ಬ್ರೇಕಿಂಗ್ ನ್ಯೂಸ್
29-01-25 09:46 pm Bangalore Correspondent ಕರ್ನಾಟಕ
ಬೆಂಗಳೂರು, ಜ.29: ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಹಾಳಾಗಿ ಹೋಗಿದೆ. ವಿಜಯೇಂದ್ರ ಅವರೇ ಎಲ್ಲವನ್ನೂ ನಿರ್ಧರಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಇವರೇ ದೊಡ್ಡವರಾಗಿದ್ದಾರೆ. ಇಷ್ಟು ದಿನ ಸಹಿಸಿಕೊಂಡೆ, ಇನ್ನು ಮುಂದೆ ಇರಕ್ಕಾಗಲ್ಲ. ವಿಜಯೇಂದ್ರ ವಿರುದ್ಧ ಯುದ್ಧ ಸಾರುತ್ತೇನೆ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ಗುಡುಗಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ತಮ್ಮ ಮಗನನ್ನು ರಕ್ಷಣೆ ಮಾಡುತ್ತಿದ್ದಾರೆ. ಪಕ್ಷದ ಬಗ್ಗೆ ಗಮನ ಹೊಂದಿಲ್ಲ. ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ. ಎಲ್ಲವನ್ನೂ ಹೇಳುತ್ತೇನೆ. ದೆಹಲಿಗೆ ಹೋಗಿ ಅಮಿತ್ ಶಾ, ಜೆ.ಪಿ ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇನೆ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ, ನಾಯಕರ ಅಸಮಾಧಾನ, ನಾಯಕತ್ವದ ಸಮಸ್ಯೆಗಳನ್ನು ಹೇಳುತ್ತೇನೆ ಎಂದರು.
ಇಷ್ಟು ದಿನ ಸಹಿಸಿಕೊಂಡೆ, ಆದರೆ ಇನ್ನು ಮುಂದೆ ಯುದ್ಧ ಸಾರಲಿದ್ದೇನೆ. ವಿಜಯೇಂದ್ರ ಅವರ ಧೋರಣೆಗೆ ನನ್ನ ತೀವ್ರ ವಿರೋಧ ಇದೆ. ಈಗಲೇ ಇವರ ಅಹಂಕಾರಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದರೆ ಅವರನ್ನು ಬದಲಾಯಿಸಬೇಕು ಎಂದರು.
ಪಕ್ಷ ಬಿಡುತ್ತೀರಾ ಎಂಬ ಪ್ರಶ್ನೆಗೆ, ರಾಷ್ಟ್ರೀಯ ನಾಯಕರ ಜೊತೆಗೆ ಮಾತಾಡಬೇಕು, ಪಕ್ಷ ಬಿಡುವ ವಿಚಾರವನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವಾಗ ಏನಾಗುತ್ತದೋ ಗೊತ್ತಿಲ್ಲ, ಏನಾದರೂ ಸಂಭವಿಸಬಹುದು ಎನ್ನುವ ಮೂಲಕ ಹೊರಗೆ ಕಾಲಿಡುತ್ತಿರುವ ಸೂಚನೆ ನೀಡಿದರು.
"ವಿಜಯೇಂದ್ರ ಅವರು ಸಣ್ಣ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ, ಒಂದು ವರ್ಷದಲ್ಲಿ ಅನುಭವ ಪಡೆಯುತ್ತಾರೆ ಎಂದೆನಿಸಿತ್ತು. ಆದರೆ ಬದಲಾವಣೆ ಕಂಡು ಬಂದಿಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವವಿಲ್ಲ, ನೇಮಕಾತಿಗಳನ್ನು ಏಕಚಕ್ರಾಧಿಪತ್ಯದಂತೆ ಮಾಡಲಾಗುತ್ತಿದೆ. 100% ಶಾಸಕರು ನಮ್ಮ ಬೆಂಬಲದಲ್ಲಿದ್ದಾರೆ, ಆದರೂ ನಾಯಕತ್ವ ತೀರ್ಮಾನಗಳು ಆಂತರಿಕ ಪ್ರಜಾಪ್ರಭುತ್ವದೊಂದಿಗೆ ನಡೆಯುತ್ತಿಲ್ಲ ಎಂದರು. ಈಗಾಗಲೇ ಬಣ ಬಡಿದಾಟದಿಂದ ಕಂಗೆಟ್ಟಿರುವ ಬಿಜೆಪಿಯಲ್ಲಿ ಈಗ ಸುಧಾಕರ್ ಕೂಡ ತೊಡೆ ತಟ್ಟಿರುವುದು ತೀವ್ರ ತಳಮಳ ಸೃಷ್ಟಿಸಿದೆ.
Dr K Sudhakar slams B. Y. Vijayendra says get ready for war. Is Vijayendra greater than Yediyurappa he added.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm