು ಆರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿತ್ತು. ಉದ್ಧವ್ ಠಾಕ್ರೆ ಅವರನ್ನು ಸೇನಾ ಮುಖ್ಯಸ್ಥ ಎಂದು ಘೋಷಿಸಿತ್ತು. ಅಲ್ಲದೆ, ಪಕ್ಷದ ಕುರಿತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಿತ್ತು.

ಇದೇ ವೇಳೆ, ಲೋಕಸಭೆಯಲ್ಲಿ ಪ್ರತ್ಯೇಕ ಗುಂಪು ರಚಿಸಲು ಶಿವಸೇನೆಯ 12 ಸಂಸದರು ಸಜ್ಜಾಗಿದ್ದು, ಸ್ಪೀಕರ್ ಭೇಟಿಗೆ ಮುಂದಾಗಿದ್ದಾರೆ. ಶಿವಸೇನೆಯ 19 ಸಂಸದರ ಪೈಕಿ ಕನಿಷ್ಠ 12 ಮಂದಿ ಲೋಕಸಭೆಯಲ್ಲಿ ಪ್ರತ್ಯೇಕ ಗುಂಪನ್ನು ರಚಿಸಿಕೊಂಡು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಔಪಚಾರಿಕ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಮಹಾರಾಷ್ಟ್ರದ ಶಿವಸೇನೆ ಸಂಸದರೊಬ್ಬರು ತಿಳಿಸಿದ್ದಾರೆ.
After the Shiv Sena's division in Maharashtra assembly, its parliamentary party was also staring at a split with several MPs set to petition Lok Sabha Speaker Om Birla to recognise them as a separate group.A Shiv Sena Lok Sabha member claimed that at least 12 of the 18 Shiv Sena members will meet Birla to submit a formal letter to recognise it as a separate group.Kalaben Delkar, the Lok Sabha member from Dadra & Nagar Haveli, has pledged her allegiance to the Shiv Sena, but had not contested the election on the party symbol.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm