ಬ್ರೇಕಿಂಗ್ ನ್ಯೂಸ್
18-02-24 09:37 pm HK News Desk ಕರ್ನಾಟಕ
ಹುಬ್ಬಳ್ಳಿ , ಫೆ 18: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಿಂದ ದೇಶದ ಬಡತನ ನಿರ್ಮೂಲನೆ ಆಗಲ್ಲ. ಬಿಜೆಪಿಯವರು ರಾಜಕೀಯ ಇಚ್ಛಾಶಕ್ತಿಗೋಸ್ಕರ ರಾಮ ಮಂದಿರ ಕಟ್ಟಿರೋದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರುವ ಜಾಗದಲ್ಲಿ ಇವರು ಮಂದಿರ ನಿರ್ಮಿಸಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದಾರೆ. ರಾಮ ಮಂದಿರದಿಂದ ನಿಮ್ಮ ಬಡತನ ನಿರ್ಮೂಲನೆ ಆಗಿದೆಯಾ? ಅದನ್ನು ಹೇಳಿ ಯಾಕೆ ವೋಟ್ ಕೇಳತೀರಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸರ್ವಾಧಿಕಾರಿ ಧೋರಣೆ:
''ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೀತಿದೆ. ಹತ್ತು ವರ್ಷದಲ್ಲಿ ಏನೇ ಉದ್ಘಾಟನೆ ಮಾಡಿದ್ರು ಮೋದಿ ಒಬ್ಬರೇ. ದೇಶ ಹಳ್ಳ ಹಿಡಿದು ಹೋಗಿದೆ. ಈ ಅವಧಿಯಲ್ಲಿ ಬಡವರಿಗೆ ಅನುಕೂಲ ಅಗಿರುವ ಒಂದು ಕಾರ್ಯಕ್ರಮ ಇಲ್ಲ. ಇವರ ಸಾಧನೆ ಏನು? ಪೆಟ್ರೋಲ್, ಡಿಸೇಲ್ ರೇಟ್ ಕಡಿಮೆ ಆಗಿದೆಯಾ.? ಚುನಾವಣೆ ಬಂದಾಗ ಒಂದು ಅಜೆಂಡಾ ಸೆಟ್ ಮಾಡ್ತಾರೆ. ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ರೆ ಟಿವಿ ಆಫ್ ಮಾಡಿ ಬನ್ನಿ'' ಎಂದು ಬಿಜೆಪಿ ನಾಯಕರಿಗೆ ಸಚಿವ ಲಾಡ್ ಸವಾಲು ಹಾಕಿದರು.
''ರಾಮ-ರಹೀಮ್, ಪಾಕಿಸ್ತಾನ -ಅಫ್ಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದ್ರು. ಹಾಗಿದ್ರೆ RDX ಹೇಗೆ ಬಂತು. ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಸೋತ ಕಮಲನಾಥ್ ಅವರನ್ನು ಬಿಜೆಪಿಗೆ ಸೆಳೆಯುತ್ತಿದ್ದಿರಿ. ಇದಕ್ಕೆಲ್ಲ ಅಂತ್ಯ ಇದೆ, ದೇವರಿದ್ದಾನೆ'' ಎಂದರು
10 ವರ್ಷದಲ್ಲಿ ಬಿಜೆಪಿಯವರ ಸಾಧನೆ ಏನು: ''ಈ ದೇಶ ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ತೀದ್ದಾರೆ. ಈ ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ. ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಅಂತಿದ್ದಾರೆ. ಹಾಗಾದ್ರೆ ಬಿಜೆಪಿಯವರು ಏನು ಮಾಡಿದ್ದಾರೆ'' ಎಂದು ಪ್ರಶ್ನಿಸಿದರು
Karnataka Minister Santosh lad slams Pm Modi over his dictatorship rule in India. Is there any benefit for the poor people. Ayodhya temple is not built in a place where it should have been built he added.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm