ಬ್ರೇಕಿಂಗ್ ನ್ಯೂಸ್
04-10-21 01:21 pm Headline Karnataka News Network ಕರ್ನಾಟಕ
ಬೆಂಗಳೂರು, ಅ.4: ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಜಟಾಪಟಿಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಜೆಡಿಎಸ್ ಟಿಕೆಟ್ ಯಾರಿಗೆ ಕೊಟ್ಟಿದೆ ಅನ್ನೋದು ಸಿದ್ದರಾಮಯ್ಯಗೆ ಯಾಕೆ ಬೇಕು? ಸಿದ್ದರಾಮಯ್ಯ ಜನತಾ ದಳದ ಅಡುಗೆ ಕೋಣೆಯೊಳಗೆ ಇಣುಕಿ ನೋಡೋದ್ಯಾಕೆ? ಬೇರೆಯವರ ಅಡುಗೆ ಮನೆ, ಬೇರೆಯವರ ಬೆಡ್ ರೂಂ ಇಣುಕಿ ನೋಡಬಾರದು. ಜೆಡಿಎಸ್- ಕಾಂಗ್ರೆಸ್ ಚುನಾವಣೆಗೆ ಯಾರನ್ನಾದರೂ ನಿಲ್ಲಿಸಲಿ, ಅವರಿಬ್ಬರೂ ಸೇರಿ ಬಂದರೂ ನಾವು ಅವರನ್ನು ಸೋಲಿಸ್ತೀವಿ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ಮಸಾಲೆ ನಾವು ಬಳಸ್ತೀವಿ..
ನಾವು ನಮ್ಮ ಬಳಿ ಇರುವ ಮಸಾಲೆ ಬಳಸಿ ಅಡುಗೆ ಮಾಡ್ತೇವೆ ಹೊರತು ಬೇರೆಯವರ ಅಡುಗೆ ಮನೆಗೆ ಇಣುಕಿ ನೋಡಲ್ಲ. ಮುಂದಿನ ಜನ್ಮ ಅಂತಿದ್ರೆ ಅಲ್ಪ ಸಂಖ್ಯಾತನಾಗಿ ಹುಟ್ಟಬೇಕು ಅಂತ ಒಬ್ಬ ನಾಯಕರು ಹೇಳ್ತಿದ್ರು. ಈಗ ಅವರ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಸಿದ್ದರಾಮಯ್ಯಗೆ ಸಿಟಿ ರವಿ ಟಾಂಗ್ ಕೊಟ್ಟರು.
ಸದ್ಯದಲ್ಲೇ ಅಭ್ಯರ್ಥಿಗಳ ಘೋಷಣೆ
ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಆಂತರಿಕ ಹಾಗೂ ಗ್ರೌಂಡ್ ರಿಪೋರ್ಟ್ ಬಿಜೆಪಿ ಪರ ಇದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡು ಕ್ಷೇತ್ರಗಳಿಗೂ ಹಲವರ ಬಗ್ಗೆ ಚರ್ಚೆ ಆಗಿದೆ. ಅದರಲ್ಲಿ ಮೂರು, ಎರಡು ಹೆಸರುಗಳನ್ನು ಫೈನಲ್ ಮಾಡಿ, ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ. ಮೊದಲ ಆದ್ಯತೆ ನಮಗೆ ಎರಡು ಕ್ಷೇತ್ರಗಳಲ್ಲೂ ಗೆಲ್ಲಬೇಕು ಎನ್ನುವುದು ಎಂದರು.
ಉದಾಸಿ ಕುಟುಂಬಕ್ಕೆ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ದು ಏನಿದ್ರೂ ಆಂತರಿಕ ರಿಪೋರ್ಟ್ ಹಾಗೂ ಕೋರ್ ಕಮಿಟಿ ಚರ್ಚೆಯ ಬಗ್ಗೆ ಕೇಂದ್ರಕ್ಕೆ ಕಳುಹಿಸಿಕೊಡೋದು ಅಷ್ಟೇ. ಅಂತಿಮವಾಗಿ ಟಿಕೆಟ್ ಯಾರಿಗೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಬೈ ಎಲೆಕ್ಷನ್ ಟಿಕೆಟ್ ಸಂಬಂಧ ಎಚ್ಡಿಕೆ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ತಿರುಗೇಟು ನೀಡಿದರು. ದೇವನಹಳ್ಳಿಯಲ್ಲಿ ನಡೆದ ಗಾಣಿಗ ಸಮುದಾಯದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ಗೆ ನಡುಕ ಹುಟ್ಟಿದೆ ಅನ್ನೋ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ನನಗೆ ನಡುಕ ಹುಟ್ಟುತ್ತೋ ಇಲ್ವೋ ಅನ್ನೋದು ಎಚ್ಡಿಕೆಗೆ ಗೊತ್ತಿದೆ. ನಾನು ನಡುಗುತ್ತೀನೋ ಹೇಗೆ ಇರ್ತಿನಿ ಎಂಬುದು ಎಚ್ಡಿಕೆಗೆ ಗೊತ್ತಿದೆ. ರಾಜಕಾರಣಕ್ಕಾಗಿ ಎಚ್ಡಿಕೆ ಏನೇನೋ ಮಾತನಾಡ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಹುಚ್ಚಾಸ್ಪತ್ರೆಗೆ ಹೋಗಲು ಸಿದ್ದನಾಗಿದ್ದೇನೆ ; ಸಿದ್ದು
ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ನಾನು ಹುಚ್ಚಾಸ್ಪತ್ರೆಗೆ ಹೋಗಲು ಸಿದ್ದನಾಗಿದ್ದೇನೆ, ಈಶ್ವರಪ್ಪ ಆದಷ್ಟು ಬೇಗ ಬೆಡ್ ರೆಡಿ ಮಾಡಿಟ್ಟಿರಲಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು, 20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ. ಮತ್ಯಾಕೆ ಅವರಿಗೆ ಭಯ ಶುರುವಾಗಿದೆ ಗೊತ್ತಿಲ್ಲ. ನಾವಂತು ಯಾವ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ಹೇಳಿಲ್ಲ ಎಂದಿದ್ದಾರೆ.
BJP leader CT Ravi says Siddaramaiah should not look at someone elses kitchen and bedroom.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm