ಬ್ರೇಕಿಂಗ್ ನ್ಯೂಸ್
23-02-24 11:05 am Bangalore Correspondent ಕರ್ನಾಟಕ
ಬೆಂಗಳೂರು, ಫೆ 23: ಆಡಳಿತ ಪಕ್ಷದವರು ಸದನದ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರಕಾರದ ಕ್ರಮಕ್ಕೆ ಸಭಾಧ್ಯಕ್ಷರು ಕೂಡ ಬೆಂಬಲ ನೀಡಿರುವುದು ದುರದೃಷ್ಟ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮಾಡದ ನಾಲಾಯಕ್ ಸರಕಾರ ಎಂದು ಅವರು ಹೇಳಿದರು.
ನಾಲಾಯಕ್ ಕಾಂಗ್ರೆಸ್ ಸರಕಾರಕ್ಕೆ ಗ್ಯಾರಂಟಿಗಳಿಂದ ತಮ್ಮ ಗೆಲುವು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಅದಕ್ಕಾಗಿಯೇ ಪದೇಪದೇ ನಿರ್ಣಯ ಮಂಡಿಸಿ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತೀವ್ರವಾಗಿ ಖಂಡಿಸಿದರು.
ಸದನದ ಗೌರವವನ್ನು ಆಡಳಿತ ಪಕ್ಷವಾದ ಕಾಂಗ್ರೆಸ್ ನಾಶ ಮಾಡುತ್ತಿದೆ. ಬಿಜೆಪಿ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಹಾಗಾಗಿ ನಾವು ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ್ದೇವೆ. ಕಾನೂನು ಸಚಿವರ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ವಿರೋಧ ಪಕ್ಷದವರಾದ ನಾವು ಸದನದ ನೀತಿ ನಿಯಮಗಳಿಗೆ ಗೌರವ ಕೊಟ್ಟು ಸದನ ಸುಸೂತ್ರವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಸರಕಾರ ಮತ್ತು ಸಭಾಧ್ಯಕ್ಷರಿಗೆ ಸಹಕಾರ ನೀಡಿದ್ದೇವೆ ಎಂದು ಅವರು ವಿವರಿಸಿದರು. ಆದರೆ, ಇವತ್ತು ಮಾನ್ಯ ಕಾನೂನು ಸಚಿವರು ಏಕಾಏಕಿಯಾಗಿ ಹೆಚ್ಚುವರಿ ವಿಷಯದಡಿ ನಿರ್ಣಯ ಮಂಡಿಸಿದ್ದಾರೆ ಎಂದು ಅವರು ಟೀಕಿಸಿದರು.
ಆಡಳಿತ ಪಕ್ಷವು ವಿಪಕ್ಷದ ತಾಳ್ಮೆ ಪರೀಕ್ಷಿಸುವ ಕೆಲಸ ಮಾಡಿದೆ. ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಜೀ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಜನತೆಗೂ ಗೊತ್ತಿದೆ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಗಾಬರಿಯಿಂದ ಆಡಳಿತ ಪಕ್ಷವಾದ ಕಾಂಗ್ರೆಸ್‍ನವರು ಈ ರೀತಿ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ತಿಳಿಸಿದರು. ವಿಪಕ್ಷ ನಾಯಕ ಆರ್.ಅಶೋಕ್ ಅವರು ಈ ಸಂದರ್ಭದಲ್ಲಿ ಇದ್ದರು.
MLA B.Y. Vijayendra has alleged that the ruling party has flouted all rules and regulations of the House. Speaking to media persons at Vidhana Soudha here today, he said it was unfortunate that the Speaker had also supported the government's move. He said the Congress government, which is looking forward to defeat in the Lok Sabha elections, is a nalayak government that has not done any development in the state.
26-02-26 10:01 pm
HK News Staffer
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
25-02-26 10:10 pm
HK News Desk
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
26-02-26 01:21 pm
HK News Staffer
Mangalore: ಕುರ್ನಾಡಿನ ವೃದ್ಧ ದಂಪತಿಗೆ ನೂತನ ಮನೆ ಹ...
26-02-26 10:37 am
ಮಂಗಳೂರು ವಿವಿಯ ಯಕ್ಷಮಂಗಳ ಪ್ರಶಸ್ತಿ ಪ್ರಕಟ ; ಕಪ್ಪೆ...
25-02-26 05:41 pm
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
26-02-26 11:04 pm
mangalore
ಹವಾಲಾ ಹಣದ ಭಾರವೇ ಸಿಜೆ ರಾಯ್ ಪ್ರಾಣ ತೆಗೆಯಿತಾ?! ಕ...
26-02-26 04:45 pm
Vexon fraud Company, Mangalore: ಮಂಗಳೂರಿನಲ್ಲಿ...
26-02-26 03:48 pm
Mangalore Blackmail, Crime: ಖಾಸಗಿ ವೀಡಿಯೋ ಮುಂದ...
24-02-26 10:07 pm
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm