ಬ್ರೇಕಿಂಗ್ ನ್ಯೂಸ್
24-12-25 11:20 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.24 : ತಡರಾತ್ರಿ ಅವಧಿ ಮೀರಿಯೂ ವಹಿವಾಟು ಅನುಮತಿಗಾಗಿ ಹೋಟೆಲ್ ಒಂದರ ವ್ಯವಸ್ಥಾಪಕರಿಂದ ಲಂಚ ಸ್ವೀಕರಿಸುತ್ತಿದ್ದ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಅವರ ಕಚೇರಿಯಿಂದಲೇ ವಶಕ್ಕೆ ಪಡೆದಿದ್ದಾರೆ.
ರಾಜಾಜಿನಗರದ ಸಾಗರ್ ಹೊಟೇಲ್ ವ್ಯವಸ್ಥಾಪಕ ಸಂಜಯ್ ಕುಮಾರ್ ನೀಡಿದ್ದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ರಾತ್ರಿ ಅವಧಿ ಮೀರಿದ ಬಳಿಕವೂ ವಹಿವಾಟು ನಡೆಸುತ್ತಿದ್ದ ಆರೋಪದಡಿ ರಾಜಾಜಿನಗರದ ಸಾಗರ್ ಹೋಟೆಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಎಸಿಪಿ ಕೃಷ್ಣಮೂರ್ತಿ ರಾತ್ರಿ ಅನುಮತಿ ನೀಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಹೋಟೆಲ್ ವ್ಯವಸ್ಥಾಪಕ ಸಂಜಯ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಕಚೇರಿಯಲ್ಲಿ 30 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಪಿ ಕೃಷ್ಣಮೂರ್ತಿ ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
Lokayukta officials arrested Malleswaram ACP Krishnamurthy after he was caught accepting a bribe of ₹30,000 from the manager of Sagar Hotel in Rajajinagar. The ACP had allegedly demanded ₹50,000 to allow business operations beyond permitted late-night hours. Acting on a complaint filed by hotel manager Sanjay Kumar, the Lokayukta laid a trap and apprehended the officer inside his office while receiving the bribe.
24-12-25 11:20 pm
Bangalore Correspondent
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ;...
22-12-25 11:09 pm
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm