ಬ್ರೇಕಿಂಗ್ ನ್ಯೂಸ್
20-02-24 12:53 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.20: ಸ್ಯಾಂಡಲ್‌ವುಟ್ ನಟ ಧ್ರುವ ಸರ್ಜಾ ಸೇರಿದಂತೆ 'ಮಾರ್ಟಿನ್' ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಿಂದ ಕಾಶ್ಮೀರಕ್ಕೆ ತೆರಳಿದ್ದ ಚಿತ್ರ ತಂಡದ ಸದಸ್ಯರು ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿಮಾನ ಶ್ರೀನಗರ ನಿಲ್ದಾಣದಲ್ಲಿ ಇಳಿಯಲು ಪರದಾಡಿದ್ದು ಅಪಘಾತದ ಅನುಭವಕ್ಕೊಳಗಾಗಿ ಪ್ರಯಾಣಿಕರು ಒಂದು ಕ್ಷಣ ಗಾಬರಿ ಬಿದ್ದ ಘಟನೆ ನಡೆದಿದೆ.
ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್ ಚಿತ್ರತಂಡವು ಸೋಮವಾರ ಸಂಜೆ ಸಾಂಗ್ ಶೂಟಿಂಗ್ ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಹವಾಮಾನ ವೈಪರೀತ್ಯದಿಂದ ಏಕಾಏಕಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡುಬಂದಿದೆ. ಕೆಟ್ಟ ಹವಾಮಾನದಿಂದಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡೋದಕ್ಕೆ ಸಾಧ್ಯವಾಗದೇ ಪೈಲಟ್ ಪರದಾಟ ನಡೆಸಿದ್ದಾರೆ.


ಚಿತ್ರತಂಡದ ಸದಸ್ಯರು ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಭಯಕ್ಕೀಡಾಗಿದ್ದಾರೆ. ಕುಳಿತ ಸೀಟ್ ನಡುಗಿದ ಅನುಭವವಾಗಿದ್ದು ಕುಳಿತಿದ್ದ ಸ್ಥಳದಿಂದಲೇ ಪ್ರಯಾಣಿಕರು ದೇವರಿಗೆ ಕೈಮುಗಿದಿದ್ದಾರೆ. ಭಯಕ್ಕೀಡಾಗಿ ಕಣ್ಣೀರಿಟ್ಟಿದ್ದಾರೆ. ಕೊನೆಗೆ ಪೈಲಟ್‌ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಕೂಡಲೇ ಪ್ರಯಾಣಕರು ಗಾಬರಿಯಿಂದ ಹೊರಬಂದಿದ್ದು ಜೀವ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಅಪಾಯದಿಂದ ಪಾರಾದ ನಟ ಧ್ರುವ ಸರ್ಜಾ ತನಗಾದ ಅನುಭವದ ಬಗ್ಗೆ ವಿಡಿಯೋ ಮಾಡಿದ್ದು, " ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವಕ್ಕೀಡಾದೆ. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ " ಎಂದಿದ್ದಾರೆ. ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ತಂಡದಲ್ಲಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಖುಷಿಯಲ್ಲಿ ಎಲ್ಲರೂ ಜೈ ಆಂಜನೇಯ, ಜೈ ಶ್ರೀರಾಮ್ ಎಂದಿದ್ದಾರೆ.
Kannada Actor Dhruva Sarja And Martin Film Crew Narrowly Escaped The Plane Crash In Srinagar.
22-06-26 08:18 pm
HK News Staffer
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
22-06-26 12:55 pm
HK News Staffer
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
22-06-26 05:23 pm
HK News Staffer
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
22-06-26 10:21 pm
HK News Staffer
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm
Brahmarakootlu toll fight: ಟೋಲ್ ತಪ್ಪಿಸಲು ಬ್ರಹ...
22-06-26 12:53 pm
ಕಡಬ ; ಪತ್ನಿಯನ್ನು ಕಡಿದು ಕೊಂದು ನೇಣು ಬಿಗಿದು ಸಾವಿ...
20-06-26 09:13 pm