ಬ್ರೇಕಿಂಗ್ ನ್ಯೂಸ್
26-01-22 03:03 pm HK Desk news ಕರ್ನಾಟಕ
ಚಿಕ್ಕೋಡಿ, ಜ.26 : ಪ್ರವಾಹ ಸಂದರ್ಭದಲ್ಲಿ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ ಎಸಗಿದ ಒಂದೇ ಇಲಾಖೆಯ ಇಪ್ಪತ್ತು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಶಾಸಕ ಮಹೇಶ ಕುಮಠಳ್ಳಿ ಮನೆಯ ಪಕ್ಕದಲ್ಲೆ ಇರುವ ಹೆಸ್ಕಾಮ್ ಕಚೇರಿಯಲ್ಲಿ ಬಹುಕೋಟಿ ಹಗರಣ ಬಯಲಿಗೆ ಬಂದಿದೆ.
ಪ್ರವಾಹ ಕಾಮಗಾರಿ ಹೆಸರಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ್ದು ಇದಕ್ಕೆ ಕಾರಣವಾದ ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇಲಾಖೆಯ ಇಪ್ಪತ್ತು ಮಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನಲಾಗುತ್ತಿದ್ದು ಇಪ್ಪತ್ತು ಜನ ಹೆಸ್ಕಾಮ್ ಅಧಿಕಾರಿಗಳು ಅಮಾನತ್ತುಗೊಂಡಿದ್ದಾರೆ. ಮಳೆ ಗಾಳಿಗೆ ಬಿದ್ದ ವಿದ್ಯುತ್ ಕಂಬಗಳ ರಿಪೇರಿ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ವಿದ್ಯುತ್ ತಂತಿ ಬದಲಾವಣೆ ಸೇರಿದಂತೆ ಹೆಸ್ಕಾಮ್ ವಿಭಾಗದಲ್ಲಿ ಕೋಟ್ಯಂತರ ರೂ. ಮೊತ್ತದ ಕಾಮಗಾರಿ ನಡೆದಿದ್ದಾಗಿ ತೋರಿಸಲಾಗಿತ್ತು.
ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರುಗಳಾದ ಎಸ್. ಎಚ್ ಬಹುರೂಪಿ, ಆರ್. ಎಚ್ ಕಲಾರಿ, ಗೀತಾ ಕಡ್ಲಾಸ್ಕರ್, ಜಿ.ವಿ ಸಂಪನ್ನವರ, ವಿ.ಜಿ ನಾಯಕ ಮತ್ತು ಲೆಕ್ಕಾಧಿಕಾರಿ ಬಿ. ಎಂ ಪಾಟೀಲ, ಸಹಾಯಕ ಲೆಕ್ಕಾಧಿಕಾರಿಗಳಾದ ವೈ.ಎಸ್ ಕೆಳಗಡೆ, ಸಹಾಯಕ ಇಂಜನಿಯರಗಳಾದ ಮಲಕಪ್ಪ, ವಿ ಎ ಗಣಿ,ಎಸ್ ಬಿ ಬುಳ್ಳಗೌಡ, ಡಿ ಕೆ ಕಾಂಬಳೆ, ಆರ್ ಸಿ ರಾಠೋಡ ಹಾಗೂ ಕಿರಿಯ ಇಂಜನೀಯರ್ ಗಳಾದ ಎಸ್. ಎ ಪಾರ್ಥನಳ್ಳಿ, ಎನ್ ಬಿ ನೇಮಣ್ಣವರ, ಬಿ.ಎಸ್ ಶೀಲವಂತರ, ಎಸ್.ಬಿ ಮಹೀಷವಾಡಗಿ, ಜಿ.ಎಸ್ ಕೋಲಕಾರ, ಹಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹುಸುತ್ತಿದ್ದ ಎಂ.ಕೆ ಕುಲಕರ್ಣಿ, ಆಪರೇಟರ್ ಆಗಿದ್ದ ಸಿ.ಕೆ ಹಿರೇಮಠ ಮತ್ತು ಮಾಪಕ ಓದುಗ ಕೆ ಎಸ್ ಠಕ್ಕನ್ನವರ ಸೇರಿದಂತೆ ಇಪ್ಪತ್ತು ಜನರ ಅಮಾನತ್ತು ಆದೇಶ ಹೊರಬಿದ್ದಿದೆ.
ಸರ್ಕಾರದ ಯೋಜನೆಗಳಾದ ಗಂಗಾ ಕಲ್ಯಾಣ, ಕಾಪೆಕ್ಸ್, ವಾಟರ್ ಸಪ್ಲೈ, ಓಟಿ ಎಂ , ಪ್ಲಡ್ ಮತ್ತು ಅಡಿಷನಲ್ ಟಿಸಿ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿ ಅನುಷ್ಠಾನದಲ್ಲಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅಮಾನತ್ತುಗೊಳಿಸಲಾಗಿದೆ. ಶಾಸಕ ಮಹೇಶ ಕುಮಠಳ್ಳಿ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಅನ್ನುವದಕ್ಕೆ ಈ ಅಮಾನತ್ತು ಆದೇಶ ಕನ್ನಡಿ ಹಿಡಿದಂತಾಗಿದೆ. ಈ ಹಗರಣ ಹೊರಬಂದ ಮೇಲೆ ಇದೇ ರೀತಿಯ ಭ್ರಷ್ಟಾಚಾರದ ಬಗ್ಗೆ ಇತರ ಇಲಾಖೆಗಳ ಮೇಲೂ ಜನ ಸದ್ಯ ಅನುಮಾನದಿಂದ ನೋಡುವಂತಾಗಿದೆ.
Chikodi Flood relief crore scam 20 officers of the same department suspended for creating fake documents.
24-08-25 05:30 pm
Bangalore Correspondent
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
24-08-25 10:33 pm
HK News Desk
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm
MLA Veerendra Puppy, ED Raid: ಬೆಟ್ಟಿಂಗ್ ದಂಧೆ...
24-08-25 12:41 pm