ಬ್ರೇಕಿಂಗ್ ನ್ಯೂಸ್
06-01-25 09:41 pm Bengaluru Correspondent ಕರ್ನಾಟಕ
ಬೆಂಗಳೂರು, ಜ.6: ಕನ್ನಡ ಟಿವಿ ಮಾಧ್ಯಮಗಳಲ್ಲಿ ಚೀನಾದಲ್ಲಿ ಎಚ್ ಎಂಪಿವಿ ವೈರಸ್ ನಿಂದಾಗಿ ಎಮರ್ಜೆನ್ಸಿಯಾಗಿದೆ, ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಎಂದು ಸುದ್ದಿ ಬಿತ್ತರವಾಗುತ್ತಿರುವುದನ್ನು ಅಲ್ಲಿರುವ ಕನ್ನಡಿಗರು ಅಣಕಿಸಿ ವಿಡಿಯೋ ಮಾಡಿದ್ದಾರೆ. ಯಾವುದೇ ಆತಂಕದ ಸ್ಥಿತಿ ಇಲ್ಲ. ಚೀನಾದ ಜನರು ಸಹಜ ರೀತಿಯಲ್ಲಿದ್ದಾರೆ ಎಂದು ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಚೀನಾದಲ್ಲಿ ಎಚ್ಎಂಪಿವಿ ವೈರಸ್ ತುರ್ತು ಸ್ಥಿತಿಯಾಗಿದೆ, ಶವಾಗಾರದಲ್ಲಿ ಜನರು ಕ್ಯೂ ನಿಲ್ಲುವಂತಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ತಿಳಿದು ಯಾವುದೋ ವಿಡಿಯೋ ತೋರಿಸಿ ಜನರನ್ನು ಗಾಬರಿಗೊಳಿಸಬೇಡಿ, ಅಂತಹ ಸ್ಥಿತಿಯೇನೂ ಇಲ್ಲ ಎಂದು ತಾವೇ ಅಲ್ಲಿನ ಸ್ಥಿತಿಯನ್ನು ತೋರಿಸಿದ್ದಾರೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸುದ್ದಿಗೂ ಚೀನಾದಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ಕನ್ನಡಿಗರು ವಿಡಿಯೋ ಮಾಡಿ ಹೇಳುತ್ತಿದ್ದಾರೆ.
ಚೀನಾದಲ್ಲಿರುವ ಕನ್ನಡಿಗ ಶಶಿ ಶಿರಗುಪ್ಪಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿದ್ದು ಚೀನಾದ ಪರಿಸ್ಥಿತಿಯನ್ನು ಚೆನ್ನಾಗಿಯೇ ವಿವರಿಸಿದ್ದಾರೆ. ಚೀನಾದಲ್ಲಿ ಚಳಿಗಾಲದಲ್ಲಿ ಮಾಸ್ಕ್ ಹಾಕಿ ಕೆಲವರು ತಿರುಗಾಡುವುದು ಸಹಜ. ನೀವು ಅಂದ್ಕೊಂಡ ಹಾಗೆ ಎಚ್ ಎಂಪಿವಿ ವೈರಸ್ ಹಾವಳಿ ಚೀನಾದಲ್ಲಿ ಇಲ್ಲ. ಇಲ್ಲಿ ಎಲ್ಲವೂ ನಾರ್ಮಲ್ ಇದೆ ಎಂದು ಅಲ್ಲಿನ ಜನರು ಸಹಜ ರೀತಿಯಲ್ಲಿ ಓಡಾಡುತ್ತಿರುವುದನ್ನು ತೋರಿಸಿದ್ದಾರೆ. ಆಸ್ಪತ್ರೆಯೊಂದರ ಎಮರ್ಜೆನ್ಸಿ ಬೋರ್ಡನ್ನು ತೋರಿಸಿ ಇಲ್ಲಿ ಯಾವುದೇ ದಟ್ಟಣೆ ಇಲ್ಲ. ರೋಗಿಗಳು ಸಾಲುಗಟ್ಟಿದ್ದೂ ಇಲ್ಲವೆಂದು ಅಲ್ಲಿನ ಸ್ಥಿತಿಯನ್ನು ತೋರಿಸಿದ್ದಾರೆ. ಕನ್ನಡ ಟಿವಿ ಮಾಧ್ಯಮಗಳಲ್ಲಿ ಬರುವ ಸುದ್ದಿ ಸುಳ್ಳು ಎಂದಿದ್ದಾರೆ.
ಮತ್ತೊಬ್ಬರು ಕನ್ನಡತಿ ಅಸೀಮಾ ಧೋಳ ಅವರು ಕೂಡ ಚೀನಾದ ವುಹಾನ್ ನಗರದಿಂದ ವಿಡಿಯೋ ಮಾಡಿದ್ದಾರೆ. ಅಲ್ಲಿ ಉನ್ನತ ಅಧ್ಯಯನ ನಡೆಸುತ್ತಿರುವ ಅಸೀಮಾ, ಅಲ್ಲಿನ ಸೂಪರ್ ಮಾರ್ಕೆಟ್ ಇನ್ನಿತರ ಜಾಗಗಳಿಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಮಾಸ್ಕ್ ಹಾಕದೆ ಜನ ತಿರುಗಾಡುತ್ತಿರುವುದು, ರಸ್ತೆಯಲ್ಲಿ ಗುಂಪಾಗಿ ತೆರಳುತ್ತಿರುವುದನ್ನು ತೋರಿಸಿದ್ದಾರೆ. ಕನ್ನಡದ ಮಾಧ್ಯಮಗಳು ಮಾತ್ರ ಚೀನಾದ ಸ್ಥಿತಿಯ ಬಗ್ಗೆ ತಮಗೆ ಗೊತ್ತಿಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.
No emergecy in China, Kannadigas from china slams Media for creating fear among people, all normal video goes viral. Kannada Media channels have been reporting that there is emergency in china and hospitals are filled with patients due to HMPV Virus. Kannada YouTuber in china Shashi Shiraguppi has made a clear video of the city.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm