ಬ್ರೇಕಿಂಗ್ ನ್ಯೂಸ್
23-11-24 07:43 pm Bangalore Correspondent ಕರ್ನಾಟಕ
ಬೆಂಗಳೂರು, ನ 23: "ವಿಪಕ್ಷಗಳ ಸುಳ್ಳು ಆರೋಪ, ಅಪಪ್ರಚಾರ ಹಾಗೂ ಕೋಮುವಾದದ ವಿರುದ್ಧ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.''ಮೂರು ಕ್ಷೇತ್ರದಲ್ಲಿಯೂ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ನಿರೀಕ್ಷೆಯಂತೆ ಮೂರು ಉಪಸಮರದಲ್ಲಿ ಗೆದ್ದಿದ್ದೇವೆ. ಶಿಗ್ಗಾಂವಿಯಲ್ಲಿ ಯಾಸಿರ್ ಪಠಾಣ್ 13,000, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ 25,500 ಹಾಗೂ ಸಂಡೂರಿನಲ್ಲಿ ಅನ್ನಪೂರ್ಣ ಅವರು 9,600 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿಯವರು ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂತಿದ್ದರು. ಅವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ, ಪಂಚ ಗ್ಯಾರಂಟಿ ಬಗ್ಗೆ ಅಪಪ್ರಚಾರ ಮಾಡಿದ್ದರು. ವಾಲ್ಮೀಕಿ ಹಗರಣ, ಮುಡಾ ಸೈಟ್ ಹಂಚಿಕೆ ಹಗರಣ ವಿಚಾರವಾಗಿ ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದರು. ಪಾತ್ರ ಏನೂ ಇಲ್ಲವೆಂದರೂ ನನ್ನ ಮೇಲೆ ಆರೋಪ ಮಾಡಿದ್ದರು. ವಕ್ಫ್ ಆಸ್ತಿ ವಿಚಾರದಲ್ಲಿ ಕೋಮುವಾದ ಸೃಷ್ಟಿಸಲು ಯತ್ನಿಸಿದರು.
ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿಯವರು ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತದೆ. ಬಸವರಾಜ ಬೊಮ್ಮಾಯಿ ಏನು ಹೇಳಿದ್ದರು, ವಕ್ಫ್ ಆಸ್ತಿ ಅತಿಕ್ರಮಣ ತೆರವು ಮಾಡುತ್ತೇವೆ ಅಂತಿದ್ದರು. ನಾವು ಈಗ ಏನು ಮಾಡುತ್ತಿದ್ದೇವೆ?. ಅವರ ಆಸ್ತಿ ಕಿತ್ತುಕೊಳ್ಳುತ್ತಿದ್ದೇವಾ?. ನಾನು ಯಾವ ರೈತರನ್ನೂ ಒಕ್ಕಲೆಬ್ಬಿಸುವ ಕೆಲಸ ಮಾಡಿಲ್ಲ. ಆರ್.ಅಶೋಕ್ ಕಾಂಗ್ರೆಸ್ ಪಾಪಿಗಳು ಅಂದಿದ್ದರು. ಈಗ ಯಾರು ಪಾಪಿಗಳು?. ಮೂರು ಕಡೆ ಜನರು ಉತ್ತರ ಕೊಟ್ಟಿದ್ದಾರೆ'' ಎಂದು ತಿಳಿಸಿದರು.
ಮೈತ್ರಿ ಎದುರು ನಾವು ಗೆದ್ದಿದ್ದೇವೆ:'
'25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಚನ್ನಪಟ್ಟಣ ಗೆದ್ದಿದ್ದೇವೆ. ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಎದುರು ನಾವು ಜಯಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗ, ಹಳೆ ಮೈಸೂರು, ಮುಂಬೈ ಕರ್ನಾಟಕದ ಭಾಗದಲ್ಲಿ ಗೆದ್ದಿದ್ದೇವೆ. ಇದೊಂದು ಮಹತ್ವದ ಫಲಿತಾಂಶ. ಹಳೆ ಮೈಸೂರು ಜೆಡಿಎಸ್ ಪ್ರಭಾವಿತ ಪ್ರದೇಶ, ಮುಂಬೈ ಕರ್ನಾಟಕ ಬಿಜೆಪಿಗರ ಪಾರುಪತ್ಯದ ಕ್ಷೇತ್ರ. ಈ ಎರಡರಲ್ಲೂ ನಾವು ಗೆದ್ದಿದ್ದೇವೆ. ಸುಳ್ಳು ಆರೋಪ ಮಾಡಿದರು, ಅಪಪ್ರಚಾರ ಮಾಡಿದರು. ಬೆಂಗಳೂರು - ಮೈಸೂರು ಪಾದಯಾತ್ರೆ ಮಾಡಿದ್ದರು'' ಎಂದರು.
'ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮೋದಿಯವರು ಗ್ಯಾರಂಟಿಗಳನ್ನು ತಪ್ಪು ಹಣಕಾಸು ಕಾರ್ಯಕ್ರಮ ಅಂದರು. ಅದನ್ನು ಅವರು ಮಹಾರಾಷ್ಟ್ರದಲ್ಲಿ ಘೋಷಣೆ ಮಾಡಿದರು. ನಮ್ಮ ವಿರುದ್ಧ ಮಹಾರಾಷ್ಟ್ರದಲ್ಲಿ ಜಾಹೀರಾತು ನೀಡಿದರು. ಜಾರಿಯೇ ಮಾಡಿಲ್ಲ ಅಂತ ಸುಳ್ಳು ಜಾಹೀರಾತು ನೀಡಿದ್ದರು. 700 ಕೋಟಿ ರೂ. ಅಬಕಾರಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಹಾಗಾಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಅಂದಿದ್ದೆ. ದ್ವೇಷದ ರಾಜಕಾರಣ ಮಾಡಬಾರದು. ಸುಳ್ಳು ಆರೋಪ, ಅಪಪ್ರಚಾರ ಮಾಡಬಾರದು. ಇದಕ್ಕೆಲ್ಲ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ'' ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಕೈ ಹಿಡಿದಿದೆ:''ಗ್ಯಾರಂಟಿ ಯೋಜನೆ ಕೈ ಹಿಡಿದಿದ್ದಕ್ಕೆ ನಾವು ಗೆದ್ದಿದ್ದೇವೆ. ಜನತಾ ನ್ಯಾಯಾಲಯ ನ್ಯಾಯ ನೀಡಿದೆ. ಕಾಂಗ್ರೆಸ್ ಸಿದ್ದಾಂತಕ್ಕೆ ಎಲ್ಲ ಜಾತಿ, ಬಡವರು ಮತ ಹಾಕಿದ್ದಾರೆ. ಇದು ಸಿದ್ದರಾಮಯ್ಯರ ಗೆಲುವಲ್ಲ. ಇದು ಕಾಂಗ್ರೆಸ್ ಸರ್ಕಾರದ ಗೆಲುವು. ಬೊಮ್ಮಾಯಿ ಸೋತುಬಿಟ್ಟು, ಈಗ ಕಾಂಗ್ರೆಸ್ ದುಡ್ಡು ಖರ್ಚು ಮಾಡಿದರು ಅಂದರೆ ಹೇಗೆ?. ಅಪಪ್ರಚಾರ ಮತ್ತು ಅವರ ಸುಳ್ಳು ಆರೋಪಕ್ಕೆ ಜನ ಉತ್ತರ ನೀಡಿದ್ದಾರೆ. ಜನ ನಮ್ಮ ಅಭಿವೃದ್ಧಿ ಕೆಲಸಕ್ಕೆ, ಸಿದ್ದಾಂತಕ್ಕೆ, ಕೋಮುವಾದದ ವಿರುದ್ಧ ಜನ ಮತ ಹಾಕಿದ್ದಾರೆ. ಈ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಬಲ ನೀಡಿದೆ. ಇದು ಸಾಮೂಹಿಕವಾದ ಪ್ರಯತ್ನ'' ಎಂದರು.
Cm Siddaramaiah slams BJP Says people have given victory amid negetive controversies by BJP Again congress in the by poll elections he added.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm