ಬ್ರೇಕಿಂಗ್ ನ್ಯೂಸ್
07-01-26 12:12 pm Bangalore Correspondent ಕರ್ನಾಟಕ
ಬೆಂಗಳೂರು, ಜ.7 : ಚುನಾವಣಾ ಆಯೋಗವು ದೇಶದ ಹಲವು ರಾಜ್ಯಗಳಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕೈಗೊಂಡಿದೆ. ಉತ್ತರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಎಂಟು ರಾಜ್ಯಗಳಲ್ಲಿ ಪರಿಷ್ಕರಣೆ ಕಾರ್ಯ ಮುಗಿದಿದ್ದು, ಕರಡು ಮತಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಈಗಷ್ಟೇ ಶುರುವಾಗಿದ್ದು ಆರಂಭಿಕ ಸಿದ್ಧತೆ ನಡೆದಿದೆ. ಈ ವೇಳೆ, 2.51 ಕೋಟಿ ಮತಗಳು ತಾಳೆಯಾಗಿಲ್ಲ ಅನ್ನುವ ಮಾಹಿತಿ ಸಿಕ್ಕಿದೆ.
ಎಸ್ಐಆರ್ ಕೈಗೊಳ್ಳುವುದಕ್ಕೂ ಮೊದಲು 2025ರ ಮತದಾರ ಪಟ್ಟಿಯನ್ನು 23 ವರ್ಷ ಹಿಂದಿನ 2002ರ ಮತಪಟ್ಟಿಯೊಂದಿಗೆ ತಾಳೆ ಹಾಕಿ ನೋಡಲಾಗುತ್ತಿದ್ದು, ಈ ವೇಳೆ ರಾಜ್ಯದ ಒಟ್ಟು ಮತದಾರರ ಪೈಕಿ 2.51 ಕೋಟಿ ಮತಗಳ ವಿವರ ಹಿಂದಿನ ಪಟ್ಟಿಗೆ ತಾಳೆಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಬೆಂಗಳೂರು ಒಂದರಲ್ಲೇ 85.14 ಲಕ್ಷ ಮತದಾರರ ವಿವರಗಳು ಹೊಂದಿಕೆಯಾಗಿಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರಿದ್ದು ಈ ಪೈಕಿ 17.86 ಲಕ್ಷ ಮತದಾರರ ವಿವರಗಳಷ್ಟೇ ತಾಳೆಯಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಎಸ್ಐಆರ್ ಕೈಗೊಂಡ ವೇಳೆ 2002ರ ಮತದಾರ ಪಟ್ಟಿಯನ್ನು ಮೂಲ ಆಧಾರವಾಗಿ ಪರಿಗಣಿಸಲಾಗಿದೆ. ಅದರಲ್ಲಿ ವಿವರ ತಾಳೆಯಾದವರು ಪರಿಷ್ಕರಣೆ ವೇಳೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಉಳಿದವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ದಾಖಲೆ ಪತ್ರಗಳನ್ನು ಒದಗಿಸಬೇಕಾಗುತ್ತದೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಡಿಸೆಂಬರ್ ತಿಂಗಳಲ್ಲಿ ಚುನಾವಣಾ ಆಯೋಗವು ಚಾಲನೆ ನೀಡಿದ್ದು, ಪೂರ್ವಭಾವಿಯಾಗಿ 20 ವರ್ಷಗಳ ಹಿಂದಿನ ಮತಪಟ್ಟಿಯೊಂದಿಗೆ ತಾಳೆ ಹಾಕಿ ಪರಿಶೀಲನೆ ಕೈಗೊಂಡಿದೆ.
ಆರಂಭಿಕ ಹಂತದಲ್ಲಿ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರ ವಿವರಗಳನ್ನು ಹೊಂದಿಸಿ ನೋಡಲಾಗಿದೆ. ರಾಜ್ಯದಲ್ಲಿ ಈ ವಯಸ್ಸಿನ 3.12 ಕೋಟಿ ಮತದಾರರಿದ್ದು 1.87 ಕೋಟಿ ಜನರ ವಿವರಗಳಷ್ಟೇ ತಾಳೆಯಾಗಿದೆ. ಇಲ್ಲಿ 1.25 ಕೋಟಿ ಮತದಾರರ ವಿವರಗಳು ಒಂದಕ್ಕೊಂದು ಹೋಲಿಕೆಯಾಗಿಲ್ಲ. ನಂತರದಲ್ಲಿ ಎಲ್ಲ ವಯಸ್ಸಿನ ಮತದಾರರ ವಿವರಗಳನ್ನು ಮತಗಟ್ಟೆ, ವಿದಾನಸಭಾ ಕ್ಷೇತ್ರ, ಜಿಲ್ಲೆ ಮತ್ತು ಅಂತರ್ ಜಿಲ್ಲಾ ಮಟ್ಟದಲ್ಲಿ ಹೋಲಿಸಿ ನೋಡಲಾಗುತ್ತದೆ. ಈ ವೇಳೆ, 2.51 ಕೋಟಿ ಮತದಾರರ ವಿವರ ಹೋಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ವಿಶೇಷ ಪರಿಷ್ಕರಣೆ ಕೈಗೊಳ್ಳುವುದಕ್ಕೂ ಮೊದಲು ನಡೆಸಿರುವ ಪೂರ್ವಭಾವಿ ಪರಿಶೀಲನೆಯಲ್ಲಿ ಕಂಡುಬಂದ ಅಂಶ ಇದಾಗಿದ್ದು ಮುಂದೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಹೋಗಿ ಮತದಾರ ಪಟ್ಟಿಯ ಪರಿಶೀಲನೆ ನಡೆಸಲಿದ್ದಾರೆ. ಮೃತಪಟ್ಟವರು, ವಿಳಾಸ ಬದಲಾದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಚೀಟಿ ಹೊಂದಿರುವವರ ವಿವರವನ್ನು ನಂತರದಲ್ಲಿ ಸಂಗ್ರಹಿಸಲಾಗುತ್ತದೆ. ಅರ್ಹ ದಾಖಲೆಗಳನ್ನು ಒದಗಿಸಿದವರನ್ನು ಮತಪಟ್ಟಿಯಲ್ಲಿ ಉಳಿಸಿ, ಒಟ್ಟು ಮತದಾರರ ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಮತಪಟ್ಟಿ ಪರಿಷ್ಕರಣೆಯ ಮೊದಲ ಹಂತ ಮುಕ್ತಾಯಗೊಂಡಿದ್ದು, ಕರಡು ಪಟ್ಟಿಯಲ್ಲಿ 2.89 ಕೋಟಿ ಮತದಾರರನ್ನು ಕೈಬಿಡಲಾಗಿದೆ. ಕರಡು ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಇತರ ಎಂಟು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಉತ್ತರ ಪ್ರದೇಶದಲ್ಲಿ ಪರಿಷ್ಕರಣೆಗೂ ಮುನ್ನ 15.44 ಕೋಟಿ ಮತದಾರರಿದ್ದು, ಈಗ ಕರಡು ಮತಪಟ್ಟಿಯಲ್ಲಿ 12.55 ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ಎಸ್ಐಆರ್ ಕೈಗೊಂಡ ಎಂಟು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ 2.89 ಕೋಟಿ, ತಮಿಳುನಾಡಿನಲ್ಲಿ 97.37 ಲಕ್ಷ, ಗುಜರಾತ್ 74 ಲಕ್ಷ, ಪಶ್ಚಿಮ ಬಂಗಾಳ 58.21 ಲಕ್ಷ, ಮಧ್ಯಪ್ರದೇಶ 43 ಲಕ್ಷ, ರಾಜಸ್ಥಾನ 42 ಲಕ್ಷ, ಛತ್ತೀಸಗಢ 27.34 ಲಕ್ಷ, ಕೇರಳ 24.08 ಲಕ್ಷ, ಗೋವಾದಲ್ಲಿ 1 ಲಕ್ಷ ಮತದಾರರಿಗೆ ಕತ್ತರಿ ಹಾಕಿರುವುದು ಕಂಡುಬಂದಿದೆ. ಈ ಪೈಕಿ ಮೃತರು, ವಿಳಾಸ ಬದಲಾದವರು, ಅಕ್ರಮವಾಗಿ ಮತಪಟ್ಟಿಗೆ ಸೇರಿಕೊಂಡವರು, ಎರಡೆರಡು ಕಡೆ ಮತ ಚೀಟಿ ಹೊಂದಿದ್ದವರು ಇದ್ದಾರೆ.
The Election Commission of India (ECI) has undertaken a Special Intensive Revision (SIR) of electoral rolls across several states. While the process has been completed in eight states—including Uttar Pradesh, Tamil Nadu, and Kerala—Karnataka has only just begun preliminary preparations.
08-01-26 02:10 pm
Bangalore Correspondent
ದೇವರಾಜ ಅರಸು ಜೊತೆ ಸಿದ್ದರಾಮಯ್ಯ ಹೋಲಿಕೆ ಮಾಡ್ಬೇಡಿ,...
07-01-26 10:33 pm
ಇನ್ನೆಷ್ಟು ದಿನ ರಾಜಕೀಯದಲ್ಲಿ ಇರುತ್ತೇನೋ ಗೊತ್ತಿಲ್ಲ...
07-01-26 08:00 pm
ಬಂಧನ ವೇಳೆ ಪೊಲೀಸರ ಎಳೆದಾಟ, ಹರಿದ ಮಹಿಳೆಯ ಬಟ್ಟೆ ;...
07-01-26 03:07 pm
ಮತಪಟ್ಟಿ ಪರಿಷ್ಕರಣೆ ; ಉತ್ತರ ಪ್ರದೇಶದಲ್ಲಿ 2.89 ಕೋ...
07-01-26 12:12 pm
08-01-26 05:11 pm
HK News Desk
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
ತಮಿಳುನಾಡಿನ ದೀಪೋತ್ಸವಕ್ಕೆ ಹೈಕೋರ್ಟ್ ಅನುಮತಿ ; ಅವಕ...
07-01-26 01:53 pm
08-01-26 02:34 pm
Mangalore Correspondent
ಸುಳ್ಯ ಶಾಸಕಿ ಭಾಗೀರಥಿ ಬಗ್ಗೆ ಅವಹೇಳನ ಪೋಸ್ಟ್ ; ಕಾಂ...
07-01-26 11:06 pm
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ನಿಂದಿಸಿ ಬರೆದು ಜ...
07-01-26 05:15 pm
ಬೋಟನ್ನು ಎಳೆದು ಕಟ್ಟುತ್ತಿದ್ದಾಗ ನದಿಗೆ ಬಿದ್ದು ಮೀನ...
07-01-26 12:10 pm
ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗು...
06-01-26 08:25 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm