ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರಣತಂತ್ರ ; ಹೈಕಮಾಂಡಿಗೆ ಪತ್ರ ಚಳುವಳಿ, ಬೃಹತ್ ಸಮಾವೇಶಕ್ಕೆ ನಿರ್ಣಯ, ಹುದ್ದೆ ಬಿಟ್ಟು ಕೊಡದಂತೆ ಸಿದ್ದರಾಮಯ್ಯಗೆ ಪಟ್ಟು 

20-12-25 03:05 pm       Bangalore Correspondent   ಕರ್ನಾಟಕ

ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪರ ಇರುವ ಅಹಿಂದ ಶಾಸಕರು ಮತ್ತು ಸಚಿವರ ಗುಂಪು ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದು ಯಾವುದೇ ಕಾರಣಕ್ಕು ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡದಂತೆ ಒತ್ತಡ ಹೇರಿದೆ. ಸಿಎಂ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹೇರುವುದಕ್ಕಾಗಿ ಎಲ್ಲ ರೀತಿಯ ತಂತ್ರಗಾರಿಕೆ ನಡೆಸಲು ಅಹಿಂದ ಬಣ ಮುಂದಾಗಿದೆ.‌

ಬೆಂಗಳೂರು, ಡಿ.20 : ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪರ ಇರುವ ಅಹಿಂದ ಶಾಸಕರು ಮತ್ತು ಸಚಿವರ ಗುಂಪು ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದು ಯಾವುದೇ ಕಾರಣಕ್ಕು ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡದಂತೆ ಒತ್ತಡ ಹೇರಿದೆ. ಸಿಎಂ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹೇರುವುದಕ್ಕಾಗಿ ಎಲ್ಲ ರೀತಿಯ ತಂತ್ರಗಾರಿಕೆ ನಡೆಸಲು ಅಹಿಂದ ಬಣ ಮುಂದಾಗಿದೆ.‌

ಡಿನ್ನರ್ ನೆಪದಲ್ಲಿ ನಡೆದಿರುವ ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರಾದ ಡಾ.ಜಿ. ಪರಮೇಶ್ವರ್, ಎಚ್.ಸಿ ಮಹದೇವಪ್ಪ, ಜಮೀರ್ ಅಹ್ಮದ್, ಎಂ.ಸಿ. ಸುಧಾಕರ್ ಹಾಗೂ ಶಾಸಕ ಎಎಸ್ ಪೊನ್ನಣ್ಣ ಭಾಗವಹಿಸಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಯಾವುದೇ ಕ್ಷಣದಲ್ಲಿ ದೆಹಲಿಯಿಂದ ಬುಲಾವ್ ಬರುವ ಸಾಧ್ಯತೆ ಇದೆ. ಆದರೆ, ಯಾವುದೇ ಕಾರಣಕ್ಕು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಡಿ ಎಂದು ಆಪ್ತ ಸಚಿವರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ 'ಅಹಿಂದ' ಮತಬ್ಯಾಂಕ್ ಕೈತಪ್ಪಲಿದೆ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಬಹುತೇಕ ಶಾಸಕರು ಮತ್ತು ಅಹಿಂದ ಸಚಿವರು ನಿಮ್ಮ ಪರವಾಗಿದ್ದಾರೆ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈಗಾಗಲೇ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರು ರಾಹುಲ್ ಗಾಂಧಿಗೆ ನಾಲ್ಕು ಬಾರಿ ಪತ್ರ ಬರೆದಿದ್ದು, ಸಿದ್ದರಾಮಯ್ಯ ಅವರನ್ನು ಬದಲಿಸದಂತೆ ಒತ್ತಡ ಹೇರಿದ್ದಾರೆ‌‌. ಅಲ್ಲದೆ, ಆ ರೀತಿ ಮಾಡಿದರೆ ಪಕ್ಷಕ್ಕೆ ಆಗಬಹುದಾದ ನಷ್ಟಗಳ ಬಗ್ಗೆ ವಿವರಿಸಿದ್ದಾರೆ. ಈಗ ಇತರ ಎಲ್ಲ ಅಹಿಂದ ಸಚಿವರು ಮತ್ತು ಶಾಸಕರು ಹೈಕಮಾಂಡ್ ನಾಯಕರಿಗೆ 'ಪತ್ರ ಚಳುವಳಿ' ಆರಂಭಿಸಲು ಸಜ್ಜಾಗಿದ್ದಾರೆ. ಸಾಮೂಹಿಕವಾಗಿ ಪತ್ರ ಬರೆಯುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ಬಗ್ಗೆ ಸಭೆಯಲ್ಲಿ ಚಿಂತನೆಯಾಗಿದೆ. 

ಜನವರಿಯಲ್ಲಿ ಬೃಹತ್ ಸಮಾವೇಶ

ಇದಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಾಬೀತುಪಡಿಸಲು ಜನವರಿ ತಿಂಗಳಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಲಕ್ಷಾಂತರ ಜನರನ್ನು ಸೇರಿಸಿ, ರಾಜ್ಯದ ಜನತೆ ಇಂದಿಗೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆಂಬುದನ್ನ ತೋರಿಸಲು ಶಕ್ತಿ ಪ್ರದರ್ಶನ ಮಾಡಲು ನಿರ್ಧರಿಸಿದ್ದಾರೆ. ಅಹಿಂದ ಒಕ್ಕೂಟದ ಮೂಲಕ ಸಮಾವೇಶ ಆಯೋಜಿಸಲಿದ್ದು ಇದಕ್ಕೆ ಅಹಿಂದ ಬಣದ ಎಲ್ಲ ಶಾಸಕ, ಸಚಿವರು ಬೆಂಬಲ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ಇದೇ ವೇಳೆ, ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರಿಗೆ ಕೌಂಟರ್ ನೀಡಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅವರಿಂದ ಕೇಳಿ ಪಡೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

Soon after the Belagavi Assembly session concluded, a powerful bloc of AHINDA ministers and MLAs loyal to Chief Minister Siddaramaiah held a secret late-night strategy meeting at Minister Satish Jarkiholi’s residence. Their message was clear: Siddaramaiah must not step down as Chief Minister under any circumstances.