ಬ್ರೇಕಿಂಗ್ ನ್ಯೂಸ್
04-05-22 08:50 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 4: ಪೊಲೀಸ್ ಅಧಿಕಾರಿಯಾಗುವ ಆಸೆಯಿಂದ ಏನೇನೋ ಕಿತಾಪತಿ ಮಾಡಲು ಹೋಗಿ ಈಗ ಜೈಲು ಸೇರುವ ಸರದಿ ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳದ್ದು. ಕೆಲವರು ಹೊಲ, ಮನೆ ಮಾರಿ ದುಡ್ಡು ಸಂಗ್ರಹಿಸಿ, ಪಿಎಸ್ಐ ಹುದ್ದೆ ಗಿಟ್ಟಿಸಲು ಗಂಟು ಕೊಟ್ಟಿದ್ದರೆ, ಇನ್ನು ಕೆಲವರು ಪೊಲೀಸ್ ಅಧಿಕಾರಿಯಾಗುವ ಆಸೆಯಿಂದ ಅಡ್ಡದಾರಿ ಹಿಡಿದು ಈಗ ಜೈಲು ಸೇರುತ್ತಿದ್ದಾರೆ. ಕೆಲವರು ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಹುದ್ದೆ ಗಿಟ್ಟಿಸಿದರೂ, ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನುವಂತಹ ಸ್ಥಿತಿ.
ಗಂಡ ದುಡಿದಿಟ್ಟ ಹಣ ಕೊಟ್ಟಿದ್ದ ಶಾಂತಿಬಾಯಿ
ಆಕೆಯ ಹೆಸರು ಶಾಂತಿಬಾಯಿ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತಾಂಡಾವೊಂದರ ನಿವಾಸಿ. ಗಂಡ ಅರೆಗುತ್ತಿಗೆ ಕೆಲಸ ಮಾಡ್ತಿರೋ ಬಸವರಾಜ್. ಪಿಎಸ್ಐ ಪರೀಕ್ಷೆ ಬರೆದಿದ್ದ ಶಾಂತಿಬಾಯಿ ಸುಲಭದಲ್ಲಿ ಕೆಲಸ ಗಿಟ್ಟಿಸುವುದಕ್ಕಾಗಿ ಗಂಡ ಕೂಡಿಟ್ಟಿದ್ದ 10 ಲಕ್ಷ ರೂಪಾಯಿ ಹಣ ನೀಡಿದ್ದಳು. ನಗರಸಭೆ ಕ್ಲರ್ಕ್ ಆಗಿದ್ದ ಜ್ಯೋತಿ ಪಾಟೀಲ್ ಮೂಲಕ ಪರಿಚಯ ಆಗಿದ್ದ ಅಕ್ರಮದ ಕಿಂಗ್‌ಪಿನ್ ಎನ್ನಲಾಗಿರುವ ನೀರಾವರಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಮಂಜುನಾಥ್‌ಗೆ ಹಣ ನೀಡಿದ್ದಳು.
ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆಗಿದ್ದ ಶಾಂತಿಬಾಯಿ, ಅಕ್ರಮ ಹೊರಬರುವುದಕ್ಕೂ ಮುನ್ನ ತಿರುಪತಿಗೆ ಹೋಗಿ ತನ್ನ ಮುಡಿ ಕೊಟ್ಟು ಬಂದಿದ್ದಳು. ತಿರುಪತಿಯಿಂದ ತಂದ ಲಡ್ಡು ಪ್ರಸಾದವನ್ನು ಪರೀಕ್ಷೆ ಪಾಸ್ ಮಾಡಿಸಿದ್ದ ಇಂಜಿನಿಯರ್ ಮಂಜುನಾಥ್ ಮೇಳಕುಂದಿಗೆ ಕೊಡಲು ಹೋಗಿದ್ದಳು. ಆಗ ನಿನ್ನ ಲಡ್ಡು ಯಾರಿಗೆ ಬೇಕಮ್ಮ. ಉಳಿದ ಹಣ ಮೊದಲು ಕೊಡು ಅಂತ ಮಂಜುನಾಥ್ ಕೇಳಿದ್ದ. ಇದೇ ವೇಳೆಗೆ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಹೊರಬೀಳುತ್ತಿದ್ದಂತೆ ಶಾಂತಿಬಾಯಿ ತನ್ನ ಗಂಡನೊಂದಿಗೆ ಊರನ್ನೇ ಬಿಟ್ಟು ಹೋಗಿದ್ದಾಳೆ.
ಸಿಐಡಿ ಬಲೆಗೆ ಬಿದ್ದ ತಂದೆ- ಮಗ
ಸಿಐಡಿ ಬಲೆಗೆ ಬಿದ್ದಿರುವ ರಾಜಾಪುರ ಬಡಾವಣೆಯ ನಿವಾಸಿಗಳಾದ ಶರಣಪ್ಪ ಮತ್ತು ಆತನ ಮಗ ಪ್ರಭು ಪರಿಸ್ಥಿತಿಯೇ ಇನ್ನೊಂದು ತೆರನಾದ್ದು. ಶರಣಪ್ಪ, ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಕಟ್ಟಿಸುತ್ತಿರುವ ಭವ್ಯ ಬಂಗಲೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡ್ತಿದ್ದ. ಈ ವೇಳೆ ಮಂಜುನಾಥ್ ಸರಕಾರಿ ಕೆಲಸ ಮಾಡಿಕೊಡ್ತಾನೆ ಅನ್ನೋದನ್ನು ತಿಳಿದು ತನ್ನ ಮಗನಿಗೂ ಕೆಲಸ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ. ಈ ವೇಳೆ, ಪಿಎಸ್ಐ ಹುದ್ದೆಗೆ ಕಾಲ್ ಫಾರ್ ಮಾಡಿದ್ದಾರೆಂದು ಮಂಜುನಾಥನೇ ಶರಣಪ್ಪನಿಗೆ ತಿಳಿಸಿದ್ದು ಡಬಲ್ ಸ್ಟಾರ್ ಪೋಸ್ಟ್ ತೆಗೆಸಿಕೊಡಲು ಬರೋಬ್ಬರಿ 50 ಲಕ್ಷ ಬೇಕಾಗುತ್ತೆ ಎಂದು ಹೇಳಿದ್ದ.
ಹೇಗೂ ಮಗ ಪೊಲೀಸ್ ಇನ್ಸ್ ಪೆಕ್ಟರ್ ಆಗ್ತಾನಲ್ಲಾ ಎಂಬ ಮಹದಾಸೆಯಿಂದ ಕೈಸಾಲ ಮಾಡಿಯಾದ್ರೂ ತೀರಿಸ್ತೀನಿ ಎಂದು ಶರಣಪ್ಪ ಹಣ ಹೊಂದಿಸಲು ಮುಂದಾಗಿದ್ದ. ಅಷ್ಟೇ ಅಲ್ಲ, ತನ್ನಲ್ಲಿದ್ದ 30 ಲಕ್ಷ ಬೆಲೆಬಾಳುವ ಸೈಟ್ ಒಂದನ್ನು ಮಾರಾಟ ಮಾಡಿದ್ದಲ್ಲದೆ, ಆನಂತರ 20 ಲಕ್ಷ ಬೇರೆಯವರಲ್ಲಿ ಕೈಸಾಲ ಮಾಡಿ ಒಟ್ಟು 50 ಲಕ್ಷವನ್ನು ಮಂಜುನಾಥ್ ಕೈಗೆ ನೀಡಿದ್ದ. ಕಷ್ಟದ ದುಡ್ಡನ್ನು ಕೊಟ್ಟು ಮಗನಿಗೆ ಡಬಲ್ ಸ್ಟಾರ್ ಆಗಬೇಕೆಂದು ಕನಸು ಕಂಡಿದ್ದ ಶರಣಪ್ಪ ಈಗ ಮಗನ ಜೊತೆಯಲ್ಲೇ ಜೈಲು ಕಂಬಿ ಎಣಿಸುತ್ತಿದ್ದಾರೆ. ಸಾಲ ಮಾಡಿ ಕೊಟ್ಟಿದ್ದ ಹಣವೂ ಹೋಯ್ತು. ಮಾರಿದ್ದ ಸೈಟೂ ಹೋಯ್ತು ಅನ್ನೋ ಸ್ಥಿತಿ ತಂದೆ- ಮಗನದ್ದು.
ಆಕೆ ರಾಜ್ಯಕ್ಕೇ ಟಾಪರ್ ಆದ್ರೂ ಜೈಲು ಪಾಲು !
ನೋಡಲು ಗಂಡು ಹುಡುಗರ ರೀತಿ ಬಾಬ್ ಕಟ್ ಮಾಡಿ ಆಕರ್ಷಕವಾಗಿರೋ ಆಕೆಯ ಹೆಸರು ರಚನಾ ಹನುಮಂತ ಮುತ್ತಲಗೇರಿ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ರಚನಾಳನ್ನು ಸಣ್ಣಂದಿನಿಂದಲೂ ಹುಡುಗರ ರೀತಿಯಲ್ಲೇ ಆಕೆಯನ್ನು ಬೆಳೆಸಿದ್ದರು. ಮೊನ್ನೆ ಪಿಎಸ್ಐ ಪರೀಕ್ಷೆ ಬರೆದು ರಿಸಲ್ಟ್ ಬಂದಾಗ, ಮಹಿಳಾ ವಿಭಾಗದಲ್ಲಿ ರಚನಾ ಟಾಪರ್ ಆಗಿ ತೇರ್ಗಡೆಯಾಗಿದ್ದಳು. ಕಷ್ಟದಲ್ಲಿ ಓದಿ ಬೆಳೆದಿದ್ದ ರಚನಾ ರಾಜ್ಯಕ್ಕೆ ಟಾಪರ್ ಆಗಿದ್ದನ್ನು ತಿಳಿದ ಕುಟುಂಬಸ್ಥರು ಭಾರೀ ಖುಷಿ ಪಟ್ಟಿದ್ದರು. ಆದರೆ ಪಿಎಸ್ಐ ಅಕ್ರಮದ ಬಗ್ಗೆ ಬೆನ್ನತ್ತಿದ್ದ ಅಧಿಕಾರಿಗಳು ಟಾಪರ್ ಆಗಿದ್ದ ರಚನಾಳನ್ನೂ ವಿಚಾರಣೆ ನಡೆಸಿದ್ದಾರೆ. ಓಎಂಆರ್ ಶೀಟಿನ ಪರಿಶೀಲನೆಯಲ್ಲಿ ವ್ಯತ್ಯಾಸ ಬಂದಿದ್ದರಿಂದ ರಚನಾ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಹೆಣ್ಣು ಮಗುವೆಂದು ಬಿಟ್ಟು ಹೋಗಿದ್ದ ತಂದೆ
ರಚನಾಳನ್ನು ಹುಡುಗರ ರೀತಿ ಬೆಳೆಸಿರುವ ಹಿಂದೆಯೇ ಮನ ಕರಗುವ ಕಹಾನಿ ಇದೆ. ಆಕೆಯ ತಾಯಿ ಸಾವಿತ್ರಿ ಗರ್ಭಿಣಿಯಾಗಿದ್ದಾಗ ಸೀಮಂತ ನಡೆಸುವುದಕ್ಕೆ ತವರು ಮನೆಯಿಂದ ಹಣ ತರಬೇಕೆಂದು ಗಂಡ ಪೀಡಿಸಿದ್ನಂತೆ. ಆನಂತರ ಹಣ ತರಲಿಲ್ಲವೆಂದು ಆಕೆಗೆ ಸೀಮಂತ ಕಾರ್ಯವನ್ನೂ ಮಾಡಿರಲಿಲ್ಲ. ಕೊನೆಗೆ ಸಾವಿತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹೆಣ್ಣಾಯ್ತು ಎಂಬ ಕಾರಣಕ್ಕೆ ಪತ್ನಿಯನ್ನೇ ಬಿಟ್ಟು ಗಂಡ ತೆರಳಿದ್ದ. ಆನಂತರ ಹೆಣ್ಮಗು ರಚನಾಳನ್ನು ಯಾವುದೇ ಗಂಡು ಮಗುವಿಗೂ ಕಡಿಮೆಯಾಗದಂತೆ ತಾಯಿ ಬೆಳೆಸಿದ್ದಳು. ಕೂದಲನ್ನು ಶಾರ್ಟ್ ಮಾಡಿಸಿ, ಹುಡುಗರ ರೀತಿಯಲ್ಲೇ ಪ್ಯಾಂಟ್, ಶರ್ಟ್ ತೊಡಿಸಿಯೇ ಬೆಳೆಸಿದ್ದಳು. ಚಿಕ್ಕಂದಿನಿಂದಲೂ ರಚನಾ ತಾಯಿ ಜೊತೆ ದೊಡ್ಡಮ್ಮನ ಮನೆಯಲ್ಲೇ ಬೆಳೆದಿದ್ದಳು. ಅಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿತು ಬಾಗಲಕೋಟೆಯ ವಾಗ್ದೇವಿ ಪಿಯು ಕಾಲೇಜಿನಲ್ಲಿ ಸೈನ್ಸ್ ಪೂರೈಸಿದ್ದಳು. ಆನಂತರ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಕಲಿತು ಕೂಡಗಿಯ ಎನ್ ಟಿಪಿಸಿ ಕೇಂದ್ರದಲ್ಲಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಳು.
ಈ ನಡುವೆಯೂ, ಮಗಳನ್ನು ಪೊಲೀಸ್ ಅಧಿಕಾರಿಯಾಗಿ ಮಾಡಬೇಕೆಂದು ತಾಯಿಗೆ ಬಯಕೆ ಇತ್ತು. ಅದರಂತೆ, ರಚನಾ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದು ತೇರ್ಗಡೆಯಾಗಿರಲಿಲ್ಲ. ಈ ಬಾರಿ ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು ಮೊದಲ ಸ್ಥಾನ ಪಡೆದಿದ್ದಳು. ರಾಜ್ಯಕ್ಕೆ ಟಾಪರ್ ಆಗಿದ್ದ ಹುಡುಗಿಯ ಫೋಟೊ ನೋಡಿ ಮೊದಲಿಗೆ ಅಧಿಕಾರಿಗಳು ಕೂಡ ಸಂಶಯಕ್ಕೀಡಾಗಿದ್ದರು. ಹುಡುಗನ ರೀತಿ ಇದ್ದುದರಿಂದ ಏನೋ ಎಡವಟ್ಟು ಆಗಿರಬೇಕೆಂದು ರಚನಾಳನ್ನು ಕಚೇರಿಗೆ ಕರೆಸಿ ಖಚಿತಪಡಿಸಿದ್ದರಂತೆ. ಇಂಥ ಹೆಣ್ಮಗಳ ಬಗ್ಗೆ ಈಗ ತನಿಖೆ ನಡೆಸ್ತಿರೋ ಅಧಿಕಾರಿಗಳಿಗೇ ಸಂಶಯ ಬಂದಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಮಾತ್ರ ದುಡಿದು ತಿನ್ನುವ ನಮಗೆ ಅಷ್ಟು ಹಣ ಎಲ್ಲಿಂದ ಬರಬೇಕು, ಯಾವುದೇ ತನಿಖೆಗೂ ಸಿದ್ಧರಿದ್ದೇವೆ. ನಮ್ಮ ಮಗಳನ್ನು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾರೆ.
States topper Shanthibai sent to jail after involvement in PSI scam in Karnataka. shanthibai from kalaburgi.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm