ಬ್ರೇಕಿಂಗ್ ನ್ಯೂಸ್
06-04-22 06:39 pm Bengaluru Correspondent ಕರ್ನಾಟಕ
ಬೆಂಗಳೂರು, ಎ.6: ಉರ್ದು ಮಾತನಾಡದ ಕಾರಣಕ್ಕೆ ದಲಿತ ಯುವಕನನ್ನು ಮುಸ್ಲಿಂ ಕೇರಿಯ ಯುವಕರು ಕೊಂದಿದ್ದಾರೆ ಎಂದು ಹೇಳಿಕೆ ನೀಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಡವಟ್ಟು ಮಾಡಿಕೊಂಡಿದ್ದಾರೆ. ಗೃಹ ಸಚಿವರ ಹೇಳಿಕೆ ರಾಜ್ಯದಲ್ಲಿ ರಾದ್ಧಾಂತ ಸೃಷ್ಟಿಸುತ್ತಲೇ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ ಕೊಟ್ಟಿದ್ದು, ಭಾಷೆಯ ಕಾರಣಕ್ಕೆ ಕೊಲೆ ನಡೆದಿದ್ದಲ್ಲ. ಅಪಘಾತದ ಬಳಿಕ ಮಾತಿಗೆ ಮಾತು ಬೆಳೆದು ಕೃತ್ಯ ಆಗಿತ್ತು ಎಂದು ತಿಳಿಸಿದ್ದಾರೆ.
ಎ.5ರ ಮಂಗಳವಾರ ರಾತ್ರಿ ಚಂದ್ರು ಮತ್ತು ಸೈಮನ್ ರಾಜ್ ಎಂಬಿಬ್ಬರು ಯುವಕರು ಮೈಸೂರು ರಸ್ತೆಯಲ್ಲಿ ಹೊರಟಿದ್ದು ತಡರಾತ್ರಿ ಕಾಟನ್ ಪೇಟೆ ರಸ್ತೆಗೆ ಬಂದಿದ್ದರು. ಈ ವೇಳೆ, ಎದುರಿನಿಂದ ಬರುತ್ತಿದ್ದ ಬೈಕ್ ಒಂದಕ್ಕೆ ಡಿಕ್ಕಿಯಾಗಿದ್ದರು. ಎದುರಿನ ಬೈಕಿನಲ್ಲಿದ್ದ ಶಾಹಿದ್ ಎಂಬ ಯುವಕನ ಜೊತೆಗೆ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಶಾಹಿದ್ ಚೂರಿ ತೆಗೆದು ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಚಂದ್ರುವನ್ನು ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಆದರೆ ಘಟನೆ ಬಗ್ಗೆ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜ್ಞಾನೇಂದ್ರ, ದಲಿತ ಯುವಕ ಮುಸ್ಲಿಮ್ ಏರಿಯಾಕ್ಕೆ ಹೋಗಿದ್ದಾಗ ಜಗಳ ನಡೆದಿದ್ದು, ಹುಡುಗನಿಗೆ ಕನ್ನಡ ಬಿಟ್ಟು ಬೇರಾವುದೇ ಭಾಷೆ ತಿಳಿದಿರಲಿಲ್ಲ. ಹೀಗಾಗಿ ಉರ್ದು ಮಾತನಾಡುವಂತೆ ಹೇಳಿ ಮುಸ್ಲಿಂ ಯುವಕರು ಹಲ್ಲೆಗೈದಿದ್ದು ಹುಡುಗ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದು ಭಾರೀ ಎಡವಟ್ಟಿಗೆ ಕಾರಣವಾಗಿತ್ತು. ರಾಜ್ಯಾದ್ಯಂತ ಕನ್ನಡ ಮಾತನಾಡದ ಕಾರಣಕ್ಕೆ ಕೊಲೆ ಮಾಡಿದ್ದಾ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಸುದ್ದಿ ವಾಹಿನಿಗಳಲ್ಲಿಯೂ ಇದೇ ಸುದ್ದಿ ಪ್ರಸಾರಗೊಂಡು ಹೊಸ ವಿವಾದಕ್ಕೆ ಕಾರಣವಾಗಿತ್ತು. ಆಬಳಿಕ ಪೊಲೀಸರು ಸ್ಪಷ್ಟನೆ ನೀಡಿದ್ದು, ದಯವಿಟ್ಟು ವೆರಿಫೈ ಮಾಡಿ ಸುದ್ದಿ ಪ್ರಸಾರ ಮಾಡಿ ಎಂದು ಹೇಳಿದ್ದಾರೆ. ಇದೇ ವೇಳೆ, ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಧ್ಯಾಹ್ನ ವೇಳೆಗೆ ಸಚಿವ ಜ್ಞಾನೇಂದ್ರ ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಟ್ಟು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
A complaint has been lodged against Home Minister Araga Jnanendra, who spoke to the police about the Bribe and the Biddirthtare dog dog seeking leftovers. A complaint has been lodged against the minister at Koppa police station in Chikkamagaluru district. Farmers' Union and Green Army leaders lodged a complaint today. The Home Minister's statement said the publics' lack of respect for the police was a complaint.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm