ಬ್ರೇಕಿಂಗ್ ನ್ಯೂಸ್
15-04-24 06:47 pm HK News Desk ಕರ್ನಾಟಕ
ಬೆಳಗಾವಿ, ಏ.15: ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ನನ್ನ ಆಸ್ತಿ ಬಗ್ಗೆ ಮಾತಾಡ್ತೀಯಾ? ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಎಚ್‌ಡಿ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಮಕ್ಳೆಲ್ಲಾ ತಿರುಗಿ ಬಿದ್ದಮೇಲೆ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ಮೇಲೂ ಹರಿಹಾಯ್ದಿದ್ದಾರೆ, ಇರಲಿ ಅವರಿಗೂ ನನಗೂ ಇದ್ದಿದ್ದೆ. ನಾನು ಅವರಿಗೆ ಈ ಹಿಂದೆನೆ ಹೇಳಿದ್ದೇನೆ, ನೀನು ಹೇಗಿದ್ರು ಎಂಪಿಯಾಗಿ ಹೋಗೋದಿಲ್ಲ, ಅದು ಬೇರೆ ಮಾತು ಬಿಡಿ. ಈ ಹಿಂದೆಯೇ ನನ್ನ ಬಗ್ಗೆ ಚರ್ಚೆ ಮಾಡೋಕೆ ಟಿವಿಗೆ ಕರೀರಿ ಬರ್ತಿನಿ, ಇಲ್ಲ ವಿಧಾನಸಭೆಯಲ್ಲೇ ಮಾತಾಡೋಣ ಎಂದಿದ್ದೆ. ಯಾಕಂದ್ರೆ ಆಸ್ತಿ ಬಗ್ಗೆ ಮಾತನಾಡುವಾಗ ದಾಖಲೆ ಇರಬೇಕಲ್ಲ ಎಂದರು.

ನಾನ್ಯಾವುದೋ ಹೆಣ್ಮಗಳನ್ನು ಕರ್ಕೊಂಡು ಹೋಗಿ ಆಸ್ತಿ ಬರೆಸಿಕೊಂಡಿದ್ದೇನೆ ಅಂತೆ. ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ಹೆದರಿಕೊಂಡು ನಿನ್ನ ಕ್ಷೇತ್ರ ಬಿಟ್ಟು, ಪಕ್ಕದ ಕ್ಷೇತ್ರಕ್ಕೆ ಹೋಗಿದೀಯಾ ಹೋಗು. ನಿಂಗೆ ಹೋಗೋಕೆ ಹಕ್ಕಿದೆ, ಹೋಗಿದೀಯಾ. ಇದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಬನ್ನಿ. ಯಾಕೆಂದ್ರೆ ನಮ್ಮ ಜನರೇಷನ್ ನೀನೆಂಥ ಸುಳ್ಳುಗಾರ, ನೀನೆಂಥ ಮೋಸಗಾರ ಎಂಬುದನ್ನು ನೋಡಬೇಕು. ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಬಹಿರಂಗ ಸವಾಲು ಹಾಕಿದ ಅವರು, ನಾನು ಕಲ್ಲು ಮಾರಿದ್ನೋ, ಕಳ್ಳತನ ಮಾಡಿದ್ನೋ ಎಂಬುದು ಅಸೆಂಬ್ಲಿಯಲ್ಲೇ ತೀರ್ಮಾನ ಆಗಲಿ ಎಂದು ಹೇಳಿದರು.
ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಉಚಿತ ಬಸ್ ಹಾಗೂ 2 ಸಾವಿರ ರೂ. ಕೊಡುತ್ತಿದ್ದೇವೆ. ಅದನ್ನು ನೀನು ಹೋಗಿ ಹೆಣ್ಮಕ್ಳು ದಾರಿ ತಪ್ತಿದ್ದಾರೆ ಅಂದ್ರೇ ಏನರ್ಥ. ನಮ್ಮ ಹೆಣ್ಮಕ್ಳೇನು ದಡ್ಡರು ಅನ್ಕೊಂಡಿದೀರಾ ಎಂದು ಪ್ರಶ್ನಿಸಿದರು.
DK Shivakumar slams Kumaraswamy says he wont win, we will discuss how much money you and your brother did, lets discuss that in the assembly he added.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm