ಬ್ರೇಕಿಂಗ್ ನ್ಯೂಸ್
01-04-24 08:02 pm Bangalore Correspondent ಕರ್ನಾಟಕ
ಬೆಂಗಳೂರು, ಏ.1: ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿರಿವಂತ ಉದ್ಯಮಿ ವೆಂಕಟರಮಣೇ ಗೌಡ ಅಲಿಯಾಸ್ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ತನ್ನ ಆಸ್ತಿ ಘೋಷಣೆ ಮಾಡಿದ್ದು 410 ಕೋಟಿ ಆಸ್ತಿ ಹೊಂದಿರೋದಾಗಿ ಅಫಿಡವಿಟ್ ನೀಡಿದ್ದಾರೆ.
ಸ್ಟಾರ್ ಚಂದ್ರು ಹೆಸರಲ್ಲಿ 237 ಕೋಟಿ ಆಸ್ತಿ ಇದ್ದರೆ, ಪತ್ನಿ ಕುಸುಮಾ ಹೆಸರಲ್ಲಿ 146 ಕೋಟಿ ಆಸ್ತಿ ಇರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸ್ಟಾರ್ ಚಂದ್ರು ಹುಟ್ಟುವಾಗಲೇ ಕೋಟ್ಯಾಧೀಶ!
ಮೂಲತಃ ರೈತ ಕುಟಂಬದಿಂದ ಬಂದಿರುವ ಸ್ಟಾರ್ ಚಂದ್ರು ಹುಟ್ಟುವಾಗಲೇ ಆಗರ್ಭ ಸಿರಿವಂತ. ಅವರಿಗೆ ಪಿತ್ರಾರ್ಜಿತವಾಗಿ ಅವಿಭಕ್ತ ಕುಟುಂಬದಿಂದ ಬಂದಿರುವ ಆಸ್ತಿಯೇ 26 ಕೋಟಿ ಇದೆಯಂತೆ. ಪಿತ್ರಾರ್ಜಿತ ಆಸ್ತಿ ಮೌಲ್ಯ 26 ಕೋಟಿ ಎಂದು ನಮೂದಿಸಿದ್ದಾರೆ.
ಇನ್ನು ಸ್ಟಾರ್ ಚಂದ್ರು ಅವರ ಚರಾಸ್ತಿ ಮೌಲ್ಯ 99.36 ಕೋಟಿ ಇದೆ. ಪತ್ನಿ ಕುಸುಮಾ ಹೆಸರಲ್ಲಿ 4.20 ಕೋಟಿ ಚರಾಸ್ತಿ ಇದೆ. ಚಂದ್ರು ಕೈಯಲ್ಲಿ ನಗದು 1,36,14,355 ರೂ. ಹೊಂದಿದ್ದಾರೆ. ತನ್ನದೇ ಹೆಸರಲ್ಲಿ ಮೂರು ಟ್ರ್ಟಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ.
ಸ್ಟಾರ್ ಚಂದ್ರು ಪತ್ನಿ ಕುಸುಮ ಅವರ ಸ್ತಿರಾಸ್ತಿ ಮೌಲ್ಯ 127 ಕೋಟಿ ಇದೆ. ನಗದು 64,94,175 ರೂ. ಇದೆಯಂತೆ. ಪತ್ನಿ ಕುಸುಮಾ ಬಳಿಯೂ ಸ್ವಂತ ಹೆಸರಲ್ಲಿ ವಾಹನ ಇಲ್ಲ. ಚಿನ್ನ 4.2 ಕೆಜಿ (₹ 2.30 ಕೋಟಿ), ವಜ್ರ 71 ಸಿಟಿಎಸ್ (₹ 15 ಲಕ್ಷ), ಬೆಳ್ಳಿ 26 ಕೆಜಿ (₹21.50 ಲಕ್ಷ) ಇದೆ.
ಸ್ಟಾರ್ ಚಂದ್ರು ಮತ್ತು ಪತ್ನಿ ಕುಸುಮಾ ಯಾವುದೇ ಸಾಲ ಹೊಂದಿಲ್ಲ. ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣವೂ ಇಲ್ಲ. ಮಂಡ್ಯ, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕಾಲ ಕಾಲಕ್ಕೆ ತೆರಿಗೆ ಪಾವತಿಸಿರುವ ಬಗ್ಗೆ ಸ್ಟಾರ್ ಚಂದ್ರು ಹೇಳಿಕೊಂಡಿದ್ದಾರೆ.
Mandya congress candidate Star Chandru richest candidate after DK Suresh, 410 crores wealth, no loan no car, 4 kilo Gold.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm