ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹುಲ್ ಮತಗಳ್ಳತನ ಆರೋಪಕ್ಕೆ ಮೌನ ಏಕೆ, ಸಂತೋಷ್ ಲಾಡ್ ಪ್ರಶ್ನೆ 

19-09-25 09:45 am       Bangalore Correspondent   ಕರ್ನಾಟಕ

ಮೋಸದಿಂದಲೇ ಬಿಜೆಪಿ ಚುನಾವಣೆ ಗೆದ್ದಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ಸ್ಪಷ್ಟ ಉತ್ತರ ಚುನಾವಣಾ ಆಯೋಗ ನೀಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಬೆಂಗಳೂರು, ಸೆ 19 : ಮೋಸದಿಂದಲೇ ಬಿಜೆಪಿ ಚುನಾವಣೆ ಗೆದ್ದಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ಸ್ಪಷ್ಟ ಉತ್ತರ ಚುನಾವಣಾ ಆಯೋಗ ನೀಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಅಳಂದ ಪ್ರಕರಣ ಆಗಿ ಐದಾರು ವರ್ಷ ಆಯ್ತು. ಈ ವಿಚಾರವಾಗಿ ಎಸ್ ಐ ಟಿ ಯವರು ಚುನಾವಣಾ ಆಯೋಗಕ್ಕೆ ಸಾಕಷ್ಟು ಪತ್ರವನ್ನು ಬರೆದಿದ್ದಾರೆ. ಯಾವ ರೀತಿಯಲ್ಲಿ ಮತಗಳು ಡಿಲೀಟ್ ಆಗಿದೆ ಎಂದು ಪ್ರಶ್ನಿಸಿದ್ದರು. ಆದರೆ ಚುನಾವಣಾ ಆಯೋಗ ಉತ್ತರ ನೀಡಲಿಲ್ಲ ಎಂದು ವಿವರಿಸಿದರು.

ಬಿಹಾರದಲ್ಲಿ ಮೂರು ಲಕ್ಷ ಮನೆಗಳಿಗೆ ಜೀರೋ ನಂಬರ್ ಕೊಡಲಾಗಿದೆ. ಮೋಸದಿಂದಲೇ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಮತ ಕಳ್ಳತನದ ಮೂಲಕವೇ ಚುನಾವಣೆ ಗೆಲ್ಲುತ್ತಿದ್ದರು ಎಂದು ನೇರವಾಗಿ ಆರೋಪಿಸಿದರು.

ಚುನಾವಣಾ ಆಯೋಗ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದರು. ಅದರ ಹಿಂದಿರುವ ಉದ್ದೇಶ ಏನು? ಎಲ್ಲ ಸಂಸ್ಥೆಗಳನ್ನು ಇದೇ ರೀತಿಯಲ್ಲಿ ಬಳಕೆ ಮಾಡಲಾಗಿದೆ. ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟ ಉತ್ತರ ಚುನಾವಣಾ ಆಯೋಗ ನೀಡಿಲ್ಲ ಎಂದು ಕಿಡಿಕಾರಿದರು.

ಈಗ ಹೊಸತಾಗಿ ಪ್ರಧಾನಿ ಮೋದಿ ಅವರ ಕುರಿತಾದ ಸಿನಿಮಾ ನೋಡಬೇಕು. ಸಿನಿಮಾ ಈಗಾಗಲೇ ಹಿಂದಿನ ಪ್ರಧಾನಿಗಳು, ಭಗತ್ ಸಿಂಗ್, ಹೋರಾಟಗಾರು ಬಂದು ಹೋಗಿ ಆಯ್ತು. ಆದರೆ ಇವಾಗ ಕೊನೆಗೆ ಇವರ ಸಿನಿಮಾ ನೋಡಬೇಕಾಗಿದೆ. ಏನು ಸಾಧನೆ ಇದೆ ಗೊತ್ತಿಲ್ಲ. ಗೋಡಾ ಹೇ ಮೈದಾನ್ ಹೇ ಎಂಬಂತಾಗಿದೆ ಎಂದು ಕಿಡಿಕಾರಿದರು.

ದೇಶ ಹಾಳಾಗಿ ಹೋಗಬೇಕು. ಒಬ್ಬ ಮನುಷ್ಯ ಪ್ರಸಿದ್ದಿ ಆಗಬೇಕು. ಕೊಳ್ಳೆ ಹೊಡೆದು ಹೋಗಿ. ಪಿಚ್ಚರ್ ನಿಮ್ಮದೇ ಆಯ್ತು ಓಡಿಸಿ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡರು.

ಅದಾನಿಗೆ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ನೀಡಲಾಗಿದೆ. ಹತ್ತು ಲಕ್ಷ ಮ್ಯಾಂಗೋ ಪ್ಲ್ಯಾಂಟೇಷನ್ ಇದ್ದದ್ದನ್ನು ಅದಾನಿಗೆ ಕೊಡಲಾಗಿದೆ. ನಮ್ಮ ಸರ್ಕಾರಿ ಕಲ್ಲಿದ್ದಲು ಕಂಪನಿಗೆ ಏಕೆ ಕೊಡಬಾರದು. ಹೊಡಿರಿ ಪಿಚ್ಚರ್, ಮೋದಿ ಸಾಹೇಬ್ರೇ ಮಜಾ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

Karnataka Labour Minister Santosh Lad has launched a scathing attack on the BJP, alleging that the party won elections through fraudulent means and accusing the Election Commission of maintaining silence over serious allegations made by Congress leader Rahul Gandhi.