ಬ್ರೇಕಿಂಗ್ ನ್ಯೂಸ್
14-06-22 04:00 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 14: ದೇಶ ಸೇವೆ ಮಾಡಬೇಕು, ಅಲ್ಪಕಾಲವಾದ್ರೂ ದೇಶದ ಗಡಿ ಕಾಯಬೇಕು ಅನ್ನುವ ಹುಮ್ಮಸ್ಸು ಹಲವರಿಗಿರುತ್ತದೆ. ಯುವಜನರನ್ನು ದೇಶಸೇವೆಗೆ ಆಕರ್ಷಿಸುವ ಸಲುವಾಗಿ ಕೇಂದ್ರ ಸರಕಾರ ಯುವಕ-ಯುವತಿಯರಿಗಾಗಿ ನಾಲ್ಕು ವರ್ಷಗಳ ಅವಧಿಗೆ ವಿಶೇಷ ಸೇನಾ ನೇಮಕಾತಿಗೆ ಆಫರ್ ನೀಡಿದೆ. 17.5ರಿಂದ 21 ವರ್ಷದ ನಡುವಿನ ಯುವಜನರು ಅಗ್ನಿಪಥ್ ಎನ್ನುವ ಹೊಸ ಯೋಜನೆಯಡಿ ಸೇನೆಯ ಮೂರೂ ವಿಭಾಗಕ್ಕೆ ಸೇರ್ಪಡೆಯಾಗಲು ಅವಕಾಶ ಇರುತ್ತದೆ.
ಅಲ್ಪಾವಧಿಯ ಸೇನಾ ನೇಮಕಾತಿ ನಿಯಮವನ್ನು ಕೇಂದ್ರ ಸರಕಾರ ಮಂಗಳವಾರ (ಜೂನ್14) ಬಿಡುಗಡೆ ಮಾಡಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಟೂರ್ ಆಫ್ ಡ್ಯೂಟಿ ಎನ್ನುವ ಹೆಸರಲ್ಲಿ ಹೊಸ ನೇಮಕಾತಿ ಯೋಜನೆಯನ್ನು ರೂಪಿಸುವುದಾಗಿ ಹೇಳಿದ್ದರು. ಅದೇ ಯೋಜನೆಯಡಿ ಅಗ್ನಿಪಥ್ ಸೇನಾ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ನಾಲ್ಕು ವರ್ಷಗಳ ಕಾಲ ಯೋಧರಾಗಿ ಬಿಡುಗಡೆಯಾಗುವವರನ್ನು ಅಗ್ನಿವೀರ್ ಎನ್ನಲಾಗುತ್ತದೆ. ಅವರಿಗೆ ಸೇವಾವಧಿಯಲ್ಲಿ ಉತ್ತಮ ಸಂಬಳದ ಜೊತೆಗೆ ಬಿಡುಗಡೆ ವೇಳೆ ಸೇನಾ ಯೋಧರಿಗೆ ನೀಡುವಷ್ಟೇ ಉತ್ತಮ ಪ್ಯಾಕೇಜನ್ನು ನೀಡಲಾಗುತ್ತದೆ. ದೇಶಕ್ಕಾಗಿ ಸಮವಸ್ತ್ರ ತೊಟ್ಟ ಗೌರವದ ಜೊತೆಗೆ ಕೌಶಲ್ಯ, ತರಬೇತಿಯಿಂದಾಗಿ ಉತ್ತಮ ದೇಹದಾರ್ಢ್ಯವೂ ಬಳುಬಳಿಯಾಗಿ ಸಿಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಯುದ್ಧ ಇನ್ನಿತರ ಸಂದರ್ಭಗಳಲ್ಲಿ ದೇಶದ ಯುವಶಕ್ತಿಯ ಸದ್ಬಳಕೆಗಾಗಿ ಈ ರೀತಿಯ ಯೋಜನೆ ಉತ್ತಮ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹೇಳಿದ್ದಾರೆ.
ಅಗ್ನಿಪಥ್ ನೇಮಕಾತಿ ನಿಮಯಗಳು
ಅಗ್ನಿಪಥ್ ಯೋಜನೆಯಡಿ ಅಲ್ಪಾವಧಿಗೆ ಯೋಧರಾಗಿ ಆಯ್ಕೆಗೊಳ್ಳಲು ಸೇನೆಗಿರುವ ಸಾಮಾನ್ಯ ಅರ್ಹತೆಗಳೇ ಮಾನದಂಡ. ವಯಸ್ಸು 17.5ರಿಂದ 21ರ ಒಳಗಿರಬೇಕು. ಯುವಕ-ಯುವತಿಯರಿಗೆ ವಯಸ್ಸು ಸಮಾನವಾಗಿರುತ್ತದೆ. ವೇತನ 30 ಸಾವಿರದಿಂದ 40 ಸಾವಿರ ವರೆಗೆ ಇರುತ್ತದೆ. ಭೂಸೇನೆ, ನೌಕಾಸೇನೆ, ವಾಯುಪಡೆಗೆ ಇರಬೇಕಾದ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ನಾಲ್ಕು ವರ್ಷಗಳ ಸೇವೆಯ ಬಳಿಕ ಅವರನ್ನು ಸೇನೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ 25 ಶೇಕಡಾ ಮಂದಿಯನ್ನು ಸೇವಾವಧಿಯಲ್ಲಿ ನೀಡಿದ ಚಾತುರ್ಯ ಪರಿಗಣಿಸಿ, ಸೇನೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.
ಆನ್ ಲೈನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ. ಬೇರೆ ಬೇರೆ ವಿಭಾಗಕ್ಕೆ ಶೈಕ್ಷಣಿಕ ಅರ್ಹತೆಗಳೂ ಪ್ರತ್ಯೇಕ ಇರುವುದರಿಂದ ಆಯಾ ವಿಭಾಗಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಕೆಟಗರಿಯಲ್ಲಿ ಸೈನಿಕನಾಗಲು ಶೈಕ್ಷಣಿಕ ಅರ್ಹತೆ ಹತ್ತನೇ ಕ್ಲಾಸ್ ಪಾಸ್ ಆಗಿರಬೇಕು. ಸೇವಾವಧಿಯಲ್ಲಿ ಅಪಾಯ ಸಂಭವಿಸಿದಲ್ಲಿ ಇತರೇ ಯೋಧರಿಗೆ ಇರುವಂಥದ್ದೇ ಸೌಲಭ್ಯಗಳು ದೊರಕುತ್ತವೆ. ನಾಲ್ಕು ವರ್ಷಗಳ ಸೇವೆಯ ಬಳಿಕ ಕರ್ತವ್ಯದಿಂದ ಬಿಡುಗಡೆಯ ವೇಳೆ ಸೇವಾ ನಿಧಿ ಅನ್ನುವ ಹೆಸರಲ್ಲಿ ಸೇವಾ ನಿಯಮ ಆಧರಿಸಿ ನಿರ್ದಿಷ್ಟ ಇಡುಗಂಟನ್ನು ಪಾವತಿ ಮಾಡಲಾಗುತ್ತದೆ. ಸೇವಾನಿಧಿ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯ್ತಿ ಇರುತ್ತದೆ. ಅಲ್ಲದೆ, ಅಗ್ನಿವೀರ್ ಸೇರ್ಪಡೆಯಾಗುವ ಯೋಧರಿಗೆ 48 ಲಕ್ಷ ರೂಪಾಯಿ ಮೊತ್ತದ ಉಚಿತ ಇನ್ಶೂರೆನ್ಸ್ ಕೂಡ ಇರುತ್ತದೆ.
The Centre on Tuesday today unveiled a new short-term recruitment policy for Indian youth to serve in the armed forces. Termed Agnipath, the scheme will enable youngsters aged 17.5 to 21 to be inducted into any of the three services as “agniveers” for a period of four years.The Agnipath scheme, earlier christened as "Tour of Duty", was launched in the presence of Union Minister of Defence Rajnath Singh and the chiefs of the three services.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm