Traffic Violation, Bangalore: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ; 2,608 ಕೋಟಿ ರೂ. ಬಾಕಿ ; 3 ಕೋಟಿ ಕೇಸ್ ಉಳಿಕೆ, ಬೆಂಗಳೂರಿನಲ್ಲಿ ಮಾತ್ರ 106 ಕೋಟಿ ದಂಡ ಸಂಗ್ರಹ

18-09-25 05:34 pm       Bangalore Correspondent   ಕರ್ನಾಟಕ

ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 2,608.91 ಕೋಟಿ ರೂ. ಬಾಕಿ ಬರಬೇಕಿದೆ! ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ  1.22 ಕೋಟಿ ಪ್ರಕರಣ ಇತ್ಯರ್ಥ ಗೊಳಿಸಿದೆ. 

ಬೆಂಗಳೂರು, ಸೆ 18 : ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 2,608.91 ಕೋಟಿ ರೂ. ಬಾಕಿ ಬರಬೇಕಿದೆ! ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ  1.22 ಕೋಟಿ ಪ್ರಕರಣ ಇತ್ಯರ್ಥ ಗೊಳಿಸಿದೆ. 

ಆದರೂ 2019 ರಿಂದ 2025 ರವರೆಗೆ 4.45 ಕೋಟಿ ಇ-ಚಲನ್ ಪ್ರಕರಣಗಳಿಂದ 2,608.91 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಸರ್ಕಾರ 2023ನೇ ಸಾಲಿನಲ್ಲಿ ಶೇ.50 ರಿಯಾಯಿತಿ ಘೋಷಿಸಿ ದಂಡ ಪಾವತಿಗೆ ಆದೇಶ ಮಾಡಿತ್ತು. ಈ ವೇಳೆ 2,64,85,640 ಪ್ರಕರಣಗಳ ಪೈಕಿ 63,15,014 ಕೇಸ್‌ಗಳನ್ನು ಇತ್ಯರ್ಥಪಡಿಸಿ 182.32 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿತ್ತ. ‌ 2024ನೇ ಸಾಲಿನಲ್ಲಿ 1,28,35,412 ಪ್ರಕರಣಗಳ ಪೈಕಿ 6.18 ಲಕ್ಷ ಇತ್ಯರ್ಥಪಡಿಸಿ 36.03 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ (2025) ಸರ್ಕಾರ 21 ದಿನಗಳ ‌ ಕಾಲ ನೀಡಿದ್ದ ‌ ರಿಯಾಯಿತಿ ‌ದಂಡ ಪಾವತಿ ವೇಳೆ 53,11,589 ಪ್ರಕರಣ ‌ ಖುಲಾಸೆಗೊಳಿಸಿ 144 ಕೋಟಿ ರೂ. ಸಂಗ್ರಹ ಮಾಡಿದೆ. ಬೆಂಗಳೂರು ನಗರದಲ್ಲಿ ಮಾತ್ರ 106 ಕೋಟಿ ರೂ. ಸಂಗ್ರಹವಾಗಿದೆ. ಇದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಐತಿಹಾಸಿಕ ಸಾಧನೆಯಾಗಿದೆ.

265 ಕೋಟಿ ರೂ. ಪರಿಹಾರ: 

ಹಲವು ವರ್ಷಗಳಿಂದ ಬಾಕಿ ಇರುವ ಹಾಗೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ, ವಾಹನ ಸವಾರರು ಹಾಗೂ ಪಾದಚಾರಿಗಳ ಸಾವು ಸೇರಿ ಇತರ ರಸ್ತೆ ಅವಘಡ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿವೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಾಗೂ ಬಾಕಿ ಇದ್ದ 3,708 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿ 265 ಕೋಟಿ ರೂ. ಪರಿಹಾರವನ್ನು ಸಂತ್ರಸ್ತರಿಗೆ ನೀಡಲಾಗಿದೆ.

ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ರಾಜ್ಯದಲ್ಲಿ ಬಾಕಿ ಇರುವ 4,45,67,714 ಪ್ರಕರಣಗಳ ಪೈಕಿ 2023 ರಿಂದ 2025ರವರೆಗೆ ರಿಯಾಯಿತಿ ದರದಲ್ಲಿ 1.22 ಕೋಟಿ ಪ್ರಕರಣ ಇತ್ಯರ್ಥಗೊಂಡಿವೆ. ಆದರೂ 3,23,22,160 ಪ್ರಕರಗಳು ಬಾಕಿ ಉಳಿದುಕೊಂಡಿವೆ.

Karnataka has a staggering ₹2,608.91 crore pending in unpaid traffic fines from vehicle users who violated traffic rules across the state. Despite multiple awareness drives and penalty discount schemes, over 3.23 crore cases still remain unresolved.