ಬ್ರೇಕಿಂಗ್ ನ್ಯೂಸ್
14-07-22 09:59 pm HK News Desk ದೇಶ - ವಿದೇಶ
ಪಟಿಯಾಲ, ಜುಲೈ 14: ಪಂಜಾಬಿ ಗಾಯಕ ದಲೇರ್ ಮೆಹಂದಿಗೆ ಪಟಿಯಾಲ ನ್ಯಾಯಾಲಯ ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಲೇರ್ ಮೆಹಂದಿ ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
2003ರಲ್ಲಿ ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿತ್ತು.ನ್ಯಾಯಾಲಯದಲ್ಲಿ ಹಾಜರಾಗಿದ್ದ ಮೆಹಂದಿಯನ್ನು ಅಲ್ಲಿಂದಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ತಮ್ಮ ತಂಡದ ಜನರು ಎಂದು ಹೇಳಿ ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದರು. ಇದಕ್ಕಾಗಿ ಅವರು ಭಾರೀ ಹಣವನ್ನೂ ಪಡೆಯುತ್ತಿದ್ದರು. 2018ರಲ್ಲಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಕೋರ್ಟ್ ಇವರಿಬ್ಬರನ್ನು ದೋಷಿ ಎಂದು ಹೇಳಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ನಂತರ ಜಾಮೀನು ಪಡೆದು ಹೊರಬಂದ ಇವರು ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಅಡಿಷನಲ್ ಸೆಷನ್ಸ್ ನ್ಯಾಯಮೂರ್ತಿ ಎಚ್ಎಸ್ ಗ್ರೆವಾಲ್ ಜಾಮೀನು ಅರ್ಜಿಯನ್ನು ತಳ್ಳಿದ್ದು ಮೆಹಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
2003ರಲ್ಲಿ ಸರ್ದಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ ಮೆಹಂದಿ ಸಹೋದರರು 1998 ಮತ್ತು 1999ರಲ್ಲಿ ಎರಡು ತಂಡವನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದು, ಅದರಲ್ಲಿ 10 ಮಂದಿಯನ್ನು ಅಮೆರಿಕದಲ್ಲಿ ಅಕ್ರಮವಾಗಿ ಬಿಟ್ಟು ಬಂದಿದ್ದಾರೆ.ಈ ಎಫ್ಐಆರ್ ದಾಖಲಾದ ನಂತರ ಇಬ್ಬರು ಸಹೋದರರ ಮೇಲೆ 35ಕ್ಕಿಂತಲೂ ಹೆಚ್ಚು ದೂರುಗಳು ದಾಖಲಾಗಿತ್ತು.
ಮೂರು ವರ್ಷಗಳ ನಂತರ ಸ್ಥಳೀಯ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ದಲೇರ್ ಮೆಹಂದಿ ನಿರ್ದೋಷಿ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ದಲೇರ್ ವಿರುದ್ದ ಸಾಕಷ್ಟು ಸಾಕ್ಷ್ಯಗಳಿವೆ, ಅವರನ್ನು ಬಿಡುಗಡೆ ಮಾಡಲು ಆಗಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಆದೇಶಿಸಿತ್ತು.
Popular Punjabi singer Daler Mehndi was sent to jail on Thursday evening after the Patiala district court upheld a lower court’s order of jail term for him in a 2003 case of human trafficking.The singer was sent to Patiala Central Jail after the additional district and session judge H S Grewal dismissed the singer’s appeal against conviction and upheld the decision of the lower court that had held him guilty of cheating (section 420) and criminal conspiracy (section 120 B) of the Indian penal code (IPC) in 2018 in the 2003 case of human trafficking.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm