ಬ್ರೇಕಿಂಗ್ ನ್ಯೂಸ್
04-05-26 06:27 pm HK News Staffer ಕರ್ನಾಟಕ
ಕಾಸರಗೋಡು, ಮೇ 4: ಭಾರೀ ಪೈಪೋಟಿ ನಿರೀಕ್ಷಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್ ಎರಡನೇ ಬಾರಿಗೆ ಭಾರೀ ಅಂತರದ ಜಯ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಧ್ರುವೀಕರಣದಿಂದಾಗಿ ಅಶ್ರಫ್ ಅವರು 29252 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
ನಿಕಟ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ 67696 ಮತಗಳನ್ನು ಪಡೆದಿದ್ದರೆ, ಸಿಪಿಎಂ ಪಕ್ಷದ ಕೆ.ಆರ್ ಜಯಾನಂದ್ ಕೇವಲ 21212 ಮತಗಳನ್ನು ಪಡೆದು ಹೀನಾಯ ಸೋಲನುಭವಿಸಿದ್ದಾರೆ. ಉಳಿದಂತೆ, ಪಕ್ಷೇತರ ಸ್ಪರ್ಧಿಸಿದ್ದ ಜೀನ್ ಲವಿನಾ ಮೊಂತೇರೊ 523, ಕಣ್ಣೂರು ಅಬ್ದಲ್ಲ ಮಾಸ್ಟರ್ 283, ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸಂಜೀವ 213 ಮತ ಪಡೆದಿದ್ದಾರೆ.

ಈ ಹಿಂದೆ ಮಂಜೇಶ್ವರದಲ್ಲಿ ಎರಡು ಬಾರಿ ಬಿಜೆಪಿಯ ಸುರೇಂದ್ರನ್ ಅತಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರಿಂದ ಈ ಬಾರಿ ಗೆಲುವಿನ ಭರವಸೆ ಹುಟ್ಟಿಸಿದ್ದರು. ಇದಕ್ಕಾಗಿ ಬಿಜೆಪಿಯಿಂದ ಭಾರೀ ಶ್ರಮ ಹಾಕಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ತಿಂಗಳ ಕಾಲ ಪ್ರಚಾರದಲ್ಲಿ ತೊಡಗಿದ್ದರು. 2016ರಲ್ಲಿ 89 ಮತಗಳಿಂದ ಸೋತಿದ್ದರೆ, 2021ರಲ್ಲಿ ಸುರೇಂದ್ರನ್ 645 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಈ ಬಾರಿ ಮತ ಪರಿಷ್ಕರಣೆ ಬಳಿಕ ನಡೆದ ಚುನಾವಣೆಯಲ್ಲಿ ಕೇರಳದಲ್ಲಿ ಮಂಜೇಶ್ವರ, ಕಾಸರಗೋಡು, ತಿರುವನಂತಪುರಂ, ಪಾಲಕ್ಕಾಡ್ ಸೇರಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಭರವಸೆ ಹುಟ್ಟಿಸಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ದಿಗಿಲಾಗುವಂತೆ ಮತ ಗಳಿಕೆ ಪ್ರಮಾಣವೇ ಭಾರೀ ಕಡಿಮೆಯಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಬೀಳುತ್ತಿದ್ದ ಮತಗಳೇ ಖೋತಾ ಆಗಿದ್ದು ಈವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಮತಗಳನ್ನು ಗಳಿಸಲಷ್ಟೆ ಎಡರಂಗ ಶಕ್ತವಾಗಿದೆ. ಬಿಜೆಪಿಗೂ ಸಾಂಪ್ರದಾಯಿಕ ಮತಗಳಷ್ಟೇ ಬಿದ್ದಿದ್ದು ಹೆಚ್ಚುವರಿ ಸಾಧನೆಯಾಗದಿರುವುದು ಕಂಡುಬಂದಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm