ಬ್ರೇಕಿಂಗ್ ನ್ಯೂಸ್
31-01-24 05:26 pm HK News Desk ಕರ್ನಾಟಕ
ಹುಬ್ಬಳ್ಳಿ, ಜ 31: ರಾಜ್ಯದಲ್ಲಿ ಒಂದು ಕಡೆ ಲೋಕಾಯುಕ್ತರ ದಾಳಿಯಾದರೆ, ಮತ್ತೊಂದು ಕಡೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಢೀರ್ ಹುಬ್ಬಳ್ಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ನಿಗದಿಯಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಳಗಾವಿ ಪ್ರವಾಸ ಇತ್ತು. ಆದ್ರೆ ಸಚಿವರು ಬೆಳಗಾವಿಗೆ ಹೋಗುವಾಗ ದಾರಿ ಮಧ್ಯೆ ಹುಬ್ಬಳ್ಳಿ ತಹಶೀಲ್ ಕಚೇರಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ತಹಶೀಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ವಿವಿಧ ಕಡೆ ಪರಿಶೀಲನೆ, ಅಧಿಕಾರಿಗಳ ಹಾಜರಾತಿ, ಕೆಲಸದ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತನಾಡಿದ ಸಚಿವರು, ನಮ್ಮ ಇಲಾಖೆ ಕಾರ್ಯವೈಖರಿ ತಿಳಿಯುವ ನಿಟ್ಟಿನಲ್ಲಿ ಆಕಸ್ಮಿಕ ಭೇಟಿ ನೀಡಿದ್ದೇನೆ. ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಇಲಾಖೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸಲು ಸಹ ಕ್ರಮ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದೇವೆ. ಏಕಗವಾಕ್ಷಿ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ದಾಖಲೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಬಾರಿ ಬಂದಾಗ ಆನ್ಲೈನ್ನಲ್ಲಿ ಕಡತ ವಿಲೇವಾರಿ ಆಗ್ತಾ ಇರಲಿಲ್ಲ. ಜನ ಹೇಳುವ ಹಾಗೇ ಬೇಕಾದವರದ್ದು ಮಾತ್ರ ಕೆಲಸ ಆಗುತ್ತೆ. ಹೀಗಾಗಿ ನಮಗೆ ತೊಂದರೆ ಆಗ್ತಿದೆ, ಅನ್ನೋ ದೂರು ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಕೂಡ ನಮಗೆ ತಾಕೀತು ಮಾಡಿದ್ದಾರೆ. ಈಗ ಸಂಪೂರ್ಣ ಆನ್ಲೈನ್ ಮೂಲಕ ಕಡತ ವಿಲೇವಾರಿ ಆಗುತ್ತಿದೆ. ಕಾವೇರಿ 2.0 ನೋಂದಣಿ ಬಗ್ಗೆ ಕೂಡ ದೂರು ಬಂದಿದ್ದವು. ಈಗ ಜೆ ಸ್ಲಿಮ್ನಿಂದ ಆಗುತ್ತಿದ್ದ ಸಮಸ್ಯೆ ಆಗ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ತಹಶೀಲ್ದಾರ್, ಸರ್ವೇ, ಸಬ್ ರಿಜಿಸ್ಟ್ರಾರ್ ಇಲಾಖೆಗಳ ಎಲ್ಲ ದಾಖಲೆಗಳನ್ನು ಡಿಜಿಟಲ್ ಮಾಡ್ತಾ ಇದ್ದೇವಿ. ಏಜೆಂಟರ್ ಹಾವಳಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲಿ ಏಜೆಂಟರ್ಗಳ ಹಾವಳಿ ಇದೆ. ಅಂತಾ ನಾವು ಪರಿಶೀಲನೆ ಮಾಡ್ತಾ ಇದ್ದೀವಿ. ಯಾವ ಯಾವ ಅಧಿಕಾರಿಗಳ ಹತ್ತಿರ ಕಡತ ಎಷ್ಟು ದಿನಗಳು ಇವೆ ಅನ್ನೋದನ್ನು ತಹಶೀಲ್ದಾರ್ಗೆ ತಿಳಿಯುವಂತೆ ಮಾಡಿದ್ದೇವೆ. ನಾನು ಇಲ್ಲಿ ಬಂದು ನಿಂತರೂ, ಏಜೆಂಟ್ ಹಾವಳಿ ತಪ್ಪಿಸಲು ಆಗಲ್ಲ. ಆದರೆ ಆದಾಗದಂತೆ ಡಿಜಿಟಲೀಕರಣ ಮಾಡ್ತಾ ಇದ್ದೀವಿ ಎಂದು ಮಾಹಿತಿ ನೀಡಿದರು.
ಸರ್ವೇ ಕೆಲಸ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯ ವೇಗ ಹೆಚ್ಚಿಸಲಿದ್ದೇವೆ. 20 ಕೋಟಿ ವೆಚ್ಚ ಮಾಡಿ ಆಧುನೀಕರಣ ಉಪಕರಣ ಕೊಡ್ತಾ ಇದ್ದೀವೆ. 750 ಪರವಾನಗಿ ಸರ್ವೇ ಮಾಡುವವರಿಗೆ ಹಂಚಿಕೆ ಮಾಡ್ತಾ ಇದ್ದೀವಿ. 357 ಸರ್ವೇಸ್ ಎಡಿಎಲ್ಆರ್ ಪೋಸ್ಟ್ ಭರ್ತಿ ಮಾಡಲು ಅರ್ಜಿ ಕರೆದಿದ್ದೇವೆ. 596 ಖಾಲಿ ಹುದ್ದೆಗಳಿವೆ. ಸಿಎಂ ಅದನ್ನ ಭರ್ತಿ ಮಾಡಲು ಸೂಚಿಸಿದ್ದಾರೆ ಎಂದು ತಿಳಿಸಿದರು.
Revenue Minister Krishna Byre Gowda visited Hubballi on Saturday and shocked the officials. Revenue Minister Krishna Byre Gowda was on a visit to Belagavi as scheduled. However, on his way to Belagavi, the minister made a surprise visit to hubballi tehsil office and sub-registrar's office.
27-08-25 03:17 pm
HK News Desk
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm