ಬ್ರೇಕಿಂಗ್ ನ್ಯೂಸ್
23-02-26 11:36 am HK News Desk ಕ್ರೈಂ
ಕಾಸರಗೋಡು, ಫೆ.23: ಚಿನ್ನ ಕದ್ದಿದ್ದಾಳೆಂಬ ಆರೋಪದಿಂದ ಬೇಸತ್ತ ಎರಡು ಮಕ್ಕಳ ತಾಯಿ, ಗೃಹಿಣಿಯೊಬ್ಬಳು ಇಲಿಪಾಷಾಣ ಸೇವಿಸಿ ಸಾವಿಗೆ ಶರಣಾದ ಘಟನೆ ಅಡೂರು ಠಾಣೆ ವ್ಯಾಪ್ತಿಯ ನಾಲತ್ತಡ್ಕ ಎಂಬಲ್ಲಿ ನಡೆದಿದೆ. ಸಾವಿಗೂ ಮುನ್ನ ವಿಡಿಯೋ ಮಾಡಿದ್ದು, ತಾನೇನೂ ತಪ್ಪು ಮಾಡಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ನಾಲತ್ತಡ್ಕ ನಿವಾಸಿ ಜಸೀಲಾ (24) ಮೃತಪಟ್ಟ ಯುವತಿ. ಕಳೆದ ಭಾನುವಾರ ಫೆ.15ರಂದು ಜಸೀಲಾ ತನ್ನ ಮನೆಯಲ್ಲಿ ವಿಷ ಸೇವಿಸಿದ್ದು, ಆಬಳಿಕ ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಫೆ.20ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಈಗ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಯ ಬಗ್ಗೆಯೂ ಆರೋಪ ಕೇಳಿಬಂದಿದೆ. ಜಸೀಲಾ ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದು ಕಳವು ಆರೋಪದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ.
ಜಸೀಲಾ ಅವರು ನೆರೆಮನೆಯ ಗೆಳತಿಯೊಂದಿಗೆ ಕೋಜಿಕ್ಕೋಡ್ ತೆರಳಿದ್ದರು. ಹಿಂದಿರುಗಿ ಬಂದಿದ್ದ ಸಂದರ್ಭದಲ್ಲಿ 9.5 ಪವನ್ ಚಿನ್ನದ ಸರ ಕಳವಾಗಿತ್ತು. ಜಸೀಲಾ ಜೊತೆಗೆ ತೆರಳಿದ್ದಾಗ ಕಳವಾಗಿದ್ದೆಂದು ಹೇಳಿ ಆ ಮನೆಯವರು ಆರೋಪ ಮಾಡಿದ್ದರು. ಇದರಂತೆ, ಅಡೂರು ಪೊಲೀಸರು ಜಸೀಲಾ ಮನೆಗೆ ಬಂದು ಶೋಧ ನಡೆಸಿದ್ದರು. ಅಲ್ಲದೆ, ಆಕೆಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದರು. ಇದರಿಂದ ಜಸೀಲಾ ಮನೆಯವರು ತೀವ್ರ ನೊಂದಿದ್ದರು. ಜಸೀಲಾ ತಾನು ಕದ್ದಿಲ್ಲ ಎಂದು ಹೇಳಿದರೂ, ಆಕೆಯ ಗಂಡ ಮತ್ತು ಅತ್ತೆ ಈಕೆಯ ಬಗ್ಗೆಯೇ ಆರೋಪ ಮಾಡಿದ್ದರು.
ನಾನು ಚಿನ್ನ ಕದ್ದಿದ್ದಾಗಿ ಆರೋಪಿಸಿ ಪೊಲೀಸರು ಮನೆಯನ್ನು ಶೋಧ ಮಾಡಿದರು. ಇದರಿಂದ ನನ್ನ ಮನೆಯವರು ತೀವ್ರ ಬೇಸರಗೊಂಡಿದ್ದಾರೆ. ನಾನು ಕದ್ದಿದ್ದರೆ ಅಲ್ವಾ ಕೊಡೋದು. ನಾನು ಎಲ್ಲಿಂದ ಚಿನ್ನ ತಂದು ಕೊಡಲಿ. ನಾನು ಸತ್ತರೆ ಇದಕ್ಕೆ ಕಿರುಕುಳ ಕೊಟ್ಟವರನ್ನೇ ಶಿಕ್ಷಿಸಬೇಕು. ನಾನು ಕದ್ದಿಲ್ಲ ಅಂದರೂ ಕೇಳುತ್ತಿಲ್ಲ. ಪೊಲೀಸರು ನನ್ನನ್ನು ಯಾಕೆ ಪೀಡಿಸುತ್ತಿದ್ದಾರೆ ಎಂದು ಆಕೆ ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾಳೆ.
ಜಸೀಲಾ ತಾಯಿ ಮಾಧ್ಯಮಕ್ಕೆ ಮಾತನಾಡಿದ್ದು ನನ್ನ ಮಗಳು ಖುರಾನ್ ಮೇಲೆ ಕೈಯಿಟ್ಟು ಹೇಳಿದರೂ ಆಕೆಯ ಗಂಡ ಮತ್ತು ಕುಟುಂಬದವರು ಕೂಡ ನಂಬಲಿಲ್ಲ. ಚಿನ್ನ ಕಳವಾಗಿದೆ ಎಂದು ಹೇಳಿದ ಮನೆಯವರು ನಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದರು. ಇದರಿಂದಾಗಿ ಮಗಳು ತೀವ್ರ ನೊಂದುಕೊಂಡಿದ್ದಳು ಎಂದಿದ್ದಾರೆ. ಈ ಬಗ್ಗೆ ಜಸೀಲಾ ಮನೆಯವರು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.
ಅಡೂರು ಪೊಲೀಸರು ಚಿನ್ನ ಕಳವು ಪ್ರಕರಣ ಸಂಬಂಧಿಸಿ ಜಸೀಲಾಳನ್ನು ಕರೆದು ವಿಚಾರಣೆ ನಡೆಸಿದ್ದರು. ಆನಂತರ ಸರಿಯಾದ ಸಾಕ್ಷ್ಯ ಸಿಕ್ಕಿಲ್ಲವೆಂದು ಹಿಂದಕ್ಕೆ ಕಳಿಸಿದ್ದರು. ಸದ್ಯಕ್ಕೆ ಪೊಲೀಸರು ಯುವತಿ ಸಾವಿನ ಬಗ್ಗೆ ಮತ್ತು ಚಿನ್ನ ಕಳವು ದೂರಿನ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am