ಬ್ರೇಕಿಂಗ್ ನ್ಯೂಸ್
09-06-22 09:52 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 9: ಪ್ರವಾದಿ ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿಯ ಹೇಳಿಕೆಯಿಂದಾಗಿ ಮುಸ್ಲಿಂ ರಾಷ್ಟ್ರಗಳ ಖಂಡನೆ, ಆಕ್ರೋಶದ ಕಾರಣ ಭಾರತದಲ್ಲಿ ವಿಭಿನ್ನ ರೀತಿಯ ಅಲೆಯೆದ್ದಿದೆ. ಇವೆಲ್ಲದರ ಮಧ್ಯೆ ಭಾರತದಿಂದ ಓಡಿಹೋಗಿ ದೂರದ ಈಕ್ವೆಡಾರ್ ಬಳಿಯ ದ್ವೀಪ ಒಂದರಲ್ಲಿ ಕೈಲಾಸ ಎಂದು ನಾಮಕರಣ ಮಾಡಿಕೊಂಡು ಬೇರೆಯದ್ದೇ ದೇಶ ಸೃಷ್ಟಿಸಿದ್ದಾನೆ ಎನ್ನಲಾಗಿರುವ ಸ್ವಾಮಿ ನಿತ್ಯಾನಂದ, ಪೈಗಂಬರ್ ಕುರಿತ ಭಾರತದ ರಾಜಕಾರಣಿಗಳ ಹೇಳಿಕೆಯನ್ನು ಖಂಡಿಸಿದ್ದಾರೆಂಬ ಟ್ವೀಟ್ ಭಾರೀ ವೈರಲ್ ಆಗಿದೆ.
ಮಿನಿಸ್ಟ್ರಿ ಆಫ್ ಫಾರಿನ್ ಅಫೇರ್ಸ್ ಕೈಲಾಸ (ಸ್ವಾಮಿ ನಿತ್ಯಾನಂದರ ದ್ವೀಪ ದೇಶ) ಹೆಸರಲ್ಲಿ ಟ್ವೀಟ್ ಮಾಡಲಾಗಿದ್ದು, ಅದರಲ್ಲಿ ಪ್ರವಾದಿಯನ್ನು ನಿಂದಿಸಿದ ಬಿಜೆಪಿ ನಾಯಕಿಯ ನಡೆಯನ್ನು ಖಂಡಿಸಿದ್ದಲ್ಲದೆ, ಆಡಳಿತ ಪಕ್ಷವು ಅಮಾನತು ಕ್ರಮ ತೆಗೆದುಕೊಂಡಿರುವುದನ್ನು ಸ್ವಾಗತಿಸುತ್ತದೆ ಎಂದು ಹೇಳಿತ್ತು. ಅಲ್ಲದೆ, ಈ ಬಗ್ಗೆ ಸ್ಪಷ್ಟನೆ ಕೇಳಿ ಭಾರತದ ರಾಯಭಾರ ಕಚೇರಿಗೆ ನೋಟೀಸ್ ಮಾಡಿರುವುದಾಗಿಯೂ ಅದರಲ್ಲಿ ಹೇಳಲಾಗಿತ್ತು.
ಹಲವಾರು ಮುಸ್ಲಿಂ ರಾಷ್ಟ್ರಗಳು ಭಾರತದ ಆಡಳಿತ ಪಕ್ಷದ ನಾಯಕಿಯೊಬ್ಬರು ಈ ರೀತಿ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಲ್ಲದೆ, ರಾಯಭಾರ ಕಚೇರಿಗೆ ಸ್ಪಷ್ಟನೆ ಕೇಳಿ ನೋಟೀಸ್ ನೀಡಿದ್ದವು. ಇದೇ ಸಂದರ್ಭದಲ್ಲಿ ಭಾರತ ಮೂಲದವರೇ ಸೃಷ್ಟಿಸಿರುವ ಕೈಲಾಸ ದೇಶದಿಂದಲೂ ಅದೇ ರೀತಿಯ ಖಂಡನೆ ಬಂದಿರುವುದು ಅಚ್ಚರಿಗೆ ಕಾರಣವಾಗಿತ್ತು. ಕೆಲವು ಇಂಗ್ಲಿಷ್ ವೆಬ್ ಸೈಟ್ ಗಳಲ್ಲಿ ಇದೇ ಟ್ವೀಟ್ ಆಧರಿಸಿ ಸುದ್ದಿಯನ್ನೂ ಪ್ರಕಟಿಸಲಾಗಿತ್ತು. ಆದರೆ, ಕೈಲಾಸ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅದೊಂದು ಫೇಕ್ ಟ್ವೀಟ್ ಅನ್ನೋದು ಸಾಬೀತಾಗಿದೆ.
ಕೈಲಾಸ ನಿತ್ಯಾನಂದ ಪರಮಶಿವಂ ಎನ್ನುವ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಆ ರೀತಿಯ ಯಾವುದೇ ಖಾತೆ ತಮ್ಮಲ್ಲಿ ಇಲ್ಲ ಎಂದು ಹೇಳಿದೆ. Kailasa Ministry of Foreign Affairs ಅನ್ನುವ ಖಾತೆ ನಮ್ಮಲ್ಲಿ ಇಲ್ಲ. ಅದು ಫೇಕ್ ಅಕೌಂಟ್ ಎಂದು ಸ್ಪಷ್ಟನೆ ನೀಡಿದೆ. ಇದೇ ವೇಳೆ, ಕೆಲವು ನೆಟ್ಟಿಗರು ಆ ರೀತಿ ಖಂಡಿಸಿದ ಹೇಳಿಕೆ ನೀಡಿದ ಟ್ವೀಟ್ ಖಾತೆಯ ಹಿನ್ನೆಲೆಯನ್ನು ಶೋಧ ನಡೆಸಿದ್ದಾರೆ. @ShruthisharmaIAS ಎನ್ನುವ ಹೆಸರಲ್ಲಿ ನಕಲಿ ಖಾತೆಯಿಂದ ಈ ಟ್ವೀಟ್ ಮಾಡಲಾಗಿದ್ದು, ಅದರ ಅಸಲಿ ಟ್ವಿಟರ್ ಯೂಸರ್ ಐಡಿಯನ್ನು ಹೆಕ್ಕಿ ತೆಗದು ಮರು ಟ್ವೀಟ್ ಮಾಡಿದ್ದಾರೆ. ಹಾಗಾಗಿ ನಿತ್ಯಾನಂದ ಸ್ವಾಮಿ ಹೆಸರಲ್ಲಿ ನಕಲಿ ಟ್ವೀಟ್ ಮಾಡಿ, ಭಾರತಕ್ಕೇ ತಿರುಗು ಬಾಣ ಇಟ್ಟಿರುವಂತೆ ಯಾರೋ ತೋರಿಸಲು ಯತ್ನಿಸಿದ್ದರು ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ.
We want to warn all the Kailasavasis, Devotees and everyone that this is NOT the official account of the Kailasa’s Ministry of Foreign Affairs and a FAKE account https://t.co/OvUEJYqhAY pic.twitter.com/2sEze48A9r
— KAILASA'S SPH JGM HDH Nithyananda Paramashivam (@SriNithyananda) June 9, 2022
A purported tweet by the Ministry of Foreign Affairs of Kailasa (fugitive god-man Swami Nithyananda's island nation) which condemns "Indian politicians" for making defamatory comments against Prophet Muhammad, has gone viral. The tweet comes while India is facing severe diplomatic backlash from several Muslims countries including Qatar, Saudi Arabia, the United Arab Emirates, Oman, Indonesia, Malaysia, Pakistan, Iran, and Afghanistan, because of the comments made by suspended Bharatiya Janata Party (BJP) Spokesperson Nupur Sharma and a tweet by the former media head of the party's Delhi unit, Naveen Jindal.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm