ಬ್ರೇಕಿಂಗ್ ನ್ಯೂಸ್
07-11-25 08:05 pm HK News Desk ಕ್ರೈಂ
ಕಲಬುರಗಿ, ನ.7 : ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ.. ಯಾರಿಗೂ ಗೊತ್ತಾಗದಂತೆ ಡಬಲ್ ಪಾರ್ಟ್ ಮಾಡುತ್ತಿದ್ದ ಮನೆಗಳ್ಳನನ್ನು ಕಲಬುರಗಿ ನಗರದ ವಿವಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಜಿಲಾನಾಬಾದ್ ಕಾಲೋನಿ ನಿವಾಸಿ ಮಹ್ಮದ್ ಆರೀಫ್ ಅಲಿ(50) ಎನ್ನುವಾತನೇ ಬಂಧಿತ ಮನೆಗಳ್ಳ.
ಕಲಬುರಗಿ ನಗರದಲ್ಲಿ ಮಸೀದಿಯೊಂದರಲ್ಲಿ ಅರೆಬಿಕ್ ಶಿಕ್ಷಕ (ಕುರಾನ್ ಬೋಧಕ) ನಾಗಿ ಆರಿಫ್ ಕೆಲಸ ಮಾಡುತ್ತಿದ್ದ. ಹಗಲಲ್ಲಿ ಕುರಾನ್ ಬೋಧಕ, ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳನಾಗುತ್ತಿದ್ದ. ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ಬಡಾವಣೆ ಸುತ್ತಾಡಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ನಸುಕಿನ 3 ಗಂಟೆ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿರುವಾಗ ಬೀಗ ಹಾಕಿದ ಮನೆಗಳಿಗೆ ಹೋಗಿ ರಾಡ್ ನಿಂದ ಬೀಗ ಮುರಿದು ಮನೆ ದೋಚುತ್ತಿದ್ದ.
ಕಳ್ಳತನ ಮಾಡಿದ್ದ 13.41 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಮ್ ಚಿನ್ನದ ಆಭರಣಗಳು, 16 ಸಾವಿರ ರೂಪಾಯಿ ಮೌಲ್ಯದ 200 ಗ್ರಾಮ ಬೆಳ್ಳಿ, 25 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಕ್ಕಿಬಿದ್ದಿದ್ದೇ ರೋಚಕ
ಕಲಬುರಗಿಯ ವಿವಿ ಠಾಣಾ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಇತ್ತೀಚಿಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಕಳವು ಪ್ರಕರಣಗಳ ತನಿಖೆಗಿಳಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಗಲು ಮತ್ತು ರಾತ್ರಿ ಹೊತ್ತಲ್ಲಿ ಬಡಾವಣೆ ಒಳಗಡೆ ಆರೀಫ್ ಅಲಿ ಬೈಕ್ ಮೇಲೆ ಸಂಚರಿಸುವ ಸಿಸಿ ಟಿವಿ ದೃಶ್ಯಗಳ ನೋಡಿ ಅನುಮಾನ ಬಂದಿತ್ತು. ನಂತರ ಈತನ ಚಲನ ವಲನಗಳ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಅನುಮಾನ ದೃಢವಾಗುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು ಸತ್ಯ ಒಪ್ಪಿಕೊಂಡಿದ್ದಾನೆ.
ಇತ್ತಿಚಿಗೆ ವಿವಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳ್ಳತನ ಕೃತ್ಯ ಮಾಡಿದ್ದು ತಾನೇ ಎಂದು ಆರಿಫ್ ಆಲಿ ಒಪ್ಪಿಕೊಂಡಿದ್ದಾನೆ. ಮಸೀದಿಯಲ್ಲಿ ಕುರಾನ್ ಬೋಧನೆಯಿಂದ 12 ಸಾವಿರ ಸಂಬಳ ಬರುತ್ತಿದ್ದು ಅದು ಜೀವನ ನಿರ್ವಹಣೆಗೆ ಸಾಲದ್ದಕ್ಕೆ ಈ ಕೆಲಸಕ್ಕೆ ಇಳಿದಿದ್ದಾಗಿ ಹೇಳಿಕೊಂಡಿದ್ದಾನೆ.
In a shocking revelation, Kalaburagi city police arrested a Quran teacher who turned into a house burglar by night, leading a double life for months without raising suspicion. The accused, Mohammed Arif Ali (50), a resident of Zilanabad Colony, worked as an Arabic instructor at a local mosque during the day and carried out house thefts at night.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 07:23 pm
Mangalore Correspondent
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
07-11-25 08:05 pm
HK News Desk
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm