ಬ್ರೇಕಿಂಗ್ ನ್ಯೂಸ್
14-03-24 10:03 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.14: ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ತಪ್ಪಿದ್ದರಿಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೆರಳಿ ಕೆಂಡವಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್, ಈಶ್ವರಪ್ಪ ಕೋಪ ಶಮನಕ್ಕೆ ಮುಂದಾಗಿದೆ. ಇದೇ ವೇಳೆ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕಾಂತೇಶ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸುಳಿವನ್ನು ನೀಡಿದ್ದಾರೆ.
ಟಿಕೆಟ್ ವಂಚಿತ ನಾಯಕರಾದ ಡಿವಿ ಸದಾನಂದಗೌಡ, ಸಿಟಿ ರವಿ ಅವರು ಬೆಂಗಳೂರಿನಲ್ಲಿ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಈಶ್ವರಪ್ಪ ತನ್ನ ಬೆಂಬಲಿಗರ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಎಂದಿರುವುದು ಕುತೂಹಲ ಮೂಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಟಿಕೆಟ್ ವಿಷಯ ಈಗ ಮುಗಿದ ಕಥೆ. ಮುಂದೆ ಏನಾಗಬೇಕು ನೋಡೋಣ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೈಬಲಪಡಿಸೋಣ. ಈಶ್ವರಪ್ಪ ಜೊತೆಗಿನ ಮಾತುಕತೆಯನ್ನ ವರಿಷ್ಠರ ಗಮನಕ್ಕೆ ತರುತ್ತೇನೆ. ಈಶ್ವರಪ್ಪರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.
ಟಿಕೆಟ್ ಕೊಡುವ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಳ್ಳಲಿಲ್ಲ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಈಶ್ವರಪ್ಪ ಅವರ ಜತೆ ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ನಾಯಕರು ಸಹ ಮಾತನಾಡಲಿದ್ದಾರೆ. ಅವರ ಮಗನನ್ನು ಎಂಎಲ್‌ಸಿ ಮಾಡಲಿದ್ದಾರೆ ಎಂದು ಹೇಳಿದರು. ಈ ಮೂಲಕ ಕಾಂತೇಶ್‌ಗೆ ಎಂಎಲ್‌ಸಿ ಮಾಡುವ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ.
Eshwarappa angry after son doesnt get Loksabha ticket for Haveri, eshwarappa slams B. S. Yediyurappa. BJP leaders have arrived at his residence for peace meeting. Miffed after his son was denied a ticket for the Haveri-Gadag Lok Sabha seat, senior BJP leader KS Eshwarappa on Wednesday laid the blame on former chief minister and Lingayat stalwart BS Yediyurappa.
26-02-26 12:58 pm
HK News Staffer
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
ದೇಶದಲ್ಲೇ ಮೊದಲು ; ಕೇರಳ ನಾಗರಿಕರಿಗೆ ನೇಟಿವಿಟಿ ಕಾರ...
25-02-26 01:48 pm
25-02-26 10:10 pm
HK News Desk
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
26-02-26 01:21 pm
HK News Staffer
Mangalore: ಕುರ್ನಾಡಿನ ವೃದ್ಧ ದಂಪತಿಗೆ ನೂತನ ಮನೆ ಹ...
26-02-26 10:37 am
ಮಂಗಳೂರು ವಿವಿಯ ಯಕ್ಷಮಂಗಳ ಪ್ರಶಸ್ತಿ ಪ್ರಕಟ ; ಕಪ್ಪೆ...
25-02-26 05:41 pm
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
26-02-26 04:45 pm
HK News Staffer
Vexon fraud Company, Mangalore: ಮಂಗಳೂರಿನಲ್ಲಿ...
26-02-26 03:48 pm
Mangalore Blackmail, Crime: ಖಾಸಗಿ ವೀಡಿಯೋ ಮುಂದ...
24-02-26 10:07 pm
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm