ಬ್ರೇಕಿಂಗ್ ನ್ಯೂಸ್
19-06-22 05:18 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 19: ಅಗ್ನಿಪಥ್ ಸೇನಾ ನೇಮಕಾತಿ ಬಗ್ಗೆ ದೇಶಾದ್ಯಂತ ವಿರೋಧ ಕೇಳಿಬರುತ್ತಿದ್ದರೂ, ರಕ್ಷಣಾ ಸಚಿವಾಲಯ ಯೋಜನೆ ಕುರಿತು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಅಲ್ಲದೆ, ಇದೇ ಜೂನ್ 24ರಂದು ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿ ಆನ್ಲೈನ್ ಅರ್ಜಿ ಸ್ವೀಕರಿಸಲಾಗುವುದು. ಈ ಬಾರಿ 46 ಸಾವಿರ ಮಂದಿಯನ್ನು ಭರ್ತಿ ಮಾಡಲಾಗುವುದು, ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಒಂದು ಲಕ್ಷದ ವರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ.
ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಲೆ.ಜ. ಅನಿಲ್ ಪುರಿ ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. ನಾವು ಸಣ್ಣ ಪ್ರಮಾಣದಲ್ಲಿ ಯೋಜನೆಯನ್ನು ಆರಂಭಿಸಿದ್ದು ನಾಲ್ಕೈದು ವರ್ಷಗಳಲ್ಲಿ ವರ್ಷಕ್ಕೆ 60 ಸಾವಿರ, ಆನಂತರ 90 ಸಾವಿರ, ಒಂದು ಲಕ್ಷದ ವರೆಗೂ ನೇಮಕಾತಿ ಮಾಡಿಕೊಳ್ಳುತ್ತೇವೆ. ಭವಿಷ್ಯದಲ್ಲಿ 1.25 ಲಕ್ಷದ ವರೆಗೂ ನೇಮಕಾತಿ ಮಾಡಿಕೊಳ್ಳುವ ಸಾಧ್ಯತೆ ಬರಬಹುದು. ಇದನ್ನು 46 ಸಾವಿರಕ್ಕೆ ಸೀಮಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಆರ್ಮಿ, ನೇವಿ, ವಾಯುಪಡೆಗೆ ಪ್ರತ್ಯೇಕ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಈ ಬಗ್ಗೆ ಅಂತಿಮ ಮುದ್ರೆ ಹಾಕುವುದಕ್ಕೂ ಮುನ್ನ ಸಾಕಷ್ಟು ವಿಮರ್ಶೆ ಮಾಡಿದ್ದೇವೆ. ವಯಸ್ಸಿನ ವಿಚಾರದಲ್ಲಿ ಕಾರ್ಗಿಲ್ ರಿವೀವ್ ಕಮಿಟಿಯವರು ಕೂಡ ಪ್ರಸ್ತಾಪ ಮಾಡಿದ್ದಾರೆ. ಸರಕಾರ ಅಗ್ನಿಪಥ್ ಆದಷ್ಟು ಶೀಘ್ರದಲ್ಲಿ ಜಾರಿಗೆ ತರಲು ಹೊರಟಿದ್ದು ಯುವಕರು ಪ್ರತಿಭಟನೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಅನಿಲ್ ಪುರ್ ಮನವಿ ಮಾಡಿದ್ದಾರೆ.
ನೇವಿ ನೇಮಕಾತಿ ಬಗ್ಗೆ ಮಾಹಿತಿ ನೀಡಿದ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ, ನೇವಿಯಿಂದ ಜೂನ್ 25ರಂದು ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗುವುದು. ನವೆಂಬರ್ 21ರ ವೇಳೆಗೆ ಮೊದಲ ಬ್ಯಾಚ್ ತರಬೇತಿಗೆ ರೆಡಿಯಾಗಲಿದೆ. ನೇವಿಗೆ ಯುವಕ ಮತ್ತು ಯುವತಿಯರನ್ನು ಸೇರಿಸಿಕೊಳ್ಳಲಾಗುವುದು. ಜೂನ್ 24ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜುಲೈ 24ರ ವೇಳೆಗೆ ನೇಮಕಾತಿ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ವಾಯುಪಡೆಯಿಂದ ಡಿಸೆಂಬರ್ 30ರ ವೇಳೆಗೆ ಮೊದಲ ಬ್ಯಾಚ್ ನೇಮಕಾತಿ ನಡೆಸಿ ತರಬೇತಿ ಆರಂಭಿಸಲು ಯೋಜನೆ ಇದೆ ಎಂದು ಏರ್ ಮಾರ್ಶಲ್ ಝಾ ಹೇಳಿದರು. ಭೂಸೇನೆಯ ನೇಮಕಾತಿ ಬಗ್ಗೆ ಮಾಹಿತಿ ನೀಡಿದ ಲೆ.ಜ. ಬನ್ಸಿ ಪೊನ್ನಪ್ಪ, ವಿವಿಧ ವಿಭಾಗಗಳಲ್ಲಿ ನೇಮಕಾತಿ ಬಗ್ಗೆ ಜುಲೈ ಒಂದರ ನಂತರ ಗೈಡ್ ಲೈನ್ಸ್ ಹೊರಡಿಸಲಾಗುವುದು. ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ವೇಳೆಗೆ ದೇಶಾದ್ಯಂತ ನೇಮಕಾತಿ ಶಿಬಿರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಡಿಸೆಂಬರ್ ಮೊದಲ ವಾರ ಮತ್ತು ಎರಡನೇ ವಾರದಲ್ಲಿ 25 ಸಾವಿರ ಮಂದಿಯನ್ನು ತರಬೇತಿಗೆ ರೆಡಿ ಮಾಡುತ್ತೇವೆ. ಆನಂತರ ಫೆಬ್ರವರಿ 23ರ ವೇಳೆಗೆ ಮತ್ತೆ ಒಂದಷ್ಟು ಮಂದಿಯನ್ನು ಸೇರಿಸಿಕೊಳ್ಳಲಾಗುವುದು. ಒಟ್ಟು 40 ಸಾವಿರ ಅಗ್ನಿವೀರರ ಆಯ್ಕೆಗಾಗಿ ದೇಶದ ವಿವಿಧೆಡೆ 83 ನೇಮಕಾತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಬನ್ಸಿ ಪೊನ್ನಪ್ಪ ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅನಿಲ್ ಪುರಿ, ಯಾವುದೇ ಕಾರಣಕ್ಕೂ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಮುಂದೆ ಏನಿದ್ದರೂ, ಅಗ್ನಿವೀರರ ಮೂಲಕ ಮಾತ್ರ ನೇಮಕಾತಿ ನಡೆಸಲಾಗುವುದು. ಶೀಘ್ರದಲ್ಲೇ ನೇಮಕಾತಿ ಶಿಬಿರಗಳು ದೇಶಾದ್ಯಂತ ನಡೆಯಲಿವೆ ಎಂದು ಹೇಳಿದ್ದಾರೆ. ಅಲ್ಲದೆ, ಇತರೇ ಸೈನಿಕರಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗುವುದೋ ಅವನ್ನು ಅಗ್ನಿವೀರರಿಗೂ ಕೊಡಲಾಗುವುದು. ಕರ್ತವ್ಯ ಸಂದರ್ಭ ಅಪಾಯ ಸಂಭವಿಸಿದಲ್ಲಿ ಒಂದು ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಲಾಗುವುದು ಎಂದು ತಿಳಿಸಿದ್ದಾರೆ.
The ‘Agniveers’ will get the same allowances that are applicable to the regular soldiers serving at present and there is no discrimination against them in service conditions, said Department of Military Affairs Additional Secretary Lt General Anil Puri in a press conference on the issue of Agniveer recruitment scheme.In the press conference, Puri said the announcements regarding the reservations for ‘Agniveers’ by different ministries and departments were pre-planned and not in reaction to the arson that happened after Agnipath scheme announcement.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm