ಬ್ರೇಕಿಂಗ್ ನ್ಯೂಸ್
30-12-25 03:08 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.30 : ಬಾಂಗ್ಲಾದೇಶದ ಬೆದರಿಕೆಗಳ ನಡುವೆಯೇ 78 ವರ್ಷ ಹಿಂದೆ ವಿಭಜನೆ ಸಂದರ್ಭದಲ್ಲಿ ಆಗಿದ್ದ ಸಿಲಿಗುರಿ ಕಾರಿಡಾರ್ (ಚಿಕನ್ ನೆಕ್) ತಪ್ಪನ್ನು 1971ರಲ್ಲಿ ಬಾಂಗ್ಲಾ ವಿಮೋಚನೆ ವೇಳೆ ಸರಿಪಡಿಸಬೇಕಿತ್ತು. ಆಗ ಗಡಿಯನ್ನು ಸರಿಪಡಿಸಲು ಅವಕಾಶಗಳಿದ್ದವು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.
ಸಿಲಿಗುರಿ ಕಾರಿಡಾರ್ ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೀಡಿದ ಹೇಳಿಕೆಗಳ ಕುರಿತು ಬೆಂಗಳೂರಿನಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಸದ್ಗುರು ಜಗ್ಗಿ ವಾಸುದೇವ್, '78 ವರ್ಷಗಳಷ್ಟು ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಿಕೊಂಡಿದ್ದರೆ ಈ ಬಿಕ್ಕಟ್ಟು ಎದುರಾಗುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ.
ಇದನ್ನು ದಶಕಗಳ ಹಿಂದೆಯೇ ಸರಿಪಡಿಸಬೇಕಾಗಿತ್ತು. ಚಿಕನ್ ನೆಕ್ ಎಂದು ಕರೆಯಲ್ಪಡುವ ಈ ಜಾಗವನ್ನು ಕೋಳಿಯ ಕುತ್ತಿಗೆಯ ಬದಲು ಚೆನ್ನಾಗಿ ಕೊಬ್ಬಿದ ಆನೆಯ ಕುತ್ತಿಗೆಯನ್ನಾಗಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ಸದ್ಗುರು ಅವರ ಎಕ್ಸ್ ಖಾತೆಯಲ್ಲಿ ಸಂವಾದದ ವಿಡಿಯೋ ಹಂಚಿಕೊಳ್ಳಲಾಗಿದ್ದು, 'ಸಿಲಿಗುರಿ ಕಾರಿಡಾರ್ ಭಾರತದ ವಿಭಜನೆಯಿಂದ ಸೃಷ್ಟಿಸಲ್ಪಟ್ಟ 78 ವರ್ಷಗಳಷ್ಟು ಹಳೆಯದಾದ ತಪ್ಪಾಗಿದ್ದು, ಇದನ್ನು 1971ರಲ್ಲಿ ಬಾಂಗ್ಲಾ ವಿಭಜನೆ ವೇಳೆ ಸರಿಪಡಿಸಬೇಕಾಗಿತ್ತು. ಈಗ ಅದರಿಂದಾಗಿ ಭಾರತ ದೇಶದ ಸಾರ್ವಭೌಮತ್ವಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುವ ಪ್ರಯತ್ನಗಳಾಗಿವೆ. ಕೋಳಿಯನ್ನು ಪೋಷಿಸಿ ಅದನ್ನು ಆನೆಯಾಗಿ ಬೆಳೆಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಬಹುಶಃ 1946-47ರಲ್ಲಿ ನಮಗೆ ಗಡಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿರಲಿಲ್ಲ. ಆದರೆ 1972ರಲ್ಲಿ ನಮಗೆ ಅಧಿಕಾರವಿತ್ತು. ಆದರೂ ನಾವು ಅದನ್ನು ಸರಿ ಮಾಡಲಿಲ್ಲ. ಈಗ, ಜನರು ಅದರ ಬಗ್ಗೆ ಚರ್ಚಿಸುವಂತಾಗಿದೆ, ಬೇರೆ ಸಣ್ಣ ದೇಶಗಳು ನಮಗೆ ಬೆದರಿಕೆ ಹಾಕುವಂತಾಗಿದೆ.
ಈ ತಪ್ಪುಗಳು ಕೇವಲ 78 ವರ್ಷಗಳ ಹಿಂದೆ ಸಂಭವಿಸಿದೆ. ಅದಕ್ಕೆ ಕೆಲವು ತಿದ್ದುಪಡಿ ಅಗತ್ಯವಿದೆ. ತಿದ್ದುಪಡಿ ಆಗಬೇಕು. ನಾವು ಕೋಳಿಗೆ ಚೆನ್ನಾಗಿ ಆಹಾರ ನೀಡಬೇಕು ಮತ್ತು ಅದನ್ನು ಆನೆಯನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಕೋಳಿಗಿಂತಲೂ ಆನೆಯ ಕುತ್ತಿಗೆಯನ್ನು ನಿಭಾಯಿಸುವುದು ಸುಲಭ' ಎಂದು ಸದ್ಗುರು ಹೇಳಿದ್ದಾರೆ. ಭಾರತದ ಸಾರ್ವಭೌಮತ್ವಕ್ಕೆ ಯಾರು ಬೆದರಿಕೆ ಹಾಕುತ್ತಿದ್ದಾರೆಂದು ಅವರು ಹೆಸರಿಸದಿದ್ದರೂ, ಚೀನಾ ಮತ್ತು ಬಾಂಗ್ಲಾದೇಶದ ಸಾಮೀಪ್ಯದಿಂದಾಗಿ ಚಿಕನ್ ನೆಕ್ ದೀರ್ಘಕಾಲದ ವರೆಗೆ ಮಿಲಿಟರಿ ವಿಶ್ಲೇಷಕರಿಗೆ ಚರ್ಚೆಯ ವಿಷಯವಾಗಿದೆ. 1971ರ ವಿಮೋಚನಾ ಯುದ್ಧದ ನಂತರದ "ತಪ್ಪಿಕೊಂಡ ಅವಕಾಶಗಳ" ಬಗ್ಗೆಯೂ ಸದ್ಗುರು ಅವರು ಮಾತನಾಡಿದ್ದಾರೆ.
Siliguri Corridor is a 78-year-old anomaly created by Bharat’s partition, which should have been corrected in 1971. Now that there is an open threat to the nation’s sovereignty, it is time to nourish the chicken and allow it to evolve into an elephant. -Sg pic.twitter.com/oHyhZ03y4l
— Sadhguru (@SadhguruJV) December 28, 2025
Amid the recent statements coming from Bangladesh’s interim government, Isha Foundation founder Sadhguru Jaggi Vasudev said that the historical mistake of the Siliguri Corridor — known as the “Chicken’s Neck” — which occurred during the Partition 78 years ago, should have been corrected during Bangladesh’s liberation in 1971. He said that India had the opportunity then to realign the border.
30-12-25 05:10 pm
Bangalore Correspondent
ಚಿಕನ್ ನೆಕ್ ತಪ್ಪನ್ನು ಬಾಂಗ್ಲಾ ವಿಭಜನೆ ವೇಳೆ ಸರಿಪಡ...
30-12-25 03:08 pm
ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣ ; ಮೂರು ಪೊಲೀಸ್...
29-12-25 11:13 pm
ಡ್ರಗ್ಸ್ ಫ್ಯಾಕ್ಟರಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿ...
29-12-25 07:24 pm
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
30-12-25 03:32 pm
HK News Desk
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
29-12-25 11:03 pm
Mangalore Correspondent
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
30-12-25 12:42 pm
Mangalore Correspondent
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm