ಬ್ರೇಕಿಂಗ್ ನ್ಯೂಸ್
25-08-20 11:24 am Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 25: ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈ ಕೊನೆಗೂ ತಮಿಳುನಾಡಿನಲ್ಲಿ ರಾಜಕೀಯ ಎಂಟ್ರಿ ಪಡೆಯೋದು ಖಾತ್ರಿಯಾಗಿದೆ. ಅಣ್ಣಾಮಲೈ ಇಂದು ಮಧ್ಯಾಹ್ನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.
ಕಳೆದ 2019ರ ಮೇ ತಿಂಗಳಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದ ಅಣ್ಣಾಮಲೈ, ಬಳಿಕ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ವದಂತಿ ಬಗ್ಗೆ ಅಣ್ಣಾಮಲೈ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಣ್ಣಾಮಲೈ, ಕಳೆದ ಹಲವು ತಿಂಗಳುಗಳಿಂದ ರಾಜಕೀಯ ಎಂಟ್ರಿ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದೆ. ಅಂತಿಮವಾಗಿ ಬಿಜೆಪಿ ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಪಕ್ಷದ ಹಲವು ಪ್ರಮುಖರ ಜೊತೆ ಸ್ನೇಹ ಹೊಂದಿದ್ದೇನೆ. ಬಿಜೆಪಿಯ ರಾಷ್ಟ್ರೀಯ ನೀತಿಗಳು ನನಗೆ ಸರಿ ಹೊಂದುವುದು. ಹೀಗಾಗಿ ತಮಿಳ್ನಾಡಿನಲ್ಲಿ ಪಕ್ಷ ಸಂಘಟನೆ ಸಾಧ್ಯ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
ಆದರೆ, ದ್ರಾವಿಡ ಪಕ್ಷಗಳ ಜೊತೆ ಸೇರಬಾರದೇಕೆ ಎಂಬ ಪ್ರಶ್ನೆಗೆ ಅಣ್ಣಾಮಲೈ ನಿರಾಕರಣೆ ತೋರಿದ್ದಾರೆ. ದ್ರಾವಿಡ ಪಕ್ಷಗಳು ತಮ್ಮ ಸ್ಥಾಪಕರ ಆಶಯ ಈಡೇರಿಸಲು ಸೋತಿವೆ. ಅಣ್ಣಾದುರೈ, ಪೆರಿಯಾರ್, ಎಂಜಿಆರ್ ಸ್ಪಷ್ಟ ನೀತಿಗಳನ್ನು ಹೊಂದಿದ್ದರು. ಈಗಿನ ನಾಯಕರು ಇಂಥ ನೀತಿಗಳಿಗೆ ಬದ್ಧರಾಗಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸರಳ ನಾಯಕತ್ವಕ್ಕೆ ಮಾರು ಹೋಗಿದ್ದೇನೆ. ಮೋದಿಯವರ ಡಿ ಮಾನಿಟೈಸೇಶನ್, ಜಿಎಸ್ ಟಿ ಜಾರಿ ಕ್ರಮವನ್ನು ಮುಕ್ತವಾಗಿ ಬೆಂಬಲಿಸಿದ್ದೆ. 10-15 ವರ್ಷಗಳಲ್ಲಿ ಇದರ ಲಾಭವನ್ನು ನಾವು ಕಾಣಲಿದ್ದೇವೆ. ತಕ್ಷಣವೇ ಸಿಗಲಾರದು ಎಂದಿದ್ದಾರೆ.
ತಮಿಳ್ನಾಡಿನಲ್ಲಿ ನೆಲೆಯೇ ಇಲ್ಲದ ಬಿಜೆಪಿ
ತಮಿಳ್ನಾಡು ರಾಜಕೀಯ ಕಳೆದ 50 ವರ್ಷಗಳಿಂದಲೂ ಡಿಎಂಕೆ, ಎಐಎಡಿಎಂಕೆ ಅಧಿಪತ್ಯದಲ್ಲಿದೆ. ಆದರೆ, ಈಗ ಇವೆರಡು ಪಕ್ಷಗಳ ಅಧಿನಾಯಕರೂ ಈಗ ಇಲ್ಲವಾಗಿದ್ದಾರೆ. ಇಂಥ ಸಂದರ್ಭದಲ್ಲಿ ಬಿಜೆಪಿ ತಮಿಳ್ನಾಡಿನಲ್ಲಿ ಹೇಗಾದ್ರೂ ಪಕ್ಷ ಸಂಘಟಿಸಲೇಬೇಕೆಂಬ ಇರಾದೆಯಲ್ಲಿದೆ. ಅದಕ್ಕಾಗಿ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಪಕ್ಷಕ್ಕೆ ಸೇರಿಸಲು ಕಸರತ್ತು ಮಾಡಿದರೂ ಸಾಧ್ಯವಾಗಿಲ್ಲ. ಈಗ ಮೋದಿ ಬೆಂಬಲಿಗ ಅಣ್ಣಾಮಲೈ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಯ ಕನಸನ್ನು ಈಡೇರಿಸಿಕೊಳ್ಳುವ ತವಕದಲ್ಲಿದೆ. 2021ರ ಅಸೆಂಬ್ಲಿ ಚುನಾವಣೆಯ ಮೊದಲು ಪಕ್ಷಕ್ಕೆ ಗಟ್ಟಿ ತಳಪಾಯ ಸೃಷ್ಟಿಸಲು ಯೋಜನೆ ಹಾಕಿದೆ.
ಅಣ್ಣಾಮಲೈ ನಡೆದು ಬಂದ ದಾರಿ..
ಮೂಲತಃ ತಮಿಳುನಾಡಿನ ಕರೂರು ಜಿಲ್ಲೆಯವರಾಗಿರುವ ಅಣ್ಣಾಮಲೈ 2011ರ ಬ್ಯಾಚಿನ ಐಪಿಎಸ್ ಅಧಿಕಾರಿ. ಮೊದಲು ಪೋಸ್ಟಿಂಗ್ ಆಗಿದ್ದು ಉಡುಪಿ ಜಿಲ್ಲೆಯ ಕಾರ್ಕಳ ಉಪ ವಿಭಾಗದಲ್ಲಿ ಎಎಸ್ಪಿ ಆಗಿ. 2015ರಲ್ಲಿ ಉಡುಪಿ ಎಸ್ಪಿ ಆಗಿ ಭಡ್ತಿ ಪಡೆದಿದ್ದರು. ಇಷ್ಟೊತ್ತಿಗೇ ಕ್ರಿಮಿನಲ್ ಗಳನ್ನು ಮಟ್ಟ ಹಾಕಿದ್ದು ಮತ್ತು ಜನಸಾಮಾನ್ಯರ ಜೊತೆ ಸರಳವಾಗಿ ವರ್ತಿಸುತ್ತಿದುದ್ದು ಅಣ್ಣಾಮಲೈಯನ್ನು ಸಿಂಗಂ ಖ್ಯಾತಿಗೇರಿಸಿತ್ತು. 2016ರಲ್ಲಿ ಚಿಕ್ಕಮಗಳೂರು ಎಸ್ಪಿಯಾಗಿ ನಿಯೋಜನೆಗೊಂಡಿದ್ದು ಅಲ್ಲಿ ಬಾಬಾ ಬುಡನ್ ಗಿರಿ ವಿವಾದವನ್ನು ಘರ್ಷಣೆಗಳಿಲ್ಲದೆ ಬಗೆಹರಿಸಿದ್ದು ಮೆಚ್ಚುಗೆ ಗಳಿಸುವಂತೆ ಮಾಡಿತ್ತು. 2017ರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಅಣ್ಣಾಮಲೈ ರಾಮನಗರ ಎಸ್ಪಿಯಾಗಿ ನಿಯೋಜನೆಗೊಂಡರು. ಅದೇ ವರ್ಷದ ಅಕ್ಟೋಬರ್ ನಲ್ಲಿ ಬೆಂಗಳೂರು ಡಿಸಿಪಿ ಆಗುವ ಮೂಲಕ ಕಡಿಮೆ ಅವಧಿಯಲ್ಲಿ ದೊಡ್ಡ ಹುದ್ದೆಗೇರಿದ ಖ್ಯಾತಿಗೆ ಪಾತ್ರವಾಗಿದ್ದರು. ಆದರೆ, 2019 ಮೇ ತಿಂಗಳಲ್ಲಿ ದಿಢೀರ್ ಆಗಿ ಐಪಿಎಸ್ ಸೇವೆಗೇ ರಾಜಿನಾಮೆ ನೀಡಿ ಹೊರಬಂದಿದ್ದು ಹಲವು ಅನುಮಾನ, ಶಂಕೆಗೆ ಕಾರಣವಾಗಿತ್ತು.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm