'ರಾಜ್ಯದಲ್ಲಿ ಅತಿ ದೀರ್ಘ ಮುಖ್ಯಮಂತ್ರಿ' ಸಿದ್ದರಾಮಯ್ಯ ; ದೇವರಾಜ ಅರಸರ ಏಳೂವರೆ ವರ್ಷದ ಸಿಎಂ ಅವಧಿ ಜನವರಿ 7ಕ್ಕೆ ಬ್ರೇಕ್ ! 

05-01-26 03:14 pm       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 6ರಂದು ರಾಜ್ಯದಲ್ಲಿ ಅತಿ ದೀರ್ಘ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಆಮೂಲಕ ದೇವರಾಜ ಅರಸು ಅವರ ಹೆಸರಲ್ಲಿರುವ ದೀರ್ಘ ಕಾಲದ ಸಿಎಂ ದಾಖಲೆಯನ್ನು ಮುರಿಯಲಿದ್ದಾರೆ.‌

ಬೆಂಗಳೂರು, ಜ.5 : ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 6ರಂದು ರಾಜ್ಯದಲ್ಲಿ ಅತಿ ದೀರ್ಘ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಆಮೂಲಕ ದೇವರಾಜ ಅರಸು ಅವರ ಹೆಸರಲ್ಲಿರುವ ದೀರ್ಘ ಕಾಲದ ಸಿಎಂ ದಾಖಲೆಯನ್ನು ಮುರಿಯಲಿದ್ದಾರೆ.‌

ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದ ನೀತಿ, ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಸುಧಾರಣೆ ಜಾರಿಗೊಳಿಸಿದ್ದ ದೇವರಾಜ ಅರಸು ಏಳೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅರಸು ಅವರು ಏಳೂವರೆ ವರ್ಷದ ಆಡಳಿತ ಅವಧಿಯಲ್ಲಿ 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. 

ಸಿದ್ದರಾಮಯ್ಯ 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. 2023ರಲ್ಲಿ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಜನವರಿ 7 ಕಳೆದರೆ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರು. ಅಂದರೆ ಮಧ್ಯದಲ್ಲಿ ಎಲ್ಲಿಯೂ ಬ್ರೇಕ್‌ ಆಗಿರಲಿಲ್ಲ. ಸಿದ್ದರಾಮಯ್ಯ ಅವರು ಮೊದಲ ಅವಧಿ ಪೂರ್ಣಗೊಳಿಸಿದ ಬಳಿಕ ನಡೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿರಲಿಲ್ಲ. 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗಿದ್ದರು.‌

ಸಿದ್ದರಾಮಯ್ಯ ಈಗಾಗಲೇ 16 ಬಜೆಟ್‌ ಮಂಡಿಸಿ ರಾಜ್ಯಕ್ಕೆ ಅತಿ ಹೆಚ್ಚು ಮುಂಗಡ ಪತ್ರ ಕೊಟ್ಟ ದಾಖಲೆಯನ್ನು ಹೊಂದಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ 2026-27ರ ತಮ್ಮ 17ನೇ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಸಿಎಂ ಬದಲಾವಣೆ ಕೂಗಿನ ನಡುವೆಯೇ ಸಿದ್ದರಾಮಯ್ಯ ಆಡಳಿತ ಅಚಲವಾಗಿರುವಂತೆ ತೋರುತ್ತಿದೆ.‌

Karnataka Chief Minister Siddaramaiah is set to become the state’s longest-serving CM on January 7, surpassing the record held by former Chief Minister Devaraj Urs, who governed for 2,792 consecutive days. Siddaramaiah previously served 1,829 days during his first term (2013–2018) and returned to office in 2023. With 16 budgets already presented, he is also Karnataka’s most prolific finance minister, preparing for his 17th budget in February 2026.