ಬ್ರೇಕಿಂಗ್ ನ್ಯೂಸ್
03-04-24 11:06 pm HK News Desk ಕರ್ನಾಟಕ
ಮೈಸೂರು, ಎ.3: ಮೈಸೂರಿನಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿಯನ್ನೂ ಘೋಷಣೆ ಮಾಡಿದ್ದಾರೆ. ಲಕ್ಷ್ಮಣ್ ಅವರು ಎದುರಾಳಿ ಅಭ್ಯರ್ಥಿ ಮಹಾರಾಜ ಯದುವೀರ್ ಗಿಂತಲೂ ಶ್ರೀಮಂತ ವ್ಯಕ್ತಿ ಎಂಬುದು ಅಫಿಡವಿಟ್ ನಲ್ಲಿ ಕಾಣಿಸಿಕೊಂಡಿದೆ.
ಮಹಾರಾಜ ಯದುವೀರ್ ಅವರ ಆಸ್ತಿ ಮೌಲ್ಯ 4 ಕೋಟಿ 99 ಲಕ್ಷ ಆಗಿತ್ತು. ಲಕ್ಷ್ಮಣ್ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟಾರೆ ಮೌಲ್ಯ 20 ಕೋಟಿಗೂ ಅಧಿಕ ಇದೆ. ಲಕ್ಷ್ಮಣ್ ಪತ್ನಿಯೂ ಕೋಟ್ಯಾಧೀಶೆಯಾಗಿದ್ದು ಪತ್ನಿಯ ಚರಾಸ್ತಿ ಮತ್ತು ಸ್ಥಿರಾಸ್ತಿಯ ಒಟ್ಟಾರೆ ಆಸ್ತಿ ಮೌಲ್ಯ ನಾಲ್ಕು ಕೋಟಿ ಇದೆ. ಎಂ.ಲಕ್ಷ್ಮಣ್ ಕೈಯಲಿರುವ ನಗದು 6,45,000, ಲಕ್ಷ್ಮಣ್ ಪತ್ನಿ ಹೆಸರಿನಲ್ಲಿ 5,32,000 ರೂ. ನಗದು ಇದೆ.
ಲಕ್ಷ್ಮಣ್ ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 22 ಲಕ್ಷ ಹಣ ಇದೆ. ಪತ್ನಿ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ 29 ಲಕ್ಷ ಹಣ ಇದೆ. ಲಕ್ಷ್ಮಣ್ ಯಾವುದೇ ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಒಂದು ಸ್ವಂತ ಕಾರು ಹೊಂದಿದ್ದಾರೆ.
ಪತ್ನಿ ಬಳಿ 100 ಗ್ರಾಂ ಬಂಗಾರ ಇದೆ. ಲಕ್ಷ್ಮಣ್ ಉಳಿತಾಯ ಖಾತೆ ಹಾಗೂ ಕೈಯಲ್ಲಿರುವ ನಗದು ಸೇರಿ ಒಟ್ಟಾರೆ 4 ಕೋಟಿ 66 ಲಕ್ಷ 5 ಸಾವಿರ ಹಣ ಇದೆ. ಪತ್ನಿ ಹೆಸರಿನಲ್ಲಿ ಒಟ್ಟಾರೆ 3 ಕೋಟಿ 95 ಲಕ್ಷ ಹಣ ಇದೆ. ಲಕ್ಷ್ಮಣ್ ಮೈಸೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಎಂ.ಲಕ್ಷ್ಮಣ ಮನೆ, ಕಟ್ಟಡ ಹಾಗೂ ನಿವೇಶನದ ಆಸ್ತಿ ಮೌಲ್ಯ 15 ಕೋಟಿ ಇದೆ. ಲಕ್ಷ್ಮಣ್ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
Congress Lok Sabha candidate M. Lakshman has filed his nomination papers and declared his assets. According to the affidavit, Laxman is richer than rival candidate Maharaja Yaduveer.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 06:55 pm
HK News Staffer
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
27-08-26 05:24 pm
HK News Staffer
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm