ತುಮಕೂರು, ದಾವಣಗೆರೆ, ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಐಟಿ ಶಾಕ್

17-02-21 12:53 pm       Mangaluru Correspondent   ಕರ್ನಾಟಕ

ರಾಜ್ಯದಲ್ಲಿ ಮಂಗಳೂರು, ದಾವಣಗೆರೆ, ಬೆಂಗಳೂರು ಮತ್ತು ತುಮಕೂರಿನಲ್ಲಿ ಹತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ಮಾಲೀಕರನ್ನು ಗುರಿಯಾಗಿರಿಸಿ ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ಫೆ.17: ರಾಜ್ಯದಲ್ಲಿ ಮಂಗಳೂರು, ದಾವಣಗೆರೆ, ಬೆಂಗಳೂರು ಮತ್ತು ತುಮಕೂರಿನಲ್ಲಿ ಹತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ಮಾಲೀಕರನ್ನು ಗುರಿಯಾಗಿರಿಸಿ ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ಗೋವಾ, ಬೆಳಗಾವಿ, ಬೆಂಗಳೂರಿನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು , ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳಿಗೂ ಅಧಿಕಾರಿಗಳು ಶಾಕ್ ನೀಡಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪರಿಗೆ ಸೇರಿದ ಜೆಜೆಎಂ ಮತ್ತು ಎಸ್ ಎಸ್ ಕಾಲೇಜಿಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಪ್ರತಿಷ್ಠಿತ ಎಜೆ ಶೆಟ್ಟಿ ಮೆಡಿಕಲ್ ಕಾಲೇಜು, ಯೇನಪೋಯ ಮೆಡಿಕಲ್ ಕಾಲೇಜು, ಕಣಚೂರು ಮೆಡಿಕಲ್ ಕಾಲೇಜು, ಶ್ರೀನಿವಾಸ ಮೆಡಿಕಲ್ ಕಾಲೇಜು ಮುಖ್ಯಸ್ಥರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

 

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಸಪ್ತಗಿರಿ ಕಾಲೇಜಿನ ಮುಖ್ಯಸ್ಥ ದಯಾನಂದ ಮನೆ ಮತ್ತು ಕಚೇರಿಗೂ ದಾಳಿ ನಡೆಸಲಾಗಿದೆ. ಆಕಾಶ್ ಆಸ್ಪತ್ರೆ ಮತ್ತು ಅದರ ಮಾಲೀಕರ ಮನೆಗೂ ದಾಳಿ ನಡೆದಿದೆ. ತುಮಕೂರಿನ ಶಿರಾ ಗೇಟ್ ನಲ್ಲಿರುವ ಶ್ರೀದೇವಿ ಮೆಡಿಕಲ್ ಕಾಲೇಜಿಗೂ ದಾಳಿ ನಡೆದಿದೆ. ಬಿಜೆಪಿ ನಾಯಕ ಹುಲಿನಾಯ್ಕರ್ ಅವರಿಗೆ ಸೇರಿದ ಕಾಲೇಜು ಇದಾಗಿದ್ದು, ಗೋವಾ ಮತ್ತು ಬೆಳಗಾವಿ ಮೂಲದ ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನೇತೃತ್ವ ವಹಿಸಿದ್ದಾರೆ.

ಮೆಡಿಕಲ್ ಕಾಲೇಜುಗಳ ಮೂಲಕ ಐಟಿ ತೆರಿಗೆ ವಂಚನೆ, ದಾಖಲೆಗಳಲ್ಲಿ ಅಪರಾತಪರಾ ಮಾಡಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಲ್ಲಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. 

Income Tax department raids several Medical colleges and their owner's residence and properties in Bangalore, Tumkur, Davanagere and Mangalore in Karnataka.