ಬ್ರೇಕಿಂಗ್ ನ್ಯೂಸ್
13-07-22 10:08 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 13 : ರಾಮಾಯಣದಲ್ಲಿ ಸೀತೆಯನ್ನು ಲಂಕಾದಿಂದ ಕರೆತರಲು ವಾನರಸೇನೆ ಸಮುದ್ರಕ್ಕೆ ಸೇತುವೆ ಕಟ್ಟಿದ್ದು ಅದೇ ರಾಮಸೇತು ಎನ್ನುವುದು ಭಾರತೀಯ ಹಿಂದು ಪರಂಪರೆ ನಂಬಿಕೊಂಡು ಬಂದ ಪ್ರತೀತಿ. ಆದರೆ ಈ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕೆಂಬ ಒತ್ತಾಯದ ಕೂಗು ಮೊದಲಿನಿಂದಲೂ ಇತ್ತು. ಈ ಬಗ್ಗೆ ಯುಪಿಎ ಸರಕಾರ ಇದ್ದಾಗ ಪರ- ವಿರೋಧ ಚರ್ಚೆ, ಕೋರ್ಟಿನಲ್ಲಿ ಜಟಾಪಟಿಯೂ ನಡೆದಿತ್ತು. ಇದೀಗ ಈ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು ಜುಲೈ 26ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಹೀಗಾಗಿ ರಾಮಸೇತು ಕುರಿತ ನಿರೀಕ್ಷೆ ಮತ್ತೆ ಗರಿಗೆದರಿದೆ.
ಈ ಹಿಂದೆ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ವಿವಾದಾತ್ಮಕ 'ಸೇತುಸಮುದ್ರಂ ಶಿಪ್ ಚಾನೆಲ್ ಪ್ರಾಜೆಕ್ಟ್' ಅಂದರೆ ಸೇತುಸಮುದ್ರಂ ನೌಕಾ ಕಾಲುವೆ ಯೋಜನೆ ಘೋಷಿಸಲಾಗಿತ್ತು. ಅದರ ಪ್ರಕಾರ ಆ ದಾರಿಯಲ್ಲಿ ಹಡಗು ತೆರಳುವುದಕ್ಕಾಗಿ ಲಂಕಾ ಮತ್ತು ಕನ್ಯಾಕುಮಾರಿ ನಡುವಿನ ರಾಮಸೇತು ಒಡೆಯಲು ಭಾರತ ಸರಕಾರ ಮುಂದಾಗಿತ್ತು. ಅಡ್ಡಲಾಗಿ ಸೇತುವೆ ಇರುವುದರಿಂದ ಅಲ್ಲಿಂದ ಹಡಗು ತೆರಳಲು ಸಾಧ್ಯವಾಗುತ್ತಿಲ್ಲ.
ಆದರೆ ಆಗಿನ ಕೇಂದ್ರ ಸರಕಾರದ ನಡೆಯ ವಿರುದ್ದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು, ಅದನ್ನು ಒಡೆಯಲು ಅವಕಾಶ ನೀಡಬಾರದು ಎಂದು ಸುಬ್ರಮಣ್ಯನ್ ಸ್ವಾಮಿ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಅಲ್ಲದೆ, 'ರಾಮಸೇತು'ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿಯನ್ನು ಈವರೆಗೂ ವಿಚಾರಣೆಗೆ ಪರಿಗಣಿಸದೆ ಉಳಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಇದೀಗ ಜುಲೈ 26 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ಸಮಸ್ಯೆಯು ದೀರ್ಘಕಾಲದಿಂದ ಬಾಕಿ ಉಳಿದಿದೆ ಮತ್ತು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಸುಬ್ರಹ್ಮಣ್ಯನ್ ಸ್ವಾಮಿ ಇತ್ತೀಚೆಗೆ ಮತ್ತೆ ಅರ್ಜಿ ಸಲ್ಲಿಸಿದ ನಂತರ, ಪೀಠವು ಜುಲೈ 26 ರಂದು ವಿಚಾರಣೆ ಆರಂಭಿಸುವುದಾಗಿ ಹೇಳಿದೆ.
ರಾಮಸೇತುವಿನ ಅಸ್ತಿತ್ವದ ಕುರಿತು ಕೇಂದ್ರ ಒಪ್ಪಿರುವುದರಿಂದ ಮೊಕದ್ದಮೆಯ ಮೊದಲ ಸುತ್ತಿನಲ್ಲಿ ನಾನು ಗೆದ್ದಿದ್ದೇನೆ. ರಾಷ್ಟ್ರೀಯ ಸ್ಮಾರಕವೆಂದು ರಾಮಸೇತುವನ್ನು ಘೋಷಿಸುವ ಸಲುವಾಗಿ ಮತ್ತು ನನ್ನ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಸಚಿವರು 2017 ರಲ್ಲಿ ಸಭೆ ಕರೆದಿದ್ದರು. ಆದರೆ ಆಬಳಿಕ ಈ ಕುರಿತು ಯಾವುದೇ ಪ್ರಗತಿಯಾಗಿರಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮಾನವ ನಿರ್ಮಿತ ಎನ್ನುವುದಕ್ಕೆ ಪುರಾವೆ !
ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ರಾಮಸೇತು ನೈಸರ್ಗಿಕವಲ್ಲ. ಅದು ಮಾನವ ನಿರ್ಮಿತ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ ಎಂದು ಡಿಸ್ಕವರಿ ಚಾನೆಲ್ ಈ ಹಿಂದೆ ವರದಿ ಮಾಡಿತ್ತು. ಎರಡು ಭೂಭಾಗಗಳ ನಡುವೆ ನೈಸರ್ಗಿಕವಾದ ಮರಳು ಮತ್ತು ಸೀಮೆ ಸುಣ್ಣದ ದಿಬ್ಬ ಇದೆ. ಈ ಮರಳು ದಿಬ್ಬದ ಮೇಲೆ ಅದಕ್ಕೂ ಹಳೆಯದಾದ ಬಂಡೆಗಳಿವೆ ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದರು. ಈ ಬಂಡೆಗಳು ಸುಮಾರು 7 ಸಾವಿರ ವರ್ಷದಷ್ಟು ಹಳೆಯವು. ಆದರೆ, ಅದರ ಅಡಿಯಲ್ಲಿರುವ ಮರಳ ರಾಶಿ 4 ಸಾವಿರ ವರ್ಷಗಳಷ್ಟು ಹಿಂದಿನದ್ದು ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದರು. ಹೀಗಾಗಿ ರಾಮಾಯಣ, ರಾಮಸೇತು ಬಗ್ಗೆ ಭಾರೀ ಕುತೂಹಲ ಉಂಟಾಗಿತ್ತು.
The SC will consider the question of recognising the Ram Setu as India's national heritage. It's a chain of shoals between Pamban Island (Rameswaram Island), off the south-eastern coast of India, and Mannar Island, off the north-western coast of Sri Lanka.The apex court will hear the petition seeking a direction to the Centre to declare the "Ram Setu" as a national heritage monument.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm