ಬ್ರೇಕಿಂಗ್ ನ್ಯೂಸ್
05-03-24 10:40 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 05: ಇಲ್ಲಿಂದಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದ ಬಗ್ಗೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ರಿಲೀಪ್ ಸಿಕ್ಕಿದೆ ಎಂಬ ಮಾಹಿತಿ ಇದೆ. ನನ್ನ ಮೇಲೆ ಏನು ಕೇಸು ಇತ್ತೋ ಅದು ತಪ್ಪು ಅಂತ ತೀರ್ಪು ಬಂದಿದೆ. ಕೈಗೊಂಡಿರುವ ಕ್ರಮ ಎಲ್ಲವೂ ತಪ್ಪು ಎಂದು ಆದೇಶ ಆಗಿದೆ. ಕಷ್ಟದ ಜೀವನದ ಅತಿ ದೊಡ್ಡ ಸಂತೋಷದ ದಿನ ಇಂದು. ಅಜ್ಜಯ್ಯನ ದರ್ಶನಕ್ಕೆ ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ನಾನು ತಪ್ಪು ಮಾಡಿಲ್ಲ ಅಂತ ಕೋರ್ಟ್ ಹೇಳಿದೆ. ಈಗಲೂ ಸಿಬಿಐ ಏನೇನು ಮಾಡುತ್ತೆ ಅಂತ ಸದ್ಯದಲ್ಲೇ ಹೇಳ್ತಿನಿ. ಸುಪ್ರೀಂ ಕೋರ್ಟ್ ತೀರ್ಪಿಗೆ ಮೇಲ್ಮನವಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ನನಗೆ ಮಾರ್ಗ ಕಷ್ಟ ಅನ್ನಿಸಿಲ್ಲ. ಜೈಲಿಗೆ ಹೋದಾಗಲೂ ಆತ್ಮ ವಿಶ್ವಾಸದಲ್ಲಿ ಹೋಗಿದ್ದೆ. ಎಷ್ಟು ತೊಂದರೆ ಕೊಡಲು ಯತ್ನಿಸುತ್ತಾರೆ ಅಷ್ಟು ಗಟ್ಟಿಯಾಗಿ ಬೆಳೆಯಲು ಶಕ್ತಿ ನೀಡುತ್ತದೆ. ನಮ್ಮ ಸುತ್ತಮುತ್ತ ಇರುವವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದರು.
ಶಿವಕುಮಾರ್ ವಿರುದ್ಧದ 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಈ ಪ್ರಕರಣವನ್ನು ಇನ್ನು ಮುಂದೆ PMLA ಅಡಿ ತನಿಖೆ ಮಾಡಲಾಗುವುದಿಲ್ಲ. ಈ ಪ್ರಕರಣ 2017ರ ಅಗಸ್ಟ್ನಲ್ಲಿ ದೆಹಲಿಯಲ್ಲಿ ಪತ್ತೆಯಾದ ನಗದು ಹಣಕ್ಕೆ ಸಂಬಂಧಿಸಿದ್ದಾಗಿದೆ. ಈ ಕುರಿತು ಅಕ್ರಮ ಹಣ ವರ್ಗಾವಣೆ ಸೆಕ್ಷನ್‌ಗಳ ಅಡಿ ಇಡಿ ತನಿಖೆ ಆರಂಭಿಸಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್‌ನಿಂದ ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.
ಬೆದರಿಕೆ ಮೇಲ್ ಬಂದಿದೆ ;
ಬೆದರಿಕೆ ಇ ಮೇಲ್ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಹಾಗೂ ಸಿಎಂಗೆ ಬೆದರಿಕೆಯ ಇ - ಮೇಲ್ ಹಾಕಿದ್ದಾರೆ. 2.5 ಮಿಲಿಯನ್ ಡಾಲರ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅದನ್ನು ನಗರ ಪೊಲೀಸ್ ಕಮಿಷನರ್ಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ನಮಗೆ ಬೆದರಿಕೆ ಮೇಲ್ ಬಂದಿದೆ. ನಾವು ಅದನ್ನು ನಗರ ಪೊಲೀಸ್ ಆಯುಕ್ತರಿಗೆ ಕೊಟ್ಟಿದ್ದೇವೆ. ಮೊನ್ನೆ ಈ ಬೆದರಿಕೆ ಇ - ಮೇಲ್ ಬಂದಿದೆ. ಹಣ ಕೊಡದೇ ಇದ್ದರೇ ನಾವು ಬಸ್, ರೈಲು, ಟ್ಯಾಕ್ಸಿಗಳು, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ರಾಜ್ಯಾದ್ಯಂತ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಬಂದಿದೆ ಎಂದು ತಮಗೆ ಬಂದಿರುವ ಇ - ಮೇಲ್ ಓದಿ ಹೇಳಿದರು.
ನಮಗೆ ಬಂದಿರುವ ಬೆದರಿಕೆ ಇ-ಮೇಲ್ ಬೋಗಸಾ?. ನಕಲಿನೋ?. ಯಾವುದು ಅಂತ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡುತ್ತಾರೆ ಎಂದು ಇದೇ ವೇಳೆ ತಿಳಿಸಿದರು.
In a big relief to Karnataka's Deputy Chief Minister DK Shivakumar ahead of Lok Sabha polls, the Supreme Court today dismissed a 2018 money laundering case against the Congress leader. The case pertained to allegations of tax evasion and hawala transactions worth crores.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am