ಬ್ರೇಕಿಂಗ್ ನ್ಯೂಸ್
22-01-21 06:15 pm Headline Karnataka News Network ಕರ್ನಾಟಕ
ಶಿವಮೊಗ್ಗ, ಜ.22: ಹುಣಸೋಡಿನಲ್ಲಿ ನಡೆದ ಕ್ವಾರಿ ಬ್ಲಾಸ್ಟ್ ದುರಂತದ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಸ್ಫೋಟ ನಡೆದ ಹುಣಸೋಡಿನ ಅಬ್ಬಗೇರಿಯ ಘಟನಾ ಸ್ಥಳಕ್ಕೆ ಆಗಮಿಸಿದ ಮುರುಗೇಶ್ ನಿರಾಣಿ, ಸ್ಥಳ ವೀಕ್ಷಿಸಿ ಗಾಬರಿ ವ್ಯಕ್ತಪಡಿಸಿದರು. ಸ್ಫೋಟ ಸಂಭವಿಸಿದ್ದ ಲಾರಿ ಗುರುತು ಸಿಗದಷ್ಟು ಅಪ್ಪಚ್ಚಿಯಾಗಿದ್ದನ್ನು ಕಂಡು ಸಚಿವರು ಮತ್ತು ಅಧಿಕಾರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗಣಿಗಾರಿಕೆಗೆ ಅನುಮತಿ ಪಡೆದುಕೊಂಡಿದ್ದಾರೆಯೇ ಅಥವಾ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದರೇ.. ಯಾರೆಲ್ಲಾ ಈ ಗಣಿಯ ಹಿಂದೆ ಇದ್ದಾರೆ, ಹೀಗೆ ಎಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಮತ್ತು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಂಥ ದುರ್ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ಘಟನೆಗೆ ಡೈನಮೈಟ್ ಕಾರಣವೋ ಬೇರೆ ಇನ್ನೇನಾದ್ರೂ ಸ್ಫೋಟಕ ಕಾರಣವಾಗಿತ್ತೇ ಎನ್ನೋದ್ರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ಈಗಾಗ್ಲೇ ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಗಣಿ ಇಲಾಖೆಯ ವತಿಯಿಂದ ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
15 ಕಾರ್ಮಿಕರ ಪೈಕಿ ಸಿಕ್ಕಿದ್ದು ಐದೇ ಶವ !
ಈವರೆಗೆ ಐದು ಮಂದಿ ಕಾರ್ಮಿಕರ ಶವಗಳು ಮಾತ್ರ ಸ್ಥಳದಲ್ಲಿ ದೊರೆತಿವೆ. ಆದರೆ, ಅ ಜಾಗದಲ್ಲಿ 15ಕ್ಕೂ ಹೆಚ್ಚು ರಾತ್ರಿ ವೇಳೆ ಇದ್ದರು ಎನ್ನಲಾಗುತ್ತಿದೆ. ಉಳಿದವರು ಎಲ್ಲಿ ಹೋಗಿದ್ದಾರೆ, ಪೂರ್ತಿ ನಾಶವಾಗಿದ್ದಾರೆಯೇ ಎನ್ನುವ ಬಗ್ಗೆ ಅಲ್ಲಿನ ಯಾರಲ್ಲೂ ಮಾಹಿತಿ ಇರಲಿಲ್ಲ. ಸತ್ತಿರುವ ಮಂದಿ ಬಿಹಾರದವರು ಮತ್ತು ಅಲ್ಲಿ ಕಾರ್ಮಿಕರಾಗಿದ್ದು ಬಿಹಾರ ಸೇರಿದಂತೆ ಉತ್ತರ ಭಾರತೀಯರೇ ಆಗಿರುವುದರಿಂದ ಎಷ್ಟು ಮಂದಿ ಇದ್ದರು. ಮತ್ತು ಅವರ ವಿಳಾಸ ಗಣಿ ಮಾಡುತ್ತಿದವರ ಬಳಿಯೂ ಇಲ್ಲ.
ಶಿವಮೊಗ್ಗದಲ್ಲಿ ಸ್ಫೋಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ, ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ
Newly appointed mines and geology minister Murgesh Nirani has rushed to the blast site in Shivamogga.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm