ಬ್ರೇಕಿಂಗ್ ನ್ಯೂಸ್
20-02-24 07:02 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.20: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದರೂ ಪ್ರಧಾನಿ ಸ್ಥಾನಕ್ಕೆ ಅರ್ಧದಲ್ಲಿ ರಾಜೀನಾಮೆ ಕೊಡಲಿದ್ದಾರೆ. ಯಾಕೆಂದರೆ ಅವರಿಗೆ ಗಂಡಾಂತರ ಎದುರಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ.
ಒನ್ ಇಂಡಿಯಾ ಸಂಸ್ಥೆ ನಡೆಸಿರುವ ಸಂದರ್ಶನದಲ್ಲಿ ಅವರು ಮಾತುಗಳನ್ನು ಹೇಳಿದ್ದಾರೆ.

ಹನ್ನೆರೆಡು ವರ್ಷ ಮಾತ್ರ ಮೋದಿ ಅವರಿಗೆ ಶುಭ ಯೋಗವಿದೆ. ಹೀಗಾಗಿ ನರೇಂದ್ರ ಮೋದಿ ಮುಂಬರುವ ಎಲೆಕ್ಷನಲ್ಲಿಯೂ ಗೆಲ್ತಾರೆ. ಮೋದಿ ಕೆಳಗಡೆ ಒಂದಿಷ್ಟು ಜನ ಲಂಚ ತಿನ್ನದ ಜನ ಇದ್ದರು. ಕ್ಲೀನ್ ಹ್ಯಾಂಡ್‌ಗಳು ಇದ್ದವು. ಆದರೆ ಇತ್ತೀಚೆಗೆ ಅವರೇ ಭ್ರಷ್ಟಾಚಾರ ಮಾಡಿಕೊಂಡು ಬರುತ್ತಿದ್ದಾರೆ. ಯಾಕೆ ಹೀಗೆ ಮಾಡ್ತಾಯಿದ್ದಾರೆ ಅಂದರೆ, ಒಬ್ಬ ರಾಜನನ್ನು ಹಾಳ ಮಾಡಬೇಕು ಅಂತ ಹಲವಾರು ಜನ ಕಾಯುತ್ತಿರುತ್ತಾರೆ. ಅದು ವಿರೋಧ ಪಕ್ಷದವರೇ ಆಗಬೇಕು ಅಂತಿಲ್ಲ. ರಾಜನನ್ನು ಒಬ್ಬ ಮಂತ್ರಿ, ಸೈನಿಕ ಕೂಡ ಹಾಳು ಮಾಡಬಹುದು. ಇವರು ಮಾಡೋ ಕೆಟ್ಟ ಕೆಲಸಗಳಿಂದ ಮೋದಿಗೆ ಕೆಟ್ಟ ಹೆಸರು ಬರಬಹುದು. ಇಂಥಹ ಬಹಳಷ್ಟು ಗಂಡಾಂತರಗಳು ಮೋದಿಗೆ ಇವೆ.

ಮೋದಿ ಕಾಂಗ್ರೆಸ್ ಸೇರಿದರೂ ಮೋದಿನೇ ಗೆಲ್ಲೋದು !
ನರೇಂದ್ರ ಮೋದಿ ವರ್ಚಸ್ಸು ಎಷ್ಟಿದೆ ಅಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೇರಿದರೂ ಮೋದಿನೇ ಗೆಲ್ಲುತ್ತಾರೆ. ಎಲ್ಲಾ ಕಾಂಗ್ರೆಸ್ ನವರು ನರೇಂದ್ರ ಮೋದಿ ಬಳಿಯೇ ಬರುತ್ತಾರೆ. ಹೊರಗಡೆಯಿಂದ ಸಪೋರ್ಟ್ ಮಾಡುವವರು ತುಂಬ ಜನ ಇದ್ದಾರೆ. ಉದಾಹರಣೆಗೆ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೋದಿಗೆ ಸಪೋರ್ಟ್ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ದೆಹಲಿಯಲ್ಲಿ ಸಾವಿರಾರು ಜನ ಸೇರಿಕೊಂಡರೂ ನರೇಂದ್ರ ಮೋದಿ ಅವರನ್ನ ಏನು ಮಾಡಕ್ಕೂ ಆಗಲ್ಲ. ಯಾಕೆಂದರೆ ಅವರ ಯೋಗ ಇನ್ನೂ ಚೆನ್ನಾಗಿದೆ.
ಹನ್ನೆರಡು ವರ್ಷ ಮಾತ್ರ ಮೋದಿಗೆ ಶುಭ ಯೋಗವಿದೆ. ಒಂದು ವೇಳೆ ಅವರು ವೈರಾಗ್ಯ ಬಂದು ರಾಜೀನಾಮೆ ನೀಡದೇ ಇದ್ದಲ್ಲಿ ಗಂಡಾಂತರ ಎದುರಾಗಲಿದೆ. ಅಂದರೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಥರ ಮೋದಿ ಅವರಿಗೆ ಏನಾದರೂ ಮಾಡಬಹುದು. ಅವರ ಜನರೇ ಅವರಿಗೆ ಕುತಂತ್ರದಿಂದ ಏನಾದ್ರು ಮಾಡಬಹುದು.
ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಬಗ್ಗೆ ರಾಜ್ಯದಲ್ಲಿ ಮಾತ್ರ ವಿರೋಧ ಅಷ್ಟೇ. ದೆಹಲಿ ಹೋದ್ರೆ ಆಲ್ ಪಾರ್ಟಿ ಮೀಟಿಂಗ್ ಅಲ್ಲಿ ಅವರೂ ಬಾಯಿ ಮುಚ್ಚಿಕೊಂಡು ಕುಳಿತಿರುತ್ತಾರೆ. ಯಾಕೆಂದರೆ ಮೋದಿ ಹೇಗೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಮೋದಿಯವರು ಬೇರೆ ಪಕ್ಷಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ. ಯೋಗಿ ಆದಿತ್ಯನಾಥ್ ಅವರನ್ನೇ ಮುಂದಿನ ಪಿಎಂ ಮಾಡಬಹುದು ಎಂದು ಬ್ರಹ್ಮಾಂಡ ಗುರೂಜಿ ಕುತೂಹಲದ ಭವಿಷ್ಯ ನುಡಿದಿದ್ದಾರೆ.
Brahmanda Guruji predicts about modi, says he will resign in just two years of becoming prime Minister again. says he will become Prime Minister again but within 2 years of time will resign the post of prime minister added in a interview made by oneIndia
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am