ಬ್ರೇಕಿಂಗ್ ನ್ಯೂಸ್
05-01-26 10:00 pm HK News Desk ಕರ್ನಾಟಕ
ಮೈಸೂರು, ಜ.5: ಜನರ ಆಶೀರ್ವಾದದಿಂದ ದೇವರಾಜ ಅರಸು ದಾಖಲೆ ಬ್ರೇಕ್ ಮಾಡುತ್ತಿದ್ದೇನೆ. ಆದರೆ ಅರಸು ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ. ದೇವರಾಜ ಅರಸು ಕೂಡ ನಮ್ಮ ಮೈಸೂರು ಜಿಲ್ಲೆಯವರು. ಅವರ ದಾಖಲೆ ಮುರಿಯುತ್ತಿರುವುದು ಜನರ ಆಶೀರ್ವಾದದಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕವಾಗಿ ಅರಸು ಹಿಂದುಳಿದವರಲ್ಲ. ಅರಸು ಜನಾಂಗದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು. ಅವರದ್ದು ಸಾಮಾಜಿಕವಾಗಿ ಮುಂದುವರಿದ ಜನಾಂಗ, ನನ್ನದು ಸಮಾಜದಲ್ಲಿ ತಳ ಸಮುದಾಯ. ನನಗೂ ಅವರಿಗೂ ಹೋಲಿಕೆ ಸಲ್ಲದು. ಸನ್ನಿವೇಶ ಬಂತು ನಾನು ಇಲ್ಲಿ ತನಕ ಬಂದಿದ್ದೇನೆ. 1983ರಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದೆ. ಜನರೇ ದುಡ್ಡು ಕೊಟ್ಟು ವೋಟ್ ಹಾಕಿದ್ರು. ದೇವರಾಜ ಅರಸು ಸಿಎಂ ಆಗಿದ್ದರು. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಹಿಂದಿನ ಕಾಲಕ್ಕೆ ಹೋಲಿಕೆ ಮಾಡೋದಕ್ಕು ಆಗಲ್ಲ ಎಂದು ಹೇಳಿದರು.
ದಾಖಲೆ ಬಗ್ಗೆ ಕೇಳಿದ ಪ್ರಶ್ನೆಗೆ, ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ. ಮುಂದೆ ಯಾರಾದ್ರೂ ಈ ದಾಖಲೆಯನ್ನೂ ಮುರಿಯಬಹುದು. ಕ್ರಿಕೆಟ್ ನಲ್ಲಿ ಸಚಿನ್ ರೆಕಾರ್ಡ್ ಬ್ರೇಕ್ ಆಗಲ್ಲ ಅಂದ್ರು. ವಿರಾಟ್ ಬ್ರೇಕ್ ಮಾಡಿದ್ರಲ್ವಾ. ಮುಂದೆ ನನಗಿಂತ ಜಾಸ್ತಿ ಸಿಎಂ ಆಗೋರು, ಬಜೆಟ್ ಮಂಡನೆ ಮಾಡೋರು ಬರಬಹುದು ಎಂದರು.
ಸಾಧನಾ ಸಮಾವೇಶ ಬಗ್ಗೆ ಯೋಚನೆ ಮಾಡಿಲ್ಲ. ಕೃಷ್ಣ ಭೈರೇಗೌಡ ಕಾರ್ಯಕ್ರಮ ಮಾಡ್ತೀನಿ ಅಂತ ಹೇಳ್ತಿದ್ರು ಅಷ್ಟೇ ಎಂದರು. ಸಂಪುಟ ಪುನಾರಚನೆ ಆಗ್ಬೇಕು. ಅದರ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇನೆ. ಜನವರಿಯಲ್ಲಿ ಸಭೆ ಕರೆಯುತ್ತೇನೆ ಅಂದಿದ್ರು. ಈಗ ಯಾವಾಗ ಕರೆದ್ರು ನಾನು ಹೋಗುತ್ತೇನೆ ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗ್ಬೇಕು ಅನ್ನೋ ಬಿಜೆಪಿ ಒತ್ತಾಯದ ಬಗ್ಗೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವರದಿ ಬರಲಿ, ಬಳಿಕ ಯಾವ ತನಿಖೆ ಮಾಡಬೇಕು ಎಂದು ತೀರ್ಮಾನ ಮಾಡ್ತೀನಿ ಎಂದರು.
Karnataka CM Siddaramaiah said that although he is set to break former CM Devaraj Aras record for the longest tenure, comparisons between them are unfair. Siddaramaiah stated that Aras belonged to a socially advanced community, whereas he hails from a lower social strata, and the political eras are entirely different.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 12:25 pm
HK News Staffer
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am