ಬ್ರೇಕಿಂಗ್ ನ್ಯೂಸ್
17-06-22 12:18 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 17: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಅಗ್ನಿಪಥ್ ಸೇನಾ ನೇಮಕಾತಿ ವಿರೋಧಿಸಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಯುವ ಸಮುದಾಯ ತೀವ್ರ ಪ್ರತಿಭಟನೆಗಿಳಿದಿದ್ದು, ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಡಿಸಿಎಂ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ.
ಉತ್ತರ ಪ್ರದೇಶದ ಹಲವು ಕಡೆ ಆಕ್ರೋಶಿತ ಯುವಕರು ರ್ಯಾಲಿ ನಡೆಸಿದ್ದಾರೆ. ಬಾಲಿಯಾ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಕಲ್ಲು ತೂರಿದ್ದಾರೆ. ಅಲ್ಲಿ ನಿಲ್ಲಿಸಿದ್ದ ರೈಲೊಂದಕ್ಕೆ ಬೆಂಕಿ ಹಚ್ಚಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಹರ್ಯಾಣದ ಫರೀದಾಬಾದ್ ಜಿಲ್ಲೆಯಲ್ಲೂ ಭಾರೀ ಪ್ರತಿಭಟನೆ ನಡೆದಿದ್ದು ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಮೊಬೈಲ್ ಇಂಟರ್ನೆಟ್, ಎಸ್ಎಂಎಸ್ ಸೇವೆಯನ್ನು ಸ್ಥಗಿತ ಮಾಡಲಾಗಿದೆ.
ಬಿಹಾರದಾದ್ಯಂತ ಪ್ರತಿಭಟನೆ, ಹಿಂಸಾಚಾರ ತಲೆದೋರಿದ್ದು, ಹಲವು ಕಡೆ ರೈಲು ಹಳಿಗಳ ಮೇಲೆ ಬೆಂಕಿ ಹಚ್ಚಲಾಗಿದೆ. ಹೆದ್ದಾರಿಯಲ್ಲಿ ಟೈರ್ ಸುಟ್ಟು ಹಾಕಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಸಿಕಂದರಾಬಾದ್, ಔರಂಗಾಬಾದ್ ಜಿಲ್ಲೆಗಳಲ್ಲಿ ಭಾರೀ ಆಕ್ರೋಶ ಕಂಡುಬಂದಿದೆ. ನಿರುದ್ಯೋಗಿ ಯುವಕರು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದಿದ್ದಾರೆ. ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಸುಮಾರು 38 ರೈಲುಗಳ ಸಂಚಾರವನ್ನು ಸ್ಥಗಿತ ಮಾಡಲಾಗಿದೆ.
ಉತ್ತರ ಪ್ರದೇಶದ ಆಗ್ರಾ- ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಯುವಕರು ಪ್ರತಿಭಟನೆಗಿಳಿದಿದ್ದು, ಸರಕಾರಿ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಿದ್ದಾರೆ. ಬಿಹಾರದ ಸಮಸ್ತಿಪುರ್ ಎಂಬಲ್ಲಿ ಸಂಪರ್ಕ್ ಕ್ರಾಂತಿ ರೈಲಿಗೆ ಬೆಂಕಿ ಹಚ್ಚಲಾಗಿದೆ. ಪ್ರಯಾಣಿಕರು ಇಳಿದು ಹೋಗಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. ಬಿಹಾರದ ಅಲ್ಲಲ್ಲಿ ಆಕ್ರೋಶಿತರು ಬೆಂಕಿಯ ಉಂಡೆಗಳನ್ನು ಹಿಡಿದು ರೈಲ್ವೇ ನಿಲ್ದಾಣಕ್ಕೆ ನುಗ್ಗಿದ್ದಾರೆ. ರೈಲು ಹಳಿಗಳಲ್ಲಿಯೇ ಅಡ್ಡ ನಿಂತು ಬೆಂಕಿ ಹಚ್ಚುತ್ತಿದ್ದಾರೆ. ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿಯಲ್ಲಿ ಯುವಕರ ಆಕ್ರೋಶ ಹೆಚ್ಚಾಗುತ್ತಿದ್ದು, ಇಡೀ ಉತ್ತರ ಭಾರತಕ್ಕೆ ಅಗ್ನಿಪಥದ ಕಿಚ್ಚು ಹಬ್ಬುತ್ತಿದೆ.
ಅಗ್ನಿಪಥಕ್ಕೆ ಯುವಕರ ಆಕ್ರೋಶ ಯಾಕೆ ?
ಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆಗೈದು ಬಳಿಕ ಹಿಂತಿರುಗಲು ಅನುವಾಗುವಂತೆ ಹೊಸ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದೆ. ಆದರೆ, ವಿದ್ಯಾರ್ಥಿಗಳು ತಾವು ನಾಲ್ಕು ವರ್ಷಗಳ ಸೇವೆಯ ಬಳಿಕ ಮತ್ತೆ ಎಲ್ಲಿಗೆ ಹೋಗಬೇಕು, ಆನಂತರ ಎಲ್ಲಿ ಉದ್ಯೋಗ ಸಿಗುತ್ತದೆ ಅನ್ನುವುದು ಅವರ ಪ್ರಶ್ನೆ. ಕೇಂದ್ರ ಸರಕಾರ ಪಿಂಚಣಿ, ಇತರ ಸೇವೆಗಳನ್ನು ಉಳಿಸುವುದಕ್ಕಾಗಿ ಈ ರೀತಿಯ ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದೆ. ಯುವಕರಿಗೆ ತಕ್ಷಣಕ್ಕೆ ಉದ್ಯೋಗ ಕೊಡುವುದಕ್ಕಾಗಿ 46 ಸಾವಿರ ಮಂದಿಯನ್ನು ಈಮೂಲಕ ಸೇರಿಸಿಕೊಳ್ಳುತ್ತೇವೆಂದು ನಾಟಕ ಮಾಡುತ್ತಿದೆ ಅನ್ನುವುದು ಯುವಕರ ಆಕ್ರೋಶ. ಅದಲ್ಲದೆ, ಎರಡು ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆ ನಡೆದು ಅರ್ಧಕ್ಕೆ ಸ್ಥಗಿತಗೊಂಡಿದೆ. ಪರೀಕ್ಷೆ ಬರೆದು ದೈಹಿಕ ಅರ್ಹತೆಗಳನ್ನು ಪೂರೈಸಿದರೂ, ನೇಮಕಾತಿ ಮಾಡದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ನಮ್ಮ ಗತಿಯೇನು ಎಂದು ಬಿಹಾರದಲ್ಲಿ ಪರೀಕ್ಷೆ ಬರೆದು ಉದ್ಯೋಗ ಸಿಗದವರ ಆಕ್ರೋಶ.
ಬಿಹಾರದಲ್ಲಿ ಅತಿ ಹೆಚ್ಚು ನಿರುದ್ಯೋಗಿಗಳಿದ್ದು, ಉದ್ಯೋಗಕ್ಕಾಗಿ ಬೇರೆ ಬೇರೆ ನಗರಗಳಲ್ಲಿ ವಲಸೆ ಹೋಗುವ ಸ್ಥಿತಿಯಿದೆ. ಸೇನೆ, ಪೊಲೀಸ್ ಇಲಾಖೆಗೆ ಹೆಚ್ಚಾಗಿ ಅಲ್ಲಿನ ಮಂದಿಯೇ ಸೇರುತ್ತಿದ್ದಾರೆ. ಈಗ ಸೇನಾ ನೇಮಕಾತಿ ನೆಪದಲ್ಲಿ ಅಗ್ನಿಪಥ ಯೋಜನೆ ರೂಪಿಸಿ, ನಾಲ್ಕು ವರ್ಷಗಳ ಸೇವೆಗೆ ಸೀಮಿತಗೊಳಿಸಿದ್ದು, ಯುವಕರನ್ನು ಆಬಳಿಕ ಬೀದಿಗೆ ನೂಕಿದಂತಾಗುತ್ತದೆ ಎಂಬ ಆಕ್ರೋಶ ತೋಡಿಕೊಂಡು ಯುವಕರು ಬೀದಿಗಿಳಿದಿದ್ದಾರೆ.
Nationwide protests continue for the third day on Friday against the central government’s Agnipath scheme in Bihar, Madhya Pradesh, Haryana, Rajasthan, Uttar Pradesh and Delhi. The protesters mainly consist of young people voicing dissent against the government’s four-year scheme. The Centre on Tuesday had unveiled the Agnipath scheme that will allow youngsters aged 17.5 to 21 to be inducted into any of the three services of the Army as “agniveers” for a period of four years. However, in a one-time waiver, the Central government has increased the upper age limit for the Agnipath scheme from 21 to 23 years.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm