ಬ್ರೇಕಿಂಗ್ ನ್ಯೂಸ್
24-04-26 10:52 pm HK News Staffer ಕರ್ನಾಟಕ
ಕಾರವಾರ, ಏಪ್ರಿಲ್ 24: ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಫೇಲ್ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಗುರುವಾರ ಪ್ರಕಟವಾದ ಅಧಿಕೃತ ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ‘ಗೈರು’ ಎಂದು ನಮೂದಾಗಿದ್ದ ಕಾರಣ ಲೀಸಾ ಫೇಲ್ ಎಂದು ತೋರಿಸಲಾಗಿತ್ತು. ಆದರೆ ಇಂದು ಹೊರಬಂದ ಮತ್ತೊಂದು ಫಲಿತಾಂಶದಲ್ಲಿ ಆಕೆ ಶಾಲೆಯ ಟಾಪರ್ ಎಂದು ಹೇಳಲಾಗುತ್ತಿದೆ.
ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಲೀಸಾ ಖಾನಮ್, ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದರೂ ಪರೀಕ್ಷಾ ಪ್ರಾಧಿಕಾರದ ತಪ್ಪಿನಿಂದ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ದಾಖಲಾಗಿತ್ತು. ಇದರ ಪರಿಣಾಮವಾಗಿ 84.16% ಅಂಕ ಗಳಿಸಿದ್ದರೂ ಕೂಡ ಆಕೆಯ ಫಲಿತಾಂಶ ಫೇಲ್ ಎಂದು ಪ್ರಕಟವಾಗಿತ್ತು.
ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಲಾಗಿದ್ದು, ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅದೇ ವಿಷಯದಲ್ಲಿ ಲೀಸಾಗೆ 97 ಅಂಕಗಳು ಬಂದಿದ್ದು, ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ ಎನ್ನಲಾಗಿದೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿರಸಿ ಡಿಡಿಪಿಐ, ಪ್ರಸ್ತುತ ಹರಿದಾಡುತ್ತಿರುವ ಫಲಿತಾಂಶ ಅಧಿಕೃತ ಪ್ರತಿಯಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಪೇಪರ್ ಮಿಸ್ ಆಗಿರುವುದು ನಿಜವಾಗಿದ್ದು, ಅದರ ಪರಿಶೀಲನೆ ಇನ್ನೂ ಮುಂದುವರಿದಿದೆ. ಅಂತಿಮ ಅಧಿಕೃತ ಫಲಿತಾಂಶ ಪ್ರಕಟಿಸಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.
ಈ ಬೆಳವಣಿಗೆಯಿಂದಾಗಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯ ಭವಿಷ್ಯ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೂ ಪ್ರಶ್ನೆ ಎದ್ದಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm